ಸಕಲೇಶಪುರ : ಪಟ್ಟಣ ಪುರಸಭೆಯ ಮುಖ್ಯಾಧಿಕಾರಿಯ ಕಛೆರಿಗೆ ವ್ಯಕ್ತಿಯೊಬ್ಬರು ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ನಡೆದಿದೆ.
ಶುಕ್ರವಾರ ಸಂಜೆ 4 ಗಂಟೆ ಸಮಯದಲ್ಲಿ ವ್ಯಕ್ತಿಯೊಬ್ಬ ಪುರಸಭೆಯ ಮುಖ್ಯಾಧಿಕಾರಿ ಕಛೇರಿಯಲ್ಲಿ ಯಾರು ಇಲ್ಲದ ಸಮಯ ನೋಡಿ ಕೊಠಡಿಗೆ ನುಗ್ಗಿ ಬೆಂಕಿ ಇಟ್ಟು ಪರಾರಿಯಾಗಿದ್ದಾನೆ.
ಕೊಠಡಿಯಿಂದ ಹೊಗೆ ಬರುತಿದ್ದನ್ನು ಕಂಡ ಸಿಬ್ಬಂದಿಗಳು ತಕ್ಷಣ ನೀರು ಹಾಕಿ ಬೆಂಕಿಯನ್ನು ನಂದಿಸಿ ಹೆಚ್ಚಿನ ಯಾವುದೇ ದೊಡ್ಡ ಪ್ರಮಾದ ಆಗದಂತೆ ತಡೆದಿದ್ದಾರೆ.
ಕೆಲ ದಾಖಲೆ ಪತ್ರ ಗಳು ಸುಟ್ಟು ಕರಕಾಲಗಿದೆ. ವ್ಯಕ್ತಿಯೊಬ್ಬ ಕುಡಿದ ಅಮಲಿನಲ್ಲಿ ಮಧ್ಯಾಹ್ನದಿಂದ ಕಛೇರಿಯ ಆವರಣದಲ್ಲಿ ಮುಖ್ಯಾಧಿಖಾರಿಗಳಿಗೆ ಬೈಯುತ್ತಾ ತೀರುಗಾಡುತಿದ್ದ ಆತನೆ ಇರಬಹುದೆಂದು ಶಂಕಿಸಲಾಗಿದೆ.
ಪುರಸಭೆ ಮುಖ್ಯಾಧಿಕಾರಿ ಹಾಗೂ ಪುರಸಭೆ ಸದಸ್ಯರ ತಂಡ ತರಬೇತಿ ಪ್ರವಾಸಕ್ಕೆ ಗೋವಾ ಕ್ಕೆ ಹೊಗಿದ್ದು ಯಾರು ಇಲ್ಲದ ಈ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು ಹಲವು ಅನುಮಾನಗಳಿಗೆ ಕಾರಣ ವಾಗಿದೆ ಪೊಲಿಸರು ಈ ಬಗ್ಗೆ ಪ್ರಕರಣ ದಾಖಲಿಸಿದ್ದು ವ್ಯಕ್ತಿಯನ್ನು ಪತ್ತೆ ಹಚ್ಚವಲ್ಲಿ ತನಿಖೆ ಕೈ ಗೊಂಡಿದ್ದಾರೆ.










