15.2 C
Munich
Home ಕ್ರೈಮ್‌ ಚಿಕ್ಕಮಗಳೂರು: ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಹಿನ್ನೆಲೆ- ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷನ ವಿರುದ್ಧ ಪ್ರಕರಣ ದಾಖಲು.

ಚಿಕ್ಕಮಗಳೂರು: ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಹಿನ್ನೆಲೆ- ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷನ ವಿರುದ್ಧ ಪ್ರಕರಣ ದಾಖಲು.

ಚಿಕ್ಕಮಗಳೂರು:ಬಿಜೆಪಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಹಾಗೂ ಹಾಸನ ವಿಭಾಗದ ಭಜರಂಗದಳ ಸಹಸಂಚಾಲಕನ ವಿರುದ್ಧ ಚಿಕ್ಕಮಗಳೂರು ನಗರ ಠಾಣೆಯಲ್ಲಿ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿದ್ದಾರೆ.

ಸಂತೋಷ್, ಶಾಮ್ ಸೇರಿದಂತೆ ಒಟ್ಟು ಐವರ ವಿರುದ್ಧ ಪ್ರಕರಣ ದಾಖಲಾಗಿದೆ.

ಮೊನ್ನೆ ಚಿಕ್ಕಮಗಳೂರು ನಗರದಲ್ಲಿ ಗೋ ಹತ್ಯೆ ಖಂಡಿಸಿ ಹಿಂದೂ ಕಾರ್ಯಕರ್ತರು ನಡೆಸಿದ್ದ ಬೃಹತ್ ಪ್ರತಿಭಟನೆ ಬಳಿಕ ಪೋಸ್ಟ್ ವೈರಲ್ ಆಗಿತ್ತು.

ಪೋಸ್ಟ್‌ನಲ್ಲಿ —

“ಬಲಿಗೆ ಹಸಿದಿಹ ಶಸ್ತ್ರ ಹಿಡಿಯುತ ಗೋ ಹಂತಕರೆದೆಯ ಸೀಳಿರಿ… ಗೋಮಾತೆ ರಕ್ಷಣೆಗೆ ಹಿಂದೂಗಳೇ ಒಂದಾಗಿ ಬನ್ನಿ” ಎಂದು ಬರೆದಿದ್ದು,
ಖಡ್ಗದ ಚಿತ್ರವೊಂದನ್ನೂ ಸೇರಿಸಲಾಗಿತ್ತು.

ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು,
ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ.

📍 ನಗರ ಠಾಣೆ ಪೊಲೀಸರು ಪ್ರಕರಣ ತನಿಖೆ ನಡೆಸುತ್ತಿದ್ದಾರೆ.

error: Content is protected !!