12.9 C
Munich
Home ಜಿಲ್ಲೆ ಹಾಸನಾಂಬ ದರ್ಶನಕ್ಕೆ ಭಕ್ತರ ಪ್ರವಾಹ: ಒಳ ಆವರಣದ ಜನಸಂದಣಿ ನಿಭಾಯಿಸಲು ಸಿದ್ದೇಶ್ವರ ಸ್ವಾಮಿ ದೇವಾಲಯ ಬಂದ್

ಹಾಸನಾಂಬ ದರ್ಶನಕ್ಕೆ ಭಕ್ತರ ಪ್ರವಾಹ: ಒಳ ಆವರಣದ ಜನಸಂದಣಿ ನಿಭಾಯಿಸಲು ಸಿದ್ದೇಶ್ವರ ಸ್ವಾಮಿ ದೇವಾಲಯ ಬಂದ್

ಹಾಸನ: ಅಧಿದೇವತೆ ಹಾಸನಾಂಬ ಹಾಗೂ ಸಿದ್ದೇಶ್ವರ ಸ್ವಾಮಿ ದರ್ಶನಕ್ಕೆ ವಿಪರೀತ ಸಂಖ್ಯೆಯಲ್ಲಿ ಭಕ್ತರು ಬರುತ್ತಿರುವುದರಿಂದ ತಾತ್ಕಾಲಿಕವಾಗಿ ಸಿದ್ದೇಶ್ವರ ಸ್ವಾಮಿ ದೇವಾಲಯದ ಬಾಗಿಲು ಬಂದ್ ಮಾಡಲಾಗಿದೆ.

ಕಳೆದ ಶುಕ್ರವಾರದಿಂದ ಜಾತ್ರಾ ಮಹೋತ್ಸವ ಶುರುವಾಗಿದೆ. ಈ ವರೆಗೆ ಅಂದಾಜು 8 ಲಕ್ಷ ಭಕ್ತರು ಭೇಟಿ ನೀಡಿದ್ದಾರೆ. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬರಲಿದ್ದಾರೆ.

ಸಿನಿಮಾ ನಟ, ನಟಿಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆ. ಸುಗಮ ದರ್ಶನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದರು ಜನಸಂಖ್ಯೆ ಹೆಚ್ಚಾದ ಹಿನ್ನೆಲೆ ಸಿದ್ದೇಶ್ವರ ಸ್ವಾಮಿ ದರ್ಶನ ಬಂದ್ ಮಾಡಿ ಹಾಸನಾಂಬೆ ಗುಡಿಯಿಂದ ಸರದಿ ಸಾಲಿನಲ್ಲಿ ಮುಂದಕ್ಕೆ ಕಳುಹಿಸಲಾಗುತ್ತಿದೆ.

error: Content is protected !!