0.5 C
Munich
Home ಜಿಲ್ಲೆ ಹಾಸನ ಜಿಲ್ಲಾ ಬಾಲಕರ ಖೋ-ಖೋ ತಂಡಗಳು ರಾಜ್ಯ ಮಟ್ಟಕ್ಕೆ ಆಯ್ಕೆ

ಹಾಸನ ಜಿಲ್ಲಾ ಬಾಲಕರ ಖೋ-ಖೋ ತಂಡಗಳು ರಾಜ್ಯ ಮಟ್ಟಕ್ಕೆ ಆಯ್ಕೆ

The boys' teams from Hassan district have secured first place in the Mysore Division-level Kho-Kho tournament for the 14- and 17-year-old age groups organized by the School Education and Literacy Department at Malemahadeshwara Hill in Hanur taluk of Chamarajanagar district and have been selected for the state level.

ಚನ್ನರಾಯಪಟ್ಟಣ: ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಆಯೋಜಿಸಿದ್ದ14ವರ್ಷ ಹಾಗೂ 17ವರ್ಷ ವಯೋಮಾನದ ಮೈಸೂರು ವಿಭಾಗ ಮಟ್ಟದ ಖೋ-ಖೋ ಪಂದ್ಯಾವಳಿಯಲ್ಲಿ ಹಾಸನ ಜಿಲ್ಲೆಯ ಬಾಲಕರ ತಂಡಗಳು ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿವೆ.

14ರ ವಯೋಮಿತಿಯಲ್ಲಿ ಪ್ರಥಮ ಸ್ಥಾನ ಪಡೆದ ತಾಲ್ಲೂಕಿನ ಗೂರಮಾರನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಟ್ರೋಪಿಯನ್ನು ತನ್ನದಾಗಿಸಿಕೊಂಡಿದೆ. 14ರ ವಯೋಮಿತಿಯ ಬಾಲಕರ ತಂಡದಲ್ಲಿ ಮೊರಾರ್ಜಿ ಶಾಲೆಯ ವಿದ್ಯಾರ್ಥಿಗಳಾದ ದಿಗಂತ್, ತನುಷ್ ಗೌಡ, ಸುಜಿತ್, ಮನೋಜ್, ಕಿಶೋರ್, ಚೇತನ್, ಧುವನ್, ಕುಂದೂರು ಮಠ ಮೊರಾರ್ಜಿ ಶಾಲೆಯ ವಿದ್ಯಾರ್ಥಿಗಳಾದ ಉಮೇಶ್ ಗೌಡ, ಮನೋಜ್, ಬೇಲೂರು ತಾಲ್ಲೂಕಿನ ಹಲ್ಮಿಡಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಾದ ಹೃತಿಕ್, ಧನುಷ್, ಹಳೇಬೀಡಿನ ಶಾರದ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿ ಲೋಹಿತ್ ಪ್ರತಿನಿಧಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

17ವರ್ಷ ವಯೋಮಿತಿಯ ವಿಜೇತ ತಂಡದಲ್ಲಿ ತಾಲ್ಲೂಕಿನ ವಸತಿ ಶಾಲೆಗಳ ವಿದ್ಯಾರ್ಥಿಗಳಾದ ರೋಹಿತ್ ಕೆ.ಕೆ, ಸೃಜನ್ ಗೌಡ ಎ ಎಸ್ ಹಾಗೂ ಬಾಸ್ಕರ್ ಹೆಗ್ಗಡೆ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿಜೇತ ವಿದ್ಯಾರ್ಥಿಗಳನ್ನು ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ದೀಪಾ ಹೆಚ್ ಎನ್, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಆನಂದ್ ಕೆ.ಟಿ, ವಸತಿ ಶಾಲೆಯ ಪ್ರಾಂಶುಪಾಲರಾದ ಶೈಲಜ ಹೆಚ್ ಜಿ, ನಿಲಯಪಾಲಕ ಗಂಗಾಧರ್ ಹೆಚ್ ಜೆ, ದೈಹಿಕ ಶಿಕ್ಷಣ ಶಿಕ್ಷಕ ಚಂದ್ರೇಗೌಡ ಹೆಚ್ ಎಂ, ತಂಡದ ವ್ಯವಸ್ಥಾಪಕ ಶಂಕರ್ ಡಿ, ತರಬೇತುದಾರಾದ ಯಲ್ಲಪ್ಪ ಎಸ್ ಮಾಂಗ್ ಹಾಗೂ ಎಲ್ಲಾ ಸಿಬ್ಬಂದಿವರ್ಗದವರು ಅಭಿನಂದಿಸಿ ಇದೇ ತಿಂಗಳ 25ರಂದು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಶುಭ ಕೋರಿದರು.

error: Content is protected !!