4.2 C
Munich
Home News ಸಕಲೇಶಪುರ ನಗರ ಪೊಲೀಸ್ ಇನ್ಸ್ ಪೆಕ್ಟರ್ ಜಗದೀಶ್ ವರ್ಗಾವಣೆ – ಸಿಬ್ಬಂದಿಯಿಂದ ಹೃದಯಸ್ಪರ್ಶಿ ಬೀಳ್ಕೊಡುಗೆ

ಸಕಲೇಶಪುರ ನಗರ ಪೊಲೀಸ್ ಇನ್ಸ್ ಪೆಕ್ಟರ್ ಜಗದೀಶ್ ವರ್ಗಾವಣೆ – ಸಿಬ್ಬಂದಿಯಿಂದ ಹೃದಯಸ್ಪರ್ಶಿ ಬೀಳ್ಕೊಡುಗೆ

Jagadish, who was working as a police inspector at the city station, was sent off by the staff after being transferred with flowers.

ಸಕಲೇಶಪುರ: ನಗರ ಠಾಣೆ ಪೋಲಿಸ್ ಇನ್ಸ್ ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಜಗದೀಶ್ ರವರು ವರ್ಗಾವಣೆಯಾದ ಹಿನ್ನೆಲೆಯಲ್ಲಿ ಸಿಬ್ಬಂದಿಗಳು ಅವರಿಗೆ ಹೂವು ಎರಚಿ ಬೀಳ್ಕೋಡುಗೆ ಕೊಟ್ಟಿರುತ್ತಾರೆ. ನಗರ ಪೋಲಿಸ್ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಜಗದೀಶ್ ಅತ್ಯಂತ ಪ್ರಾಮಾಣಿಕ ಅಧಿಕಾರಿಯೆಂದು ಹೆಸರು ಮಾಡಿದ್ದರು.

ಸತತವಾಗಿ 2 ವರ್ಷ ಸೇವೆ ಸಕಲೇಶಪುರ ನಗರ ಠಾಣೆಯಲ್ಲಿ ಸೇವೆ ಸಲ್ಲಿಸಿದ್ದ ಅವರು ಅಕ್ರಮ ಮರಳುಗಾರಿಕೆಗೆ ಸಂಪೂರ್ಣವಾಗಿ ತಡೆಒಡ್ಡಿದ್ದಲ್ಲದೆ ಸಂಚಾರ ನಿಯಮಗಳನ್ನು ಉಲ್ಲಂಘಿಸಿದವರಿಂದ ಸುಮಾರು 70ಲಕ್ಷ ದಂಡವನ್ನು ಸಂಗ್ರಹಿಸಿ ಸರ್ಕಾರಕ್ಕೆ ಆದಾಯ ಬರುವಂತೆ ಮಾಡಿದ್ದರು.

ಪಟ್ಟಣದಲ್ಲಿ ಯಾವುದೇ ರೀತಿಯ ದೊಡ್ಡ ಮಟ್ಟದ ಗಲಭೆಗಳು ಉಂಟಾಗದಂತೆ ಬಿಗಿ ಕ್ರಮ ಕೈಗೊಂಡಿದ್ದರು. ಇದೀಗ ಚಾಮರಾಜನಗರ ನಗರ ಠಾಣೆಗೆ ವರ್ಗಾವಣೆಗೊಂಡಿದ್ದು ಇಂದು ನೂತನ ಇನ್ಸ್ ಪೆಕ್ಟರ್ ವನರಾಜ್ ರವರಿಗೆ ಅಧಿಕಾರ ಹಸ್ತಾಂತರ ಮಾಡಿದರು.

error: Content is protected !!