13.5 C
Munich
Home ಜಿಲ್ಲೆ ಚಿಕ್ಕಮಗಳೂರು ಚಿಕ್ಕಮಗಳೂರು: ದೇವಿರಮ್ಮ ಉತ್ಸವ- ಇದೇ ಮೊದಲ ಬಾರಿಗೆ ಎರಡು ದಿನಗಳು ಗುಡ್ಡ ಏರಿ ದರ್ಶನ ಪಡೆಯಲು...

ಚಿಕ್ಕಮಗಳೂರು: ದೇವಿರಮ್ಮ ಉತ್ಸವ- ಇದೇ ಮೊದಲ ಬಾರಿಗೆ ಎರಡು ದಿನಗಳು ಗುಡ್ಡ ಏರಿ ದರ್ಶನ ಪಡೆಯಲು ಅವಕಾಶ ನೀಡಿದ ಜಿಲ್ಲಾಡಳಿತ

ಚಿಕ್ಕಮಗಳೂರು : ಬಿಂಡಿಗಾ ಶ್ರೀ ದೇವಿರಮ್ಮ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವವು ಅಕ್ಟೋಬರ್‌ 19ರಿಂದ 23ರವರೆಗೆ ನಡೆಯಲಿದ್ದು, ಇದೇ ಮೊದಲ ಬಾರಿಗೆ ದೇವಿಯ ದರ್ಶನಕ್ಕೆ ಗುಡ್ಡದ ತುದಿಗೆ ಏರಲು  ಎರಡು ದಿನಗಳು (ಅಕ್ಟೋಬರ್‌ 19 ಮತ್ತು 20) ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳ ಕಚೇರಿಯಿಂದ ಹೊರಡಿಸಿದ ಸಲಹಾ ನೋಟ್ ನಲ್ಲಿ ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಮಳೆ ಹಾಗೂ ಜನಸಂದಣಿ ಹಿನ್ನಲೆಯಲ್ಲಿ ಭದ್ರತೆ ದೃಷ್ಟಿಯಿಂದ ಕ್ರಮ ಕೈಗೊಳ್ಳಲಾಗಿದೆ.

👉 15 ವರ್ಷ ಮೇಲ್ಪಟ್ಟ ಹಾಗೂ 60 ವರ್ಷದೊಳಗಿನ ಭಕ್ತರು ಮಾತ್ರ ಈ ಎರಡು ದಿನಗಳಲ್ಲಿ ಗುಡ್ಡದ ತುದಿಗೆ ಏರಲು ಅವಕಾಶ.
👉 ಮುಳ್ಳಯ್ಯನಗಿರಿ, ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ, ಗಾಳಿಕೆರೆ ಹಾಗೂ ಮಾಣಿಕ್ಯಧಾರಾ ಪ್ರದೇಶಗಳಿಗೆ ಅಕ್ಟೋಬರ್‌ 19 ಬೆಳಿಗ್ಗೆ 6 ರಿಂದ ಅಕ್ಟೋಬರ್‌ 20 ಬೆಳಿಗ್ಗೆ 6 ಗಂಟೆಯವರೆಗೆ ಪ್ರವಾಸಿಗರಿಗೆ ಪ್ರವೇಶ ನಿಷೇಧ.
👉 ಭಕ್ತರು ವಾಹನಗಳನ್ನು ಚಿಕ್ಕಮಗಳೂರಿನ ನಿಗದಿತ ಸ್ಥಳಗಳಲ್ಲಿ (ಐ.ಜಿ ರಸ್ತೆ, ಎಮ್.ಜಿ ರಸ್ತೆ, ಪಾಲಿಟೆಕ್ನಿಕ್ ಮೈದಾನ) ಪಾರ್ಕ್ ಮಾಡಿ ಬಿಂಡಿಗಾ ಗ್ರಾಮಕ್ಕೆ ಸಾರ್ವಜನಿಕ ಸಾರಿಗೆಯ ಬಸ್ಸುಗಳಲ್ಲಿ ಪ್ರಯಾಣಿಸಲು ಸೂಚನೆ.
👉 ತರೀಕೆರೆಯಿಂದ ಬರುವ ಭಕ್ತರು ಲಿಂಗದಹಳ್ಳಿ ಮಾರ್ಗವಾಗಿ ಬಂದು ಕುಮಾರಗಿರಿಯಲ್ಲಿ ವಾಹನ ಪಾರ್ಕ್ ಮಾಡಬೇಕು.
👉 ಯಾವುದೇ ಕಾರಣಕ್ಕೂ ರಸ್ತೆಯ ಬದಿಯಲ್ಲಿ ವಾಹನ ನಿಲ್ಲಿಸುವಂತಿಲ್ಲ.

ಜಿಲ್ಲಾಡಳಿತವು ಭಕ್ತರು ಹಾಗೂ ಪ್ರವಾಸಿಗರು ಶಿಸ್ತು ಮತ್ತು ಸುರಕ್ಷತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಕೋರಿದೆ.

error: Content is protected !!