11.1 C
Munich
Home ಜಿಲ್ಲೆ ಸಕಲೇಶಪುರದಲ್ಲಿ ಕಾಂತಾರ ಚಿತ್ರ ವೀಕ್ಷಣೆಗೂ ವಿಐಪಿ ಕಾಟ: ಟಿಕೆಟ್ ಸಿಗದೆ ಸಾಮಾನ್ಯ ಪ್ರೇಕ್ಷಕರ ಪರದಾಟ!

ಸಕಲೇಶಪುರದಲ್ಲಿ ಕಾಂತಾರ ಚಿತ್ರ ವೀಕ್ಷಣೆಗೂ ವಿಐಪಿ ಕಾಟ: ಟಿಕೆಟ್ ಸಿಗದೆ ಸಾಮಾನ್ಯ ಪ್ರೇಕ್ಷಕರ ಪರದಾಟ!

 ಸಕಲೇಶಪುರ: ರಿಷಭ್ ಶೆಟ್ಟಿ ನಿರ್ದೇಶನದ ‘ಕಾಂತಾರ–೧’ ಚಿತ್ರದ ಕ್ರೇಜ್ ಸಕಲೇಶಪುರ ಪಟ್ಟಣದಲ್ಲೂ ತೀವ್ರತೆಯ ತುತ್ತ ತುದಿಗೆ ತಲುಪಿದ್ದು, ಟಿಕೆಟ್ ಸಿಗದೆ ಜನರು ಪರದಾಡುವಂತಾಗಿದೆ.

ಸೋಮವಾರ ಸಂಜೆ 4.30ರ ಶೋಗೆ ಟಿಕೆಟ್ ಪಡೆಯಲು ಪಟ್ಟಣದ ತೇಜಸ್ವಿ ಚಿತ್ರಮಂದಿರದ ಮುಂದೆ ನೂರಾರು ಜನರು ಸಾಲಿನಲ್ಲಿ ನಿಂತಿದ್ದರು.

ಅದರಲ್ಲೂ ಮಹಿಳೆಯರು, ಯುವಕರು, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ದೊಡ್ಡ ಪ್ರಮಾಣದ ಅಭಿಮಾನಿಗಳು ಮಧ್ಯಾಹ್ನ 2.30ರಿಂದಲೇ ಚಿತ್ರಮಂದಿರದ ಮುಂದೆ ನಿಂತು ಟಿಕೆಟ್ ನಿರೀಕ್ಷಿಸುತ್ತಿದ್ದರು.

ಆದರೆ, ಚಿತ್ರಮಂದಿರದ ಸಿಬ್ಬಂದಿ “ಬಾಲ್ಕನಿ ಟಿಕೆಟ್ ಫುಲ್” ಎಂದು ಬೋರ್ಡ್ ಹಾಕಿ, ಟಿಕೆಟ್ ನೀಡುವುದನ್ನು ನಿಲ್ಲಿಸಿದರು. ಇದರಿಂದ ಕೋಪಗೊಂಡ ಜನರು ಸಿಬ್ಬಂದಿಯನ್ನು ಪ್ರಶ್ನಿಸಿದಾಗ, “ಒಬ್ಬ ವಿಐಪಿ ಎಲ್ಲ ಬಾಲ್ಕನಿ ಟಿಕೆಟ್‌ಗಳನ್ನು ಬುಕ್ ಮಾಡಿದ್ದಾರೆ” ಎಂಬ ಸಮಜಾಯಿಷಿ ನೀಡಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.

ಇದೇ ವೇಳೆ, ಕೆಲವರು “ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡಿದ್ದಾರೆ” ಎಂಬ ಸಿಬ್ಬಂದಿಯ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದು, ತೇಜಸ್ವಿ ಚಿತ್ರಮಂದಿರದಲ್ಲಿ ಆನ್‌ಲೈನ್ ಬುಕ್ಕಿಂಗ್ ಸೌಲಭ್ಯವೇ ಇಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿತ್ರದ ಕ್ರೇಜ್‌ನ ಪರಿಣಾಮವಾಗಿ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಜನರನ್ನು ಶಾಂತಗೊಳಿಸಿದರು. ಸಕಲೇಶಪುರ ಪಟ್ಟಣದಲ್ಲಿ ಕಾಂತಾರ–೧ ಚಿತ್ರದ ಹೌಸ್‌ಫುಲ್ ಶೋಗಳು ಮುಂದುವರಿದಿದ್ದು, ಮುಂದಿನ ದಿನಗಳಲ್ಲೂ ಟಿಕೆಟ್‌ಗಾಗಿ ಪರದಾಟ ಮುಂದುವರಿಯುವ ಸಾಧ್ಯತೆ ಇದೆ.

error: Content is protected !!