5.9 C
Munich
Home ಜಿಲ್ಲೆ ಹಾಸನ: ಜಿಲ್ಲಾ ಖಜಾನೆಯಿಂದ ದೇವಾಲಯ ಸೇರಿದ ಹಾಸನಾಂಬೆ ಆಭರಣಗಳು: ಪಲ್ಲಕ್ಕಿ ಮೆರವಣಿಗೆ, ಶಾಸ್ತ್ರೋಕ್ತ ಪೂಜೆಯೊಂದಿಗೆ ರವಾನೆ

ಹಾಸನ: ಜಿಲ್ಲಾ ಖಜಾನೆಯಿಂದ ದೇವಾಲಯ ಸೇರಿದ ಹಾಸನಾಂಬೆ ಆಭರಣಗಳು: ಪಲ್ಲಕ್ಕಿ ಮೆರವಣಿಗೆ, ಶಾಸ್ತ್ರೋಕ್ತ ಪೂಜೆಯೊಂದಿಗೆ ರವಾನೆ

ಹಾಸನ: ನಗರದ ಅಧಿದೇವತೆ ಹಾಸನಾಂಬ ದೇವಿ ಜಾತ್ರಾ ಮಹೋತ್ಸವ ಅಕ್ಟೋಬರ್‌ 9ರಿಂದ 23ರವರೆಗೆ ವಿಜೃಂಭಣೆಯಿಂದ ನಡೆಯಲಿದೆ. ಜಾತ್ರೆಯ ಪೂರ್ವಭಾವಿ ತಯಾರಿಗಳು ಇಂದು ಪೂರ್ಣಗೊಂಡಿದ್ದು, ಜಿಲ್ಲಾ ಖಜಾನೆಯಿಂದ ದೇವಿಯ  ಒಡವೆಗಳನ್ನು ಶಾಸ್ತ್ರೋಕ್ತ ಪೂಜಾ ವಿಧಿವಿಧಾನಗಳನ್ವಯ ಕೊಂಡೊಯ್ಯಲಾಯಿತು.

ಇಂದು ಬೆಳಿಗ್ಗೆ ಸಾಲಗಾಮೆ ರಸ್ತೆಯಲ್ಲಿರುವ ಜಿಲ್ಲಾ ಖಜಾನೆ ಕಚೇರಿಯಿಂದ ದೇವಿಯ ಒಡವೆಗಳ ಪೆಟ್ಟಿಗೆಗಳಿಗೆ ಪೂಜೆ ಸಲ್ಲಿಸಿ ರವಾನಿಸಲಾಯಿತು.

ಈ ಸಂದರ್ಭದಲ್ಲಿ ಹಾಸನ ತಹಸೀಲ್ದಾರ್ ಗೀತಾ ಅವರು ಪೂಜಾ ವಿಧಿಗಳನ್ನು ನೆರವೇರಿಸಿದರು.

ನಂತರ ಮಂಗಳವಾದ್ಯಗಳ ನಾದ, ಭಜನೆ, ಹಾಗೂ ಭಕ್ತರ ಹರ್ಷೋದ್ಗಾರಗಳ ಮಧ್ಯೆ ಬೆಳ್ಳಿ ರಥದಲ್ಲಿ ಒಡವೆಗಳ ಮೆರವಣಿಗೆ ಹಾಸನಾಂಬ ದೇವಾಲಯದತ್ತ ಸಾಗಿತು.

ಹಾಸನಾಂಬ ದೇವಾಲಯದ ಪ್ರಧಾನ ಅರ್ಚಕ ನಾಗರಾಜ್ ಅವರ ನೇತೃತ್ವದಲ್ಲಿ ಅರ್ಚಕರು ಒಡವೆಗಳನ್ನು ದೇವಾಲಯದೊಳಗೆ ತಗೆದುಕೊಂಡು ಹೋದರು.

ಒಡವೆಗಳನ್ನು ಸುರಕ್ಷಿತವಾಗಿ ಗರ್ಭಗುಡಿಗೆ ತಲುಪಿಸಿದ ಬಳಿಕ ವಿಶೇಷ ಪೂಜಾ ವಿಧಿಗಳು ನೆರವೇರಿಸಲಾಯಿತು.

ದೇವಾಲಯದ ಗರ್ಭಗುಡಿ ಬಾಗಿಲು ಅಕ್ಟೋಬರ್ 9ರ ಗುರುವಾರ ಬೆಳಿಗ್ಗೆ ಭಕ್ತರ ದರ್ಶನಕ್ಕೆ ತೆರೆಯಲಿದ್ದು, ಅಕ್ಟೋಬರ್ 23ರವರೆಗೆ ನಡೆಯುವ ಮಹೋತ್ಸವದ ಅವಧಿಯಲ್ಲಿ ಸಾವಿರಾರು ಭಕ್ತರು ತಾಯಿ ಹಾಸನಾಂಬೆಯ ದರ್ಶನ ಪಡೆಯಲಿದ್ದಾರೆ.

error: Content is protected !!