ಹಾಸನ: ಗುಡ್ ಸಿಟಿಜನ್ ಕಾಲೇಜಿನಲ್ಲಿ ಆಯುಧ ಪೂಜೆ ಸಂಭ್ರಮ

The Ayudha Puja program was celebrated with great pomp and show at the Good Citizen Pre-Graduate and Graduate College in the city on Wednesday.

ಹಾಸನ : ನಗರದ ಗುಡ್ ಸಿಟಿಜನ್ ಪದವಿ ಪೂರ್ವ ಮತ್ತು ಪದವಿ ಕಾಲೇಜಿನಲ್ಲಿ ಬುಧವಾರ ಆಯುಧ ಪೂಜೆ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮೊದಲಿಗೆ ವಿಘ್ನ ವಿನಾಯಕನ ಪೂಜೆ ನೆರವೇರಿಸಿ ಬಳಿಕ ಕಾಲೇಜಿನ ಆಡಳಿತ ಕಚೇರಿ, ಪ್ರಾಂಶುಪಾಲರ ಕಚೇರಿ ಹಾಗೂ ಎಲ್ಲಾ ವಿಭಾಗದ ಕಚೇರಿಗಳಲ್ಲಿ ಪೂಜೆ ನಡೆಯಿತು.

ಈ ಸಂದರ್ಭದಲ್ಲಿ ಪದವಿ ಕಾಲೇಜಿನ ಪ್ರಾಂಶುಪಾಲ ಶ್ರೀ ಕಾಂತರಾಜು, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶ್ರೀ ಹೇಮಂತ್ ಕುಮಾರ್, ಉಪನ್ಯಾಸಕರಾದ ಸತೀಶ್, ಕೃಷ್ಣರಾಜು, ಶ್ರೀನಿವಾಸ್, ದಿಲೀಪ್, ಶ್ರೀಮತಿ ಸ್ವಪ್ನ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಪೂಜೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.