ಸಕಲೇಶಪುರ : ತಾಲ್ಲೂಕಿನ ಹಾನುಬಾಳು ಹೋಬಳಿಯ ಕಾಡುಮನೆ ಸಮೀಪದ ಮಾವಿನ ಮರ ಗ್ರಾಮದ ಅವೀನ್ ಎಂ. ಕೆ. ಎಂಬುವವರ ಕಾಫಿ ತೋಟದಲ್ಲಿ ಸುಮಾರು 10 ಅಡಿ ಉದ್ದವಿರುವ ಭಾರಿ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದ್ದು ಈ ಹಿನ್ನೆಲೆಯಲ್ಲಿ ತೋಟದ ಮಾಲೀಕರು ಸಕಲೇಶಪುರ ಪಟ್ಟಣದ ಉರಗ ತಜ್ಞ ದಸ್ತಗೀರ್ ರವರಿಗೆ ತಿಳಿಸಿದ್ದಾರೆ.
ಸ್ಥಳಕ್ಕೆ ಬಂದ ದಸ್ತಗೀರ್ ಮತ್ತು ಅವರ ತಂಡ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ಮಾಡಿ ಬೃಹತ್ ಗಾತ್ರದ ಹೆಬ್ಬಾವನ್ನು ಸೆರೆಹಿಡಿದು ಮಲ್ಲಗದ್ದೆ ಸಮೀಪದ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಡಲಾಯಿತು.
ಉರಗ ತಜ್ಞರು ಹಾವುಗಳನ್ನು ಸೆರೆಹಿಡಿಯುವಾಗ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕೆಂದು ಸಕಲೇಶಪುರ ಉಪವಲಯ ಅಧಿಕಾರಿ ಹೇಮಂತ್ ತಿಳಿಸಿದ್ದಾರೆ.










