ಚನ್ನರಾಯಪಟ್ಟಣ: ತಾಲ್ಲೂಕಿನ ಬಿಜೆಪಿ ಮಾಜಿ ಅಧ್ಯಕ್ಷ ದಮ್ಮನಿಂಗಲ ಗ್ರಾಮದ ಡಿ.ಎಂ.ರವಿ ಅವರನ್ನು ಶ್ರವಣಬೆಳಗೊಳ ಪೊಲೀಸರು ಸೋಮವಾರ ಬಂಧಿಸಿ ನಂತರ ಬಿಡುಗಡೆ ಮಾಡಿದರು.
ಮೈಸೂರಿನಲ್ಲಿ ನಡೆಯುವ ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾನು ಮುಸ್ತಾಕ್ ರವರು ದಸರಾ ಉದ್ಘಾಟನೆ ಮಾಡದಂತೆ ಪ್ರತಿಭಟನೆ ಮಾಡಲು ತಾವು ಮೈಸೂರಿಗೆ ಹೋಗುತ್ತಿರುವುದಾಗಿ ಸೋಸಿಯಲ್ ಮೀಡಿಯಾದಲ್ಲಿ ಡಿ.ಎಂ.ರವಿ ಹೇಳಿಕೊಂಡಿದ್ದರು.
ದಸರಾ ಉದ್ಘಾಟನೆ ಮಾಡದಂತೆ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ ಹಾಗೂ ಸುಪ್ರೀಂಕೋರ್ಟ ವಜಾಗೊಳಿಸಿರುತ್ತದೆ. ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಪ್ರತಿಭಟನೆಗೆ ಮುಂದಾಗುವುದಾಗಿ ಡಿ.ಎಂ.ರವಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದರು.
ಪ್ರತಿಭಟನೆ ಮಾಡುವುದರಿಂದ ಸಾರ್ವಜನಿಕ ಶಾಂತಿ ಸುವ್ಯವಸ್ಥೆಗೆ ದಕ್ಕೆ ಉಂಟಾಗುತ್ತದೆ. ಸಾರ್ವಜನಿಕ ಆಸ್ತಿ-ಪಾಸ್ತಿಗೆ ನಷ್ಟ ಉಂಟಾಗುವ ಸಾಧ್ಯತೆ ಇದ್ದು ಸಂಜ್ಞೆಯ ಅಪರಾಧ ಮಾಡುವ ಸಾದ್ಯತೆ ಇದೆ ಎಂದು ತಿಳಿದು ಬಂದಿರುವುದರಿಂದ ಡಿ.ಎಂ.ರವಿ ಅವರನ್ನು ಸೆ.22 ರಂದು ಬೆಳಿಗ್ಗೆ 6 ಗಂಟೆಯಲ್ಲಿ ಕಲಂ 73 ಕರ್ನಾಟಕ ಪೊಲೀಸ್ ಆಕ್ಟ್ ರೀತ್ಯಾ ತಮ್ಮನ್ನು Preventive Arrest ಮಾಡಿದ್ದು ಮತ್ತೆ ಬೆಳಿಗ್ಗೆ 10.30 ಗಂಟೆಗೆ ಬಿಡುಗಡೆ ಮಾಡಲಾಯಿತು.










