10.3 C
Munich
Home News ಬೇಲೂರು: ಗಣೇಶ ವಿಗ್ರಹಕ್ಕೆ ಅವಮಾನ – ನಾಳೆ ಸ್ವಯಂಪ್ರೇರಿತ ಬೇಲೂರು ಬಂದ್ ಕರೆ, ಮುಂಜಾಗ್ರತಾ ಕ್ರಮವಾಗಿ...

ಬೇಲೂರು: ಗಣೇಶ ವಿಗ್ರಹಕ್ಕೆ ಅವಮಾನ – ನಾಳೆ ಸ್ವಯಂಪ್ರೇರಿತ ಬೇಲೂರು ಬಂದ್ ಕರೆ, ಮುಂಜಾಗ್ರತಾ ಕ್ರಮವಾಗಿ ಬಿಗಿ ಬಂದೋಬಸ್ತ್

A voluntary bandh has been called in Belur town tomorrow (September 22) in response to the incident of insulting a Ganesh idol by placing slippers on it.

ಬೇಲೂರು : ಪಟ್ಟಣದಲ್ಲಿ ಗಣೇಶ ವಿಗ್ರಹದ ಮೇಲೆ ಚಪ್ಪಲಿ ಇರಿಸಿದ ಪ್ರಕರಣ ಖಂಡಿಸಿ ನಾಳೆ (ಸೆಪ್ಟೆಂಬರ್ 22) ಹಿಂದುಪರ ಸಂಘಟನೆಗಳು ಸ್ವಯಂಪ್ರೇರಿತ ಬೇಲೂರು ಬಂದ್‌ಗೆ ಕರೆ ನೀಡಿವೆ

ಈ ಬಂದ್‌ಗೆ ಬಿಜೆಪಿ, ವಿಶ್ವ ಹಿಂದೂ ಪರಿಷತ್ (VHP), ಬಜರಂಗದಳ ಸೇರಿದಂತೆ ಹಲವಾರು ಹಿಂದೂಪರ ಸಂಘಟನೆಗಳು ಬೆಂಬಲ ಘೋಷಿಸಿವೆ. ಮಾಜಿ ಸಚಿವ ಸಿ.ಟಿ. ರವಿ ಕೂಡ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಘಟನೆಯ ನಂತರ ಬೇಲೂರಿನಲ್ಲಿ ತೀವ್ರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪಟ್ಟಣದಲ್ಲಿ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

error: Content is protected !!