2.1 C
Munich
Home News ಹಾಸನ: ಮೊಸಳೆ ಹೊಸಹಳ್ಳಿ ‌ದುರಂತದಲ್ಲಿ‌ ಮಡಿದವರಿಗೆ ಹೆಚ್ಚಿನ ಪರಿಹಾರಕ್ಕೆ ಆಗ್ರಹ

ಹಾಸನ: ಮೊಸಳೆ ಹೊಸಹಳ್ಳಿ ‌ದುರಂತದಲ್ಲಿ‌ ಮಡಿದವರಿಗೆ ಹೆಚ್ಚಿನ ಪರಿಹಾರಕ್ಕೆ ಆಗ್ರಹ

ಹಾಸನ: ಮೊಸಳೆ ಹೊಸಳ್ಳಿ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ಮೊತ್ತ ಹೆಚ್ಚಳ ಮಾಡಬೇಕು ಎಂದು ವಿಧಾನಸಭೆ ಚುನಾವಣೆ ಪರಾಜಿತ ಬಿಜೆಪಿ ಅಭ್ಯರ್ಥಿ ಹಾಗೂ ವಕೀಲ ದೇವರಾಜೇಗೌಡ ಒತ್ತಾಯಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಮೃತಪಟ್ಟವರ ಕುಟುಂಬಗಳು ಬಹುತೇಕ ಬಡತನದ ಸ್ಥಿತಿಯಲ್ಲಿವೆ. ಅನೇಕರು ಸಾಲ ಮಾಡಿ ತಮ್ಮ ಮಕ್ಕಳನ್ನು ಓದಿಸುತ್ತಿದ್ದರು. ನೊಂದವರಿಗೆ ಸಾಂತ್ವನ ಹೇಳಬಹುದೇ ಹೊರತು, ಜೀವಗಳನ್ನು ಮರಳಿ ಕೊಡಲಾಗುವುದಿಲ್ಲ ಎಂದರು.

ಹಾಗಾಗಿ ಮೃತರ ಕುಟುಂಬಗಳಿಗೆ ೫೦ ಲಕ್ಷ ರೂ. ಪರಿಹಾರ ನೀಡಬೇಕು. ಗಾಯಾಳುಗಳಿಗೆ ೨೫ ಲಕ್ಷ ಕೊಡಬೇಕು. ಜೊತೆಗೆ ೨ ಎಕರೆ ಭೂಮಿ ಮಂಜೂರು ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ದುರಂತಕ್ಕೆ ಪೊಲೀಸರ ನಿರ್ಲಕ್ಷ್ಯವೇ ಪ್ರಮುಖ ಕಾರಣವಾಗಿದೆ. ಇದರ ಹೊಣೆಯನ್ನು ಸರ್ಕಾರವೂ ಹೊರಬೇಕು. ಕರ್ತವ್ಯಲೋಪ ಆರೋಪದಡಿ ಎಸ್ಪಿ ಹಾಗೂ ಅವರ ಅಧೀನದಲ್ಲಿರುವ ಅಧಿಕಾರಿಗಳು ಕೂಡಲೇ ಅಮಾನತು ಮಾಡಬೇಕು ಎಂದು ದೇವರಾಜೇಗೌಡ ಒತ್ತಾಯಿಸಿದರು.

ತಪ್ಪಿತಸ್ಥರ ಅಧಿಕಾರಿಗಳ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳದೇ ಹೋದರೆ ಹೈಕೋರ್ಟ್ನಲ್ಲಿ ಪಿಐಎಲ್ ಹಾಕುವುದಾಗಿ ಎಚ್ಚರಿಕೆ ನೀಡಿದರು.

error: Content is protected !!