14.6 C
Munich
Home ಮನರಂಜನೆ ‘ಗಾನಯೋಗಿ ಪಂಚಾಕ್ಷರಿ ಗವಾಯಿ’ ಸಿನಿಮಾ ತೆರೆಕಂಡು 30 ವರ್ಷ!

‘ಗಾನಯೋಗಿ ಪಂಚಾಕ್ಷರಿ ಗವಾಯಿ’ ಸಿನಿಮಾ ತೆರೆಕಂಡು 30 ವರ್ಷ!

'ಗಾನಯೋಗಿ ಪಂಚಾಕ್ಷರಿ ಗವಾಯಿ' ಸಿನಿಮಾ ತೆರೆಕಂಡು 30 ವರ್ಷ!

‘ಗಾನಯೋಗಿ ಪಂಚಾಕ್ಷರಿ ಗವಾಯಿ’ ಕನ್ನಡದ ಮಹತ್ವದ ಚಿತ್ರಗಳಲ್ಲೊಂದು. ಈ ಸಿನಿಮಾ ತೆರೆಕಂಡು ಈ ಹೊತ್ತಿಗೆ 30 ವರ್ಷ. ಈ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ಚಿಂದೋಡಿ ಬಂಗಾರೇಶ್‌ ಚಿತ್ರವನ್ನು ನೆನಪು ಮಾಡಿಕೊಂಡಿದ್ದಾರೆ. ಈ ಬಗ್ಗೆ ಅವರು ಮಾತನಾಡುತ್ತಾ, ‘ಈ ಹೊತ್ತಿಗೆ 30 ವರ್ಷವಾಯಿತು ಗಾನಯೋಗಿ ಪಂಚಾಕ್ಷರಿ ಗವಾಯಿ ಕನ್ನಡ ಚಿತ್ರ ಬಿಡುಗಡೆಯಾಗಿ. ಅಪೂರ್ವ ಚಿತ್ರವೆಂದು ಇಡೀ ನಾಡೇ ಸಂಭ್ರಮಿಸಿತು. ಇಂದಿಗೂ ಈ ಚಿತ್ರದ ಹಾಡುಗಳು ಜನಮಾನಸದಲ್ಲಿ ಅಚ್ಚಳಿಯದೆ ಗುಣು ಗುತ್ತಿವೆ. ಕರ್ನಾಟಕದ ಎಲ್ಲಾ ದೇವಾಲಯಗಳಲ್ಲಿ ಮಠಮಾನ್ಯದಲ್ಲಿ ನೀಡು ಶಿವ ನೀಡದಿರು ಶಿವ ಹಾಡು ಇಂದಿಗೂ ಜನಪ್ರಿಯವಾಗಿದೆ’ ಎಂದಿದ್ದಾರೆ.

ಈ ಸಿನಿಮಾದ ಸಂಗೀತ ಸಂಯೋಜನೆಗೆ ಹಂಸಲೇಖರಿಗೆ ಮತ್ತು ಗಾಯನಕ್ಕೆ ಎಸ್‌ ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ರಾಷ್ಟ್ರಪ್ರಶಸ್ತಿ ಗೌರವ ಲಭಿಸಿತು. ಇದನ್ನು ಸ್ಮರಿಸಿರುವ ಚಿಂದೋಡಿಯವರು, ‘ಪ್ರಥಮ ಬಾರಿಗೆ ಕನ್ನಡದಲ್ಲಿ ಎಸ್ ಪಿ ಬಾಲಸುಬ್ರಮಣ್ಯ ಅವರಿಗೆ ಹಾಗೂ ಪ್ರಥಮ ಬಾರಿಗೆ ಸಂಗೀತ ನಿರ್ದೇಶಕ ಹಂಸಲೇಖರವರೆಗೆ ರಾಷ್ಟ್ರಪ್ರಶಸ್ತಿ ತಂದಿದೆ. ನನ್ನ ನಿರ್ದೇಶನದ ಅಳಿಲು ಸೇವೆಗೆ ರಾಜ್ಯ ಪ್ರಶಸ್ತಿಯೂ ಬಂತು. ಈ ಚಿತ್ರದ ಯಶಸ್ಸಿಗೆ ಹಂಸಲೇಖ ಅವರ ಸಂಗೀತ ಕನ್ನಡನಾಡೇ ಎಂದೂ ಮರೆಯದ ಸಂಗೀತ ಸೇವೆಯಾಗಿದೆ. ಈ ಸಮಯದಲ್ಲಿ ನಿರ್ಮಾಪಕಿ ಪದ್ಮಶ್ರೀ ಚಿಂದೊಡಿ ಲೀಲಾ ರವರಿಗೂ, ನಟಿಸಿದ ಕಲಾವಿದರು, ತಂತ್ರಜ್ಞರಿಗೂ ಆಭಾರಿಯಾಗಿದ್ದೇನೆ. ಈ 30 ವರ್ಷದ ಸವಿ ನೆನಪಿಗಾಗಿ ಕನ್ನಡ ನಾಡಿನ ಕಣ್ಮಣಿಗಳಾದ ಎಸ್ಪಿಬಿ ಅವರಿಗೂ , ಹಂಸಲೇಖರವರೆಗೂ ನೆನಪುಗಳೊಂದಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಹಾಗೂ ಕನ್ನಡ ನಾಡಿನ ಎಲ್ಲಾ ಪ್ರೇಕ್ಷಕರಿಗೂ ವಂದಿಸುತ್ತೇನೆ’ ಎಂದಿದ್ದಾರೆ.

error: Content is protected !!