14.6 C
Munich
Home News ಧರ್ಮದ ಆಚರಣೆ ಹಿಂದೂಗಳು ಮರೆಯುತ್ತಿರುವುದು ಆತಂಕಕಾರಿ: ಆಲೂರು ಕಾರ್ಜುವಳ್ಳಿ ಹಿರೇಮಠದ ಸದಾಶಿವ ಶಿವಾಚಾರ್ಯ ಸ್ವಾಮೀಜಿ

ಧರ್ಮದ ಆಚರಣೆ ಹಿಂದೂಗಳು ಮರೆಯುತ್ತಿರುವುದು ಆತಂಕಕಾರಿ: ಆಲೂರು ಕಾರ್ಜುವಳ್ಳಿ ಹಿರೇಮಠದ ಸದಾಶಿವ ಶಿವಾಚಾರ್ಯ ಸ್ವಾಮೀಜಿ

ಸಕಲೇಶಪುರ: ಇಂದಿನ ಯುವ ಜನತೆ ಧರ್ಮದ ಮೇಲೆ ಅಸಡ್ಡೆ ತೋರುತ್ತಿರುವುದರಿಂದ ಸನಾತನ ಧರ್ಮಕ್ಕೆ ತೀವ್ರ ಪೆಟ್ಟು ಬೀಳುತ್ತಿದೆ ಎಂದು ಆಲೂರು ಕಾರ್ಜುವಳ್ಳಿ ಹಿರೇಮಠದ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸಕಲೇಶಪುರ ಪಟ್ಟಣದ ಒಕ್ಕಲಿಗ ಸಮುದಾಯ ಭವನದ ಆವರಣದಲ್ಲಿ ವಿಎಚ್‌ಪಿ ,ಭಜರಂಗದಳ ಹಾಗೂ ಹಿಂದೂ ಜಾಗರಣ ವೇದಿಕೆ ವತಿಯಿಂದ ನಡೆದ ಅಖಂಡ ಭಾರತ ಸಂಕಲ್ಪ ದಿನಾಚರಣೆ ಕಾರ್ಯಕ್ರಮವನ್ನು ದೀಪ ಬೆಳಗುವ ಮುಖಾಂತರ ಉದ್ಘಾಟಿಸಿ ಮಾತನಾಡಿ ಭಾರತ ಭರತ ಖಂಡವಾಗಿ ಉಳಿದಿದ್ಯ ಎಂಬ ಪ್ರಶ್ನೆ ಯೋಚನೆ ಮಾಡಿದರೆ ಗೊತ್ತಾಗುತ್ತದೆ ಭಾರತ ಹರಿದು ಹಂಚಿ ಹೋಗಿದೆ ಅಂತ, ನಮ್ಮೆಲ್ಲರ ಆತ್ಮ ವಿಶ್ವಾಸ ಕೊರತೆ ಈ ರೀತಿ ಆಗಲು ಕಾರಣವಾಗಿದೆ.

ಇಂದು ಧರ್ಮದ ಆಚರಣೆ ಯಾರಿಗೂ ಬೇಕಾಗಿಲ್ಲ ಹೀಗಾಗಿ ಸನಾತನ ‘ರ್ಮ ಮೇಲೆ ಆಕ್ರಮಣ ನಡೆಯುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ದೊರಕಿಸಲು ಹಿಂದೂ ಏಕತೆಯನ್ನು ತರಲು ಬಾಲಗಂಗಾಧರ್ ತಿಲಕ್ ಸಾರ್ವಜನಿಕ ಗಣಪತಿಗಳನ್ನು ಪ್ರತಿಷ್ಠಾಪಿಸುವ ಮೂಲಕ ಯುವಕರ ಸಂಘಟನೆಯನ್ನು ಮಾಡಿದರು ಇನ್ನು ಕೆಲವೆ ದಿನಗಳಲ್ಲಿ ಗಣಪತಿ ಹಬ್ಬ ಬರುತ್ತದೆ ಆದರೆ ಈ ಗಣಪತಿ ಹಬ್ಬಕ್ಕೆ ಹಲವಾರು ನಿಯಮಗಳನ್ನು ಸರ್ಕಾರ ಹೇರುತ್ತದೆ ಆದರೆ ಅನ್ಯ ಧರ್ಮದ ಮೇಲೆ ಸರ್ಕಾರ ಹೇರುವುದಿಲ್ಲ.

ಆಸಕ್ತಿ, ಒಗ್ಗಟ್ಟು, ಇಚ್ಛಾ ಶಕ್ತಿ ಕೊರತೆ ಮುಂದುವರೆದರೆ ನಾವೇ ದೇಶದಲ್ಲಿ ಅಲ್ಪ ಸಂಖ್ಯಾತರಾಗುವ ಸಾಧ್ಯತೆಯಿದೆ. ಆಚರಣೆಯಲ್ಲಿ ನಾವು ಹಿಂದೂತ್ವವನ್ನು ಅಳವಡಿಸಿಕೊಂಡಾಗ ಮಾತ್ರ ಧರ್ಮ ಹಾಗೂ ಹಿಂದೂ ದೇಶ ಉಳಿಯುತ್ತದೆ. ನಿದ್ರೆಯ ಮಂಪರಿನಲ್ಲಿ ಮಲಗಿದ್ದು ಸಾಕು ಎಲ್ಲಾರು ಒಗ್ಗಟ್ಟಾಗಿ ಧರ್ಮದ ಉಳಿವಿಗೆ ಕೈಜೋಡಿಸೋಣ ಎಂದರು.

ವಿಎಚ್‌ಪಿ ವಿಭಾಗ ಕಾರ್ಯದರ್ಶಿ ಮಹಿಪಾಲ್ ಮಾತನಾಡಿ ಬ್ರಿಟೀಷ್, ಮುಸ್ಲಿಂ ಲೀಗ್ ಹಾಗೂ ಕಾಂಗ್ರೆಸ್ ಕಾರಣದಿಂದ ದೇಶ ವಿಭಜನೆಯಾಯಿತು. ಯಾವುದೆ ದೇಶಕ್ಕೆ ಸ್ವಾತಂತ್ರ್ಯ ದೊರಕಿದಾಗ ಸಂಭ್ರಮ ಇರಬೇಕು, ಆದರೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿದಾಗ ಸಂಭ್ರಮ ಇರಲಿಲ್ಲ. ನಮ್ಮ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಸರ್ಕಾರ ಹಿಂದೂ ಮುಖಂಡ ಶರಣ್ ಪಂಪ್‌ವೆಲ್ ಭಾಷಣಕ್ಕೆ ನಿರ್ಬಂಧ ಹೇರಿರುವುದು ಖಂಡನೀಯ, ಕಾಂಗ್ರೆಸ್ ಎಂದಿಗೂ ಸತ್ಯವನ್ನು ಒಪ್ಪುವುದಿಲ್ಲ.

ಬಾಂಗ್ಲಾ ದೇಶಿಯರ ಹಾವಳಿ ಮಿತಿ ಮೀರುತ್ತಿದ್ದು ಇದೇ ರೀತಿ ಮುಂದುವರೆದಲ್ಲಿ ನಾವು ಸಹ ಮುಂದಿನ ದಿನಗಳಲ್ಲಿ ಅಲ್ಪಸಂಖ್ಯಾತರಾಗಬೇಕಾಗುತ್ತದೆ ಎಂದರು.

ಶಾಸಕ ಸಿಮೆಂಟ್ ಮಂಜು ಮಾತನಾಡಿ ಪ್ರಧಾನಿ ನರೇಂದ್ರ ಮೋದಿರವರ ನಾಯಕತ್ವದಲ್ಲಿ ದೇಶ ಇಂದು ಎಲ್ಲಾ ರಂಗಗಳಲ್ಲೂ ಅಭಿವೃದ್ದಿ ಕಾಣುತ್ತಿದೆ. ಅಂಬೇಡ್ಕರ್‌ರವರು ಹೇಳಿದಂತೆ ಇತಿಹಾಸವನ್ನು ಮರೆತವ ಇತಿಹಾಸವನ್ನು ಸೃಷ್ಟಿಸಲಾರ ಹೀಗಾಗಿ ಮೊದಲಿಗೆ ನಾವು ನಮ್ಮ ಮಕ್ಕಳಿಗೆ ದೇಶದ ಇತಿಹಾಸವನ್ನು ಹೇಳಿಕೊಡಬೇಕು.

ರಾಮಾಯಣ, ಮಹಾ ಭಾರತದ ಕಥೆಗಳನ್ನು ಮಕ್ಕಳಿಗೆ ತಾಯಂದಿರು ಹೇಳಬೇಕು. ಹಿಂದೂ ದೇಶದಲ್ಲಿ ಅಲ್ಪ ಸಂಖ್ಯಾತ ಆದಲ್ಲಿ ದೇಶ ನೆಮ್ಮದಿಯಾಗಿರಲು ಸಾಧ್ಯವೆಯಿಲ್ಲ, ಹೀಗಾಗಿ ನಾವೆಲ್ಲಾ ಎಚ್ಚೆತ್ತುಕೊಂಡು ರಾಷ್ಟ್ರೀಯತೆಯನ್ನು ಪ್ರತಿಯೊಬ್ಬರಲ್ಲೂ ಮೂಡಿಸಬೇಕು ಎಂದರು.
ಪಟ್ಟಣದ ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಕುಶಾಲನಗರದ ಒಕ್ಕಲಿಗೆ ಕಲ್ಯಾಣ ಮಂಟಪದವರೆಗೆ ಪಂಜಿನ ಮೆರವಣಿಗೆ ನಡೆಯಿತು.

ಈ ಸಂಧರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಶಿವಕುಮಾರ್ ಜಾಗಟೆ, ನಿವೃತ್ತ ಸೈನಿಕ ನೀಲಕಂಠಪ್ಪ, ವಿಎಚ್‌ಪಿ ಜಿಲ್ಲಾ ಕಾರ್ಯದರ್ಶಿ ಹರೀಶ್ ಕರಡಿಗಾಲ , ವಿಎಚ್‌ಪಿ ಜಿಲ್ಲಾ ಉಪಾಧ್ಯಕ್ಷ ವಿಜಯ್ ಕುಮಾರ್, ಭಜರಂಗದಳ ಜಿಲ್ಲಾ ಸಹ ಸಂಯೋಜಕ ಕಿಶೋರ್ ಶೆಟ್ಟಿ, ಹಿಂದೂ ಜಾಗರಣ ವೇದಿಕೆ ತಾಲೂಕು ಸಂಯೋಜಕ ಮಂಜುನಾಥ್ ಸಂಘಿ ವಿಎಚ್‌ಪಿ ತಾಲೂಕು ಅಧ್ಯಕ್ಷ ಬಿರಡಹಳ್ಳಿ ಬಾಲು, ಹಿಂದೂ ಮುಖಂಡರುಗಳಾದ ನವೀನ್, ನಂದನ್, ವಿಷ್ಣು, ಮುಂತಾದವರು ಹಾಜರಿದ್ದರು.

error: Content is protected !!