ಹಾಸನ: ಧರ್ಮಸ್ಥಳ ಸಂಸ್ಥೆ ವತಿಯಿಂದ ಶ್ರದ್ಧಾಕೇಂದ್ರಗಳ ಸ್ವಚ್ಛತಾ ಕಾರ್ಯ

ಅರಕಲಗೂಡು : ತಾಲೂಕಿನ ಬೈಚನಹಳ್ಳಿ ವಲಯ ವ್ಯಾಪ್ತಿಯಲ್ಲಿ ಬರುವ ೧೦ ಗ್ರಾಮಗಳಲ್ಲಿನ ಶ್ರದ್ದಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸ್ಥಳೀಯ ಗ್ರಾಮಸ್ಥರು ಸಹಕಾರದೊಂದಿಗೆ ಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಯೋಜನಾಧಿಕಾರಿ ಪ್ರಕಾಶ್ ಮೊಗವಿರ್ ಅವರು,ಗ್ರಾಮಗಳಲ್ಲಿನ ಶ್ರದ್ಧಾ ಕೇಂದ್ರಗಳ ಒಳಗೆ ಮತ್ತು ಹೊರಗೆ ಶುಚಿತ್ವವನ್ನು ಸ್ವಯಂಪ್ರೇರಿತವಾಗಿ ಭಕ್ತರು ಕೈಗೊಳ್ಳಬೇಕಿದೆ.ಇದರಿಂದ ದೇವಮಂದಿರದ ಪಾವಿತ್ರತೆ ಹೆಚ್ಚುತ್ತದೆ.ಆರೋಗ್ಯವಂತ ಸಮಾಜಕ್ಕೆ ಸ್ವಚ್ಛಪರಿಸರ ಎಷ್ಟು ಮುಖ್ಯವೋ ಅದೇ ರೀತಿ ಊರುಗಳ ದೇವಾಲಯಗಳು ಅಷ್ಟೆ ಪ್ರಮುಖವಾಗಿವೆ.ವಾರಕ್ಕೆ ಒಮ್ಮೆಯಾದರೂ ದೇವಾಲಯ ಆವರಣವನ್ನು ಸ್ವಚ್ಚಗೊಳಿಸಿಕೊಳ್ಳೋಣ ಎಂದು ತಿಳಿಸಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಕ್ಷೇತ್ರವೂ ಧಾರ್ಮಿಕ ಕಾರ್ಯಗಳ ಜತೆಯಲ್ಲಿಯೇ ಸಾಮಾಜಿಕ,ಆರ್ಥಿಕ ಸಬಲೀಕರಣ ಕಾರ್ಯಗಳನ್ನು ಕೈಗೊಳ್ಳುತ್ತಿದೆ. ಶ್ರದ್ದಾ ಕೇಂದ್ರಗಳ ಸ್ವಚ್ಛತೆಯಿಂದ ಆಗುವಂತಹ ಪ್ರಯೋಜನಗಳ ಬಗ್ಗೆ ಹಾಗೂ ಯೋಜನೆಯಿಂದ ಸಿಗುವಂತಹ ಅನುದಾನಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕಿ ಶೀಲಾ, ಒಕ್ಕೂಟದ ಅಧ್ಯಕ್ಷ ಸಿದ್ದಲಿಂಗಪ್ಪ. ಉಪಾಧ್ಯಕ್ಷ ಕಾಂತರಾಜ್, ಸೇವಾಪ್ರತಿನಿಧಿ ರೂಪ,ಪ್ರಗತಿಬಂದು ಸಂಘದ ಸದಸ್ಯರು ಊರಿನ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.