ಹಾಸನ: ಜಿಲ್ಲೆಯಲ್ಲಿ ತೆಂಗು ಬೆಳೆಗೆ ಕಾಡುತ್ತಿರುವ ವಿವಿಧ ರೋಗ ಬಾಧೆ ನಿಯಂತ್ರಣ ಕ್ರಮ ಹಾಗೂ ರೈತರಿಗೆ ಪರಿಹಾರ ಘೋಷಿಸಬೇಕೆಂದು ಶಾಸಕ ಸಿ.ಎನ್. ಬಾಲಕೃಷ್ಣ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ವಿಧಾನಸಭೆ ಅಧಿವೇಶನದಲ್ಲಿ ನಿಯಮ ೭೩ರ ಅಡಿ ಕೇಳಲಾದ ಪ್ರಶ್ನೆಗೆ ತೋಟಗಾರಿಕೆ ಸಚಿವ ಎಸ್.ಮಲ್ಲಿಕಾರ್ಜುನ ಉತ್ತರಿಸಿ, ಪ್ರಸಕ್ತ ಸಾಲಿನಲಿ ರಾಜ್ಯದಲ್ಲಿ ತೆಂಗು ಬೆಳೆಗೆ ಸೊರಗು ರೋಗ- ೩೬,೮೭೬ ಹೆಕ್ಟೇರ್, ಬೆಂಕಿ ರೋಗ-೨೭,೮೫೦ ಹೆಕ್ಟೇರ್, ಹರಳು ಉದುರುವ ರೋಗ-೨೨,೩೯೪ ಹೆಕ್ಟೇರ್, ಕಪ್ಪುತಲೆ ಹುಳುವಿನ ಬಾಧೆಯಿಂದ ೬೨,೦೪೪ ಹೆಕ್ಟೇರ್ ಮತ್ತು ಬಿಳಿನೊಣದ ಬಾಧೆಯಿಂದ ೩,೨೪,೨೫೯ ಹೆಕ್ಟೇರ್ ಪ್ರದೇಶದಲ್ಲಿ ಹಾನಿಯಾಗಿರುವುದು ಅಂದಾಜಿಸಲಾಗಿದೆ ಎಂದರು.
೨೦೨೩-೨೪ ನೇ ಸಾಲಿನಲಿ ಈ ಕಾರ್ಯಕ್ರಮದಡಿ ೨೪೨೩.೫೦ ಹೆಕ್ಟೇರ್ ಗಳಿಗೆ ರೂ. ೯೫೧.೧೯ ಲಕ್ಷಗಳ ಸಹಾಯಧನ ಒದಗಿಸಲಾಗಿದ್ದು ೨೦೨೪-೨೫ನೇ ಸಾಲಿನ ಆರ್ಥಿಕ ವರ್ಷದ ಅಂತ್ಯಕ್ಕೆ ಅನುದಾನ ಬಿಡುಗಡೆಯಾಗಿದ್ದರಿಂದ ಸದರಿ ಅನುದಾನವನ್ನು ಪ್ರಸಕ್ತ ಸಾಲಿನಲ್ಲಿ ಮೂದಲನೇ ವರ್ಷದ ಈ ಕಾರ್ಯಕ್ರಮದ ರೂ.೧೮೬.೦೪ ಲಕ್ಷಗಳನ್ನು ವಿನಿಯೋಗಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ. ೨೦೨೫-೨೬ನೇ ಸಾಲಿನಲ್ಲಿ ಈ ಕಾರ್ಯಕ್ರಮದಡಿಯಲ್ಲಿ ೧೦೦೦ ಹೆಕ್ಟೇರ್ ವಿಸ್ತೀರ್ಣದಲ್ಲಿ ಅನುಷ್ಠಾನಗೊಳಿಸಲು ರೂ.೪೫೨.೫೦ ಲಕ್ಷಗಳ ಅನುದಾನ ನಿಗದಿಯಾಗಿದ್ದು, ಅನುಷ್ಟಾನ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.










