0.9 C
Munich
Home News ಹಾಸನ: ರಾಜ್ಯಮಟ್ಟದ ಪ್ರಥಮ ಟೆಲಿಸ್ಕೋಪ್ ತರಬೇತಿ ಶಿಬಿರಕ್ಕೆ  ಜಿಲ್ಲೆಯಿಂದ 20 ಮಕ್ಕಳು ಭಾಗಿ

ಹಾಸನ: ರಾಜ್ಯಮಟ್ಟದ ಪ್ರಥಮ ಟೆಲಿಸ್ಕೋಪ್ ತರಬೇತಿ ಶಿಬಿರಕ್ಕೆ  ಜಿಲ್ಲೆಯಿಂದ 20 ಮಕ್ಕಳು ಭಾಗಿ

20 students from 8th to PUC from the district will participate in the world record first state-level telescope training camp to be held for 9 days in Doddaballapur in Bengaluru Rural district.

ಹಾಸನ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ 9 ದಿನಗಳ ಕಾಲ ನಡೆಯುವ ವಿಶ್ವ ದಾಖಲೆಯ ರಾಜ್ಯ ಮಟ್ಟದ ಪ್ರಥಮ ಟೆಲಿಸ್ಕೋಪ್ ತರಬೇತಿ ಶಿಬಿರದಲ್ಲಿ ಜಿಲ್ಲೆಯಿಂದ 8 ರಿಂದ ಪಿಯುಸಿ ವರೆಗಿನ 20 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಸಂಶೋಧನೆ ಪರಿಷತ್ತು ಗೌರವಾಧ್ಯಕ್ಷ ಎಂ.ಕೆ. ಕಮಲ್ ಕುಮಾರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ತಿಳಿಸಿದ ಅವರು, ವಿವಿಧ ಇಲಾಖೆ, ಸಂಘ-ಸಂಸ್ಥೆ ಹಾಗೂ ಕ್ಲಬ್‌ಗಳ ಆಶ್ರಯದಲ್ಲಿ ರಾಜ್ಯಮಟ್ಟದ ಪಥಮ ಟೆಲಿಸ್ಕೋಪ್ ತರಬೇತಿ ಶಿಬಿರ ದೊಡ್ಡಬಳ್ಳಾಪುರದ ಬೆಸೆಂಟ್ ಪಾರ್ಕ್, ಸೈಟ್ಸ್ ಕ್ಯಾಂಪ್‌ನಲ್ಲಿ ಅ.1-9ರವರೆಗೆ9 ದಿನಗಳ ಕಾಲ ನಡೆಯಲಿದೆ ಎಂದರು.

ಈ ಶಿಬಿರದಲ್ಲಿ ರಾಜ್ಯದ 152ಮಕ್ಕಳು ಭಾಗವಹಿಸಲಿದ್ದು, ಶಿಬಿರದಲ್ಲಿ ತಯಾರಿಸಲಾದ ಟೆಲಿಸ್ಕೋಪ್ ಮೂಲಕ ವಿಶ್ವ ದಾಖಲೆ ನಿರ್ಮಿಸಲಾಗುತ್ತದೆ. ವಿಶ್ವ ಮಟ್ಟದ ಗೌರವಕ್ಕೆ ಪಾತ್ರವಾಗುವ ಈ ಯೋಜನೆ ವರ್ಡ್ ಬುಕ್ ಆಫ್ ರೆಕಾರ್ಡ್ಸ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗಲಿದೆ. ಈಗಾಗಲೇ ಜಿಲ್ಲೆಯ ವಿದ್ಯಾರ್ಥಿಗಳ ಆಯ್ಕೆ ಪ್ರತಿಕ್ರಿಯೆ ನಡೆದಿದೆ. ಈ ಪ್ರತಿಷ್ಠಿತ ಶಿಬಿರದಲ್ಲಿ 20 ವಿದ್ಯಾರ್ಥಿಗಳು ಭಾಗಿಯಾಗುತ್ತಿದ್ದಾರೆ ಎಂದರು.

ಯಾರೆಲ್ಲ ಭಾಗಿ: ಗಗನ ಬಿ.ಎಲ್,10ನೇ ತರಗತಿ, ಬಾಗೇಶಪುರ, ವಿ.ಎಸ್. ಸಿಂಚನ, ಪ್ರಥಮ ಪಿಯುಸಿ, ಬೇಲೂರು, ಮಾನ್ಯ ಎಂ.ಗಂಗಾಧರ್ ದ್ವಿತೀಯ ಪಿಯುಸಿ ಹಾಸನ,ಪುರುಷೋತ್ತಂ ಎಂ ಪ್ರಥಮ ಪಿಯುಸಿ,ಹಳೇಕೋಟೆ, ಐಶ್ವರ್ಯ ಎ.ಆರ್ ದ್ವಿತೀಯ ಪಿಯುಸಿ, ಗೊರೂರು, ಪ್ರೀತಂ ಆರ್.ಪಿ ಪ್ರಥಮ ಪಿಯುಸಿ, ಹಳೇಬೀಡು, ಲೇಖನ ಎಂ.ಪಿ 9ನೇ ತರಗತಿ, ಸಪ್ರೌಶಾಲೆ ಚನ್ನರಾಯಪಟ್ಟಣ, ರವಿ ನಂದನ್ ಟಿ.ಎಸ್ ಪ್ರಥಮ ಪಿಯುಸಿ, ಆಲೂರು, ಅರ್ಪಿತ ಎಂ.ವೈ 9ನೇ ತರಗತಿ, ಜಿಜಿಜಿಸಿ ಪ್ರೌಢಶಾಲೆ, ಅರಕಲಗೂಡು,
ಮಿಥುನ್ ಜಿ.ಎಲ್.ಗೌಡ 8ನೇ ತರಗತಿ, ವಿದ್ಯಾಸೌಧ ಪ್ರೌಢಶಾಲೆ, ಮಾಸ್ರ‍್ಸ್ ಪಿಯು ಕಾಲೇಜಿನ ಇಬ್ಬನಿ ಬಿ.ಎಂ, , ಲಿಪಿಕಾ ಹೆಚ್.ಸಿ, ಹರಿಪ್ರಸಾದ್ ಕೆ., ಶ್ರೇಯಲ ಎಚ್. ಸಮೃದ್ಧಿ ಎಸ್.ಗೌಡ 9ನೇ ತರಗತಿ, ಶಾರದಾ ವಿದ್ಯಾನಿಕೇತನ, ಮಂಗಳೂರು, ಹಿತ ಎಚ್.ಆರ್ 8ನೇ ತರಗತಿ, ಸಂತ ಜೋಸೆಫ್ ಶಾಲೆ, ಹಾಸನ, ನೂತನ ಹೆಚ್.ಸಿ 10 ನೇ ತರಗತಿ, ಯುನೈಟೆಡ್ ಶಾಲೆ, ಅಶ್ವಿನ್ ಕೆ.ವೈ 10ನೇ ತರಗತಿ, ಪೋದಾರ್ ಇಂಟರ್‌ನ್ಯಾಷನಲ್ ಶಾಲೆ, ಶಾಂತಾ ಬಿ ಪ್ರಥಮ ಪಿಯುಸಿ, ದಾವಣಗೆರೆ, ಶಿಬಿರದಲ್ಲಿ ಜಿಲ್ಲೆಯ ಮೂವರು ಶಿಕ್ಷಕರು ಸಹ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಶಿಬಿರದಲ್ಲಿ ವಿದ್ಯಾರ್ಥಿಗಳು ಸ್ಥಳದಲ್ಲೇ ಟೆಲಿಸ್ಕೋಪ್ ತಯಾರಿಸಿ ಅದನ್ನು ಖಗೋಳ ವೀಕ್ಷಣೆಗೆ ಬಳಸುವ ಮೂಲಕ ವಿಶ್ವದಾಖಲೆ ನಿರ್ಮಿಸುವುದು ವಿಶೇಷತೆ. ಜಿಲ್ಲೆಯ ವಿದ್ಯಾರ್ಥಿಗಳು ಗಣನೀಯ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದು ಜಿಲ್ಲೆಗೆ ಹೆಮ್ಮೆಯಾಗಿದೆ ಎಂದರು.

ಪರಿಷತ್ತಿನ ಜಿಲ್ಲಾಧ್ಯಕ್ಷ ರವಿನಾಕಲಗೂಡು ಮಾತನಾಡಿ, ವೈಜ್ಞಾನಿಕ ಸಂಶೋಧನೆ ಸಂಸ್ಥೆಯ ದೊಡ್ಡ ಉದ್ದೇಶ ಎಂದರು. ಇದೇ ಸಂಸ್ಥೆಯಲ್ಲಿ ನ್ಯಾ.ನಾಗಮೋಹನ್ ದಾಸ್, ಇಸ್ರೊ ಮಾಜಿ ಅಧ್ಯಕ್ಷ ಕಿರಣ್ ಕುಮಾರ್, ಹುಲಿಕಲ್ ನಟರಾಜು ಮೊದಲಾದವರಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಭಾರತ್ ಸೇವಾದಳ ವಲಯ ಸಂಘಟಕಿ ವಿ.ಎಸ್. ರಾಣಿ, ಸಂಪನ್ಮೂಲ ವ್ಯಕ್ತಿ ದೀಪಾ ಮಹೇಶ್, ಶೋಭ, ವಿನೂತ, ರತಿ ಇದ್ದರು.

error: Content is protected !!