ಹಾಸನ: ಜಿಲ್ಲಾ ಪತ್ರಕರ್ತರ ಸಂಘದಲ್ಲಿಂದು ವಿಶ್ವ ಛಾಯಾಗ್ರಾಹಕರ ದಿನಾಚರಣೆ ಆಚರಿಸಲಾಯಿತು.
ಆರಂಭದಲ್ಲಿ ಮಾತನಾಡಿದ ಹಿರಿಯ ಛಾಯಾಗ್ರಾಹಕ ಅತೀಖುರ್ ರೆಹಮಾನ್, ಛಾಯಾಗ್ರಾಹಕ ವೃತ್ತಿಯಲ್ಲಿ ಹಲವು ಏಳು ಬೀಳು, ಅನೇಕ ಕಷ್ಟ ಅನುಭವಿಸಿದ್ದೇವೆ. ನೆಗೆಟಿವ್ ರೋಲ್, ಟೇಪ್ ನಿಂದ ಈಗಿನ ಚಿಪ್ ವರೆಗೂ ಏನೆಲ್ಲ ಸಮಸ್ಯೆ ಇದ್ದವು ಎಂಬುದನ್ನು ವಿವರಿಸಿದರು.
ಫೋಟೋಗ್ರಫಿ ಡಿಜಿಟಲ್ ಮಾಧ್ಯಮ ಬಂದರೂ ಆಗಿನಿಂದ ಈವರೆಗೂ ಒಳ್ಳೆಯ ಸಂಬಳ ಇಲ್ಲ ಎಂದು ಬೇಸರ ಹೊರ ಹಾಕಿದರು. ಮತ್ತೊಬ್ಬ ಫೋಟೋ ಗ್ರಾಫರ್ ಹಿಂದೂ ಪ್ರಕಾಶ್ ಮಾತನಾಡಿ, ಹಿಂದೆ ನಮ್ಮನ್ನು ಯಾರೂ ಗುರುತಿಸುತ್ತಿರಲಿಲ್ಲ, ಬ್ಲಾಕ್ ಅಂಡ್ ವೈಟ್ ಕಾಲಘಟ್ಟದಿಂದಲೂ ಕೆಲಸ ಮಾಡಿರುವ ನಮ್ಮನ್ನು ಯಾವುದೇ ಸಂಸ್ಥೆ ಗೌರವಯುತವಾಗಿ ನಡೆಸಿಕೊಂಡಿಲ್ಲ,ಅಪಾಯ ಸನ್ನಿವೇಶದ ನಡುವೆಯೂ ಕೆಲಸ ಮಾಡಿದ್ದೇವೆ.
ಈಗಿನವರು ಇದೊಂದೇ ವೃತ್ತಿ ನೆಚ್ಚಿಕೊಳ್ಳಬೇಡಿ. ಪರ್ಯಾಯ ವೃತ್ತಿಯನ್ನೂ ಮಾಡಿ ಎಂದರು.
ಛಾಯಾ ಗ್ರಾಹಕರಾದ ಜ್ಞಾನೇಶ್ವರ್, ಅಮೋಘ್ ವಾಹಿನಿ ಮುಖ್ಯಸ್ಥ ಕೆಪಿಎಸ್ ಪ್ರಮೋದ್, ರಾಷ್ಟ್ರೀಯ ಮಂಡಳಿ ಸದಸ್ಯ ಜಿ.ಪ್ರಕಾಶ್, ಹೆತ್ತೂರು ನಾಗರಾಜ್, ಮಾಜಿ ಅಧ್ಯಕ್ಷ ಬಿ.ಆರ್.ಉದಯಕುಮಾರ್, ಕೆ.ಎಂ.ಹರೀಶ್, ಎಸ್.ಡಿ.ರಂಗಸ್ವಾಮಿ,ಪ್ರಕಾಶ್ ಬೆಳವಾಡಿ, ಹೆಚ್.ಆರ್.ಶರತ್, ಮಾಜಿ ಅಧ್ಯಕ್ಷರಾದ ಬಾಳ್ಳುಗೋಪಾಲ್, ಲೀಲಾವತಿ ಮೊದಲಾದವರು ಫೋಟೋಗ್ರಾರ‍್ಸ್ ಮಹತ್ವ, ವಿಡಿಯೋ ಜರ್ನಲಿಸ್ಟ್ಗಳ ಸಂಕಷ್ಟ, ಸವಾಲು ಜೊತೆಗೆ ತಾವು ಅನುಭವಿಸಿರುವ ಸಂದರ್ಭ, ಸನ್ನಿವೇಶಗಳನ್ನು ವಿವರಿಸಿದರು.
ಮಾಜಿ ಅಧ್ಯಕ್ಷರಾದ ಕೆ.ಆರ್.ಮಂಜುನಾಥ್ ಮಾತನಾಡಿ, ಛಾಯಾಗ್ರಾಹಕ ಹಿಂದೆ ಮತ್ತು ಇಂದು ಏನೆಲ್ಲ ಸವಾಲು ಎದುರಿಸುತ್ತಿದ್ದಾನೆ. ಬದಲಾವಣೆ ಆಗಿದೆ ಎಂಬುದನ್ನು ತುಲನಾತ್ಮಕವಾಗಿ ವಿವರಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಅಧ್ಯಕ್ಷ ಕೆ.ಹೆಚ್.ವೇಣು ಕುಮಾರ್ ಮಾತನಾಡಿ, ನೂರು ಪದಗಳನ್ನು ಒಂದು ಚಿತ್ರ ಹೇಳಲಿದೆ. ಅಕ್ಷರ ತಿಳಿಯದವನಿಗೂ ಒಂದು ಚಿತ್ರ, ಒಂದು ದೃಶ್ಯ ಎಲ್ಲವನ್ನೂ ತಿಳಿಸಲಿದೆ. ಆದರೆ ಆ ವೃತ್ತಿಯಲ್ಲಿ ತೊಡಗಿರುವವರಿಗೆ ಭದ್ರತೆ ಇಲ್ಲ ಅನ್ನೋದು ವಿಷಾದನೀಯ ಎಂದರು.
]
ಕಡೆಯಲ್ಲಿ ವಿವಿಧ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವ ಕ್ಯಾಮರಾಮನ್‌ಗಳಾದ ಹೆಚ್.ಆರ್.ಶರತ್(ಸುವರ್ಣ), ಮಹೇಶ್(ಟಿವಿ-೯), ನಾಗರಾಜ್ (ಪಬ್ಲಿಕ್ ಟಿವಿ), ಪ್ರವೀಣ್(ನ್ಯೂಸ್ ಫಸ್ಟ್), ಕಿಶೋರ್(ಟಿವಿ೫), ಸುಧೀರ್ ಜೈನ್(ವಿವಿಸಿ), ಚಂದನ್(ಅಮೋಘ್), ನವೀನ್(ಹೆಚ್‌ಸಿಎನ್) ಮತ್ತು ಮಧು(ಎಎನ್‌ಐ) ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಉಪಾಧ್ಯಕ್ಷ ಮೋಹನ್ ಕುಮಾರ್ ನಿರೂಪಿಸಿದರು. ಮತ್ತೊಬ್ಬ ಉಪಾಧ್ಯಕ್ಷ ಕೆ.ಎಂ.ಹರೀಶ್ ಸ್ವಾಗತಿಸಿದರು.










