4.2 C
Munich
Home News ಹಾಸನ: ಹಾಸನಾಂಬ ಭಕ್ತರಿಗೆ ಮಹತ್ವದ ಸಂದೇಶ ರವಾನಿಸಿದ ಸಚಿವ ಕೃಷ್ಣ ಬೈರೇಗೌಡ

ಹಾಸನ: ಹಾಸನಾಂಬ ಭಕ್ತರಿಗೆ ಮಹತ್ವದ ಸಂದೇಶ ರವಾನಿಸಿದ ಸಚಿವ ಕೃಷ್ಣ ಬೈರೇಗೌಡ

With just a few hours left for the public darshan of Hassanamba, District In-charge Minister Krishna Byre Gowda has given important information.

ಹಾಸನ: ಹಾಸನಾಂಬ ಸಾರ್ವಕನಿಕ ದರ್ಶನಕ್ಕೆ ಕೆಲವೇ ಗಂಟೆಗಳು ಉಳಿದಿದ್ದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಅವರು ಮಹತ್ವದ ಮಾಹಿತಿ ನೀಡಿದ್ದಾರೆ.

ಇಂದು ಸಂಜೆ ವಿಡಿಯೋ ಸಂದೇಶದಲ್ಲಿ ಮಾತನಾಡಿರುವ ಅವರು, ಬುಧವಾರ ದರ್ಶನವು ಬೆಳಿಗ್ಗೆ 5.30 ರಿಂದ ಸಂಜೆ 7ರ ವರೆಗೆ ತಡೆರಹಿತವಾಗಿರುತ್ತದೆ.

ಬುಧವಾರ ಮಧ್ಯಾಹ್ನ ನೈವೇದ್ಯ ಪೂಜೆ ಇರುವುದಿಲ್ಲ. ಹಾಗಾಗಿ ದಿನವಿಡೀ ಬೆಳಿಗ್ಗೆ 5.30ರಿಂದ ಸಂಜೆ 7ರ ವರೆಗೆ ಯಾವುದೇ ಅಡೆತಡೆ ಇಲ್ಲದೆ ದರ್ಶನ ಮುಂದುವರೆಯಲಿದೆ.

ಸಂಜೆ 7 ಗಂಟೆಗೆ ಸಾರ್ವಜನಿಕ ದರ್ಶನ ನಿಲ್ಲಲಿದೆ. ದರ್ಶನ ಪಡೆಯಬಯಸುವವರು ಸಂಜೆ 5 ಗಂಟೆಯೊಳಗೆ ಬರಲು ಕೋರಲಾಗಿದೆ. ಗುರುವಾರ ಸಾರ್ವಜನಿಕರಿಗೆ ಪ್ರವೇಶವಿಲ್ಲ ಎಂದಿದ್ದಾರೆ.

error: Content is protected !!