19.5 C
Munich
Home News ಕುಂದೂರು: ಆದಿಚುಂಚನಗಿರಿ ಮಠದಲ್ಲಿ ವಿಜಯದಶಮಿ ಹಾಗೂ ಶಮಿ ಪೂಜೆ

ಕುಂದೂರು: ಆದಿಚುಂಚನಗಿರಿ ಮಠದಲ್ಲಿ ವಿಜಯದಶಮಿ ಹಾಗೂ ಶಮಿ ಪೂಜೆ

Vijayadashami and Shami Puja rituals were performed with devotion at Sri Adichunchanagiri Mahasamsthan Math in Kundur, Srikshetra, Taluk.

ಚನ್ನರಾಯಪಟ್ಟಣ : ತಾಲ್ಲೂಕಿನ ಶ್ರೀಕ್ಷೇತ್ರ ಕುಂದೂರು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ವಿಜಯದಶಮಿ ಹಾಗೂ ಶಮಿ ಪೂಜಾ ಕೈಂಕರ್ಯಗಳು ಭಕ್ತಿಪೂರ್ಣವಾಗಿ ನೆರವೇರಿದವು.

ಈ ಸಂದರ್ಭದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಪೂಜಾ ವಿಧಿಗಳನ್ನು ನೆರವೇರಿಸಿ ಭಕ್ತರಿಗೆ ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ಶ್ರೀಕ್ಷೇತ್ರ ಕಬ್ಬಳಿ ಮಠದ ಶ್ರೀ ಶಿವಪುತ್ರನಾಥ ಸ್ವಾಮೀಜಿ ಹಾಗೂ ಮಠದ ಸದ್ಭಕ್ತರು ಭಾಗವಹಿಸಿ, ಶ್ರೀಗುರುವಿನ ಕೃಪೆಗೆ ಪಾತ್ರರಾದರು.

ವಿಜಯದಶಮಿ ಹಬ್ಬದ ಅಂಗವಾಗಿ ನಡೆದ ಈ ಪೂಜಾ ಕಾರ್ಯಕ್ರಮ ಭಕ್ತರಲ್ಲಿ ಉತ್ಸಾಹ ಮತ್ತು ಭಾವನಾತ್ಮಕ ಶ್ರದ್ಧೆಯನ್ನು ಹೆಚ್ಚಿಸಿತು.

error: Content is protected !!