4.2 C
Munich
Home News ಅರಸೀಕೆರೆ: ಧಾರಾಕಾರ ಮಳೆಗೆ ಕೆರೆಯಂತಾದ ಬಸ್ ನಿಲ್ದಾಣ

ಅರಸೀಕೆರೆ: ಧಾರಾಕಾರ ಮಳೆಗೆ ಕೆರೆಯಂತಾದ ಬಸ್ ನಿಲ್ದಾಣ

The rains continue in the district, and the city of Arsikere is completely submerged in water. As a result of continuous heavy rains for the last three days, the Arsikere bus stand is completely submerged.

ಹಾಸನ: ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಅರಸೀಕೆರೆ ನಗರ ಸಂಪೂರ್ಣ ಮಳೆ ನೀರಿನಲ್ಲಿ ಮುಳುಗಿದಂತಾಗಿದೆ. ಕಳೆದ ಮೂರು ದಿನಗಳಿಂದ ನಿರಂತರ ಧಾರಾಕಾರ ಮಳೆ ಸುರಿಯುತ್ತಿದ್ದ ಪರಿಣಾಮ, ಅರಸೀಕೆರೆ ಬಸ್ ನಿಲ್ದಾಣ ಸಂಪೂರ್ಣ ಜಲಾವೃತವಾಗಿದೆ.

ನಿಲ್ದಾಣದ ಒಳಗೆ ಮೊಣಕಾಲು ಎತ್ತರದಷ್ಟು ಮಳೆ ನೀರು ನಿಂತಿದ್ದು, ಪ್ರಯಾಣಿಕರು ಬಸ್ ಹಿಡಿಯಲು, ಅಥವಾ ನಿಲ್ದಾಣ ಪ್ರವೇಶಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮಳೆ ನೀರು ಹೊರ ಹೋಗಲು ಸೂಕ್ತ ವ್ಯವಸ್ಥೆ ಕಲ್ಪಿಸದ ಕಾರಣ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಹಾಗೂ ಸ್ಥಳೀಯ ಆಡಳಿತದ ನಿರ್ಲಕ್ಷ್ಯಕ್ಕೆ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೂರು ದಿನಗಳಿಂದ ನೀರು ತುಂಬಿಕೊಂಡಿದ್ದರೂ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಪ್ರತಿ ಬಾರಿ ಮಳೆ ಬಂದಾಗ ಇದೇ ಸಮಸ್ಯೆ ಎದುರಾಗುತ್ತಿದೆ. ಶಾಶ್ವತ ಪರಿಹಾರ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಸಾರ್ವಜನಿಕರು ಕೂಡಲೇ ಮಳೆ ನೀರು ಹೊರಹೋಗುವ ವ್ಯವಸ್ಥೆ ಕಲ್ಪಿಸಿ, ನಿಲ್ದಾಣವನ್ನು ಪ್ರಯಾಣಕ್ಕೆ ಸುಗಮಗೊಳಿಸುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

error: Content is protected !!