ಹಾಸನ: ಡಿಸೆಂಬರ್ ತಿಂಗಳಲ್ಲಿ ಅಪರೂಪವಾಗಿ ಗೋಚರಿಸುವ ಜೆಮಿನಿಡ್ ಉಲ್ಕಾಪಾತವನ್ನು ಸಾರ್ವಜನಿಕರು ನೇರವಾಗಿ ವೀಕ್ಷಿಸುವ ಅವಕಾಶ ಈ ಬಾರಿಯೂ ಲಭ್ಯವಾಗಿದೆ. ಭಾರತ ಜ್ಞಾನ ವಿಜ್ಞಾನ ಸಮಿತಿ (ಹಾಸನ ಜಿಲ್ಲಾ ಸಮಿತಿ), ನಿಟ್ಟೂರು ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಗ್ರಾಮಸ್ಥರ ಸಂಯುಕ್ತ ಆಶ್ರಯದಲ್ಲಿ ಡಿಸೆಂಬರ್ 13ರ ರಾತ್ರಿ 9ರಿಂದ 14ರ ಮುಂಜಾನೆ 4 ಗಂಟೆಯವರೆಗೆ ಹಾಸನ ತಾಲೂಕಿನ ತಿರುಪತಿಹಳ್ಳಿ ಬೆಟ್ಟದಲ್ಲಿ ವೀಕ್ಷಣಾ ಕಾರ್ಯಕ್ರಮ ಆಯೋಜಿಸಲಾಗಿದೆ.
ಪ್ರತಿ ಗಂಟೆಗೆ 20–25ಕ್ಕೂ ಹೆಚ್ಚು ಉಲ್ಕೆಗಳು ಡಿಸೆಂಬರ್‌ನಲ್ಲಿ ಬೀಳುವ ಈ ‘ಬೀಳುವ ಕಲ್ಲು’ ಎಂದೇ ಪರಿಚಿತವಾದ ಉಲ್ಕಾಮಳೆಯ ವಿಶೇಷತೆ ಎಂದರೆ, ಪ್ರತಿಗಂಟೆಗೆ 20–25 ಉಲ್ಕೆಗಳು ಆಕಾಶದಲ್ಲಿ ಗೋಚರಿಸುವ ಸಾಧ್ಯತೆ. ಜೆಮಿನಿ ನಕ್ಷತ್ರಪುಂಜದ ದಿಕ್ಕಿನಿಂದ ಬರುತ್ತಿರುವುದರಿಂದ ಇದನ್ನು ಜೆಮಿನಿಡ್ ಉಲ್ಕಾಪಾತ ಎಂದು ಕರೆಯಲಾಗುತ್ತದೆ.
ಈ ಉಲ್ಕಾಪಾತ 3200 ಪೈತಾನ್ ಎಂಬ ವಿಶಿಷ್ಟ ಕ್ಷುದ್ರಗ್ರಹದಿಂದ ಉಂಟಾಗುತ್ತದೆ. ಈ ಕ್ಷುದ್ರಗ್ರಹವು ಸೂರ್ಯನ ಸಮೀಪಕ್ಕೆ ಬರುವಾಗ ಉಂಟಾಗುವ ಧೂಳು ಮತ್ತು ಕಲ್ಲುಕಣಗಳು ಭೂಮಿಯ ವಾತಾವರಣಕ್ಕೆ ಪ್ರವೇಶಿಸುವಾಗ ಘರ್ಷಣೆಯಿಂದ ಸುಟ್ಟು ಉಲ್ಕೆಗಳಂತೆ ಗೋಚರಿಸುತ್ತವೆ.
ಮಧ್ಯರಾತ್ರಿ 2 ರಿಂದ ಬೆಳಗ್ಗೆ 4 ರವರೆಗೆ ಉತ್ತಮ ವೀಕ್ಷಣೆ
ಉಲ್ಕೆಗಳು ವಿಶೇಷವಾಗಿ ಡಿಸೆಂಬರ್ 13ರ ಮಧ್ಯರಾತ್ರಿ 12 ರಿಂದ 14ರ ಬೆಳಗ್ಗೆ 4 ರವರೆಗೆ ಹೆಚ್ಚು ಗೋಚರಿಸಲಿವೆ. ರಾತ್ರಿ 2 ರಿಂದ 4 ರ ನಡುವೆ ಅತ್ಯಂತ ಸ್ಪಷ್ಟವಾಗಿ ನೋಡುವ ಅವಕಾಶವಿದೆ.
ನಗರ ಬೆಳಕಿನ ಮಾಲಿನ್ಯದಿಂದ ಉಲ್ಕಾಪಾತ ವೀಕ್ಷಣೆಗೆ ಅಡ್ಡಿಯಾಗುವ ಕಾರಣ, ಹೊರ ಕ್ಷೇತ್ರವಾದ ತಿರುಪತಿಹಳ್ಳಿ ಬೆಟ್ಟವನ್ನು ಆಯ್ಕೆ ಮಾಡಲಾಗಿದೆ.
ವೀಕ್ಷಕರಿಗೆ ವಿಶೇಷ ವ್ಯವಸ್ಥೆಗಳು
ಈ ಕಾರ್ಯಕ್ರಮದಲ್ಲಿ ಕೆಳಗಿನ ಚಟುವಟಿಕೆಗಳನ್ನು ಆಯೋಜಿಸಲಾಗಿದೆ:
ರಾಶಿ ಮತ್ತು ಜನ್ಮನಕ್ಷತ್ರ ಪತ್ತೆ ಮಾಡುವ ಮಾರ್ಗದರ್ಶನ ಟೆಲೆಸ್ಕೋಪ್ ಮೂಲಕ ಗ್ರಹ ವೀಕ್ಷಣೆ
ಸೌರವ್ಯೂಹ ಪರಿಚಯ
ಸೌರ–ಸಾಂಸ್ಕೃತಿಕ ಕಾರ್ಯಕ್ರಮಗಳು
ನೋಂದಾಯಿತರಿಗೆ ಹಾಸನದಿಂದ ಸಂಚಾರ ವ್ಯವಸ್ಥೆ, ಲಘು ಉಪಹಾರ, ಕಾಫಿ ಹಾಗೂ ಮೂಲ ಉಪಕರಣಗಳನ್ನು ಒದಗಿಸಲಾಗುತ್ತದೆ.
100 ಮಂದಿಗೆ ಮಾತ್ರ ಅವಕಾಶ
ಬೆಟ್ಟ ಪ್ರದೇಶ ಮತ್ತು ಭದ್ರತಾ ಕಾರಣಗಳಿಂದ ಈ ಕಾರ್ಯಕ್ರಮಕ್ಕೆ ಕೇವಲ ಮೊದಲ 100 ನೋಂದಾಯಿತರಿಗೆ ಮಾತ್ರ ಅವಕಾಶ. ಆಸಕ್ತರು ಕೆಳಗಿನ ಸಂಖ್ಯೆಗಳ ಮೂಲಕ ನೋಂದಣಿ ಹಾಗೂ ಮಾಹಿತಿ ಪಡೆಯಬಹುದು:
ಸಿ. ಸೌಭಾಗ್ಯ (ಅಧ್ಯಕ್ಷರು): 6363907441
ಚಿನ್ನೇನಹಳ್ಳಿ ಸ್ವಾಮಿ (ಕಾರ್ಯದರ್ಶಿ): 9448900181
ಎಚ್. ಆರ್. ರವೀಶ್ (ಖಜಾಂಚಿ): 9900735212
— ಕೆ.ವಿ. ಕವಿತ, ಸಂಚಾಲಕರು (ಶಿಕ್ಷಣ ಉಪಸಮಿತಿ), ಭಾರತ ಜ್ಞಾನ ವಿಜ್ಞಾನ ಸಮಿತಿ, ಹಾಸನ ಜಿಲ್ಲಾ ಸಮಿತಿ










