ಹಾಸನ : ಸಕಲೇಶಪುರ ತಾಲ್ಲೂಕಿನ ಮಳಲಿ ಗ್ರಾಮದ ಚಾಮುಂಡೇಶ್ವರಿ ದೇವಾಲಯದಲ್ಲಿ ನವರಾತ್ರಿಯ ಪ್ರಯುಕ್ತ ನವದುರ್ಗೆಯರ ಆಹ್ವಾನ ಪೂರ್ವಕ ಪೂಜಾ ಕೈಂಕರ್ಯಗಳು ಭಕ್ತಿ-ಭಾವದಿಂದ ನೆರವೇರಿದವು.
ಇಂದು ಅಂತರಾಷ್ಟ್ರೀಯ ಕಾಫಿ ದಿನಾಚರಣೆ ಅಂಗವಾಗಿ ಅಮ್ಮನವರಿಗೆ ವಿಶೇಷ ಅಲಂಕಾರ ಮಾಡಲಾಯಿತು. ಮಲೆನಾಡಿನ ಪ್ರಮುಖ ಬೆಳೆಗಳಾದ ಕಾಫಿ ಮತ್ತು ಅಡಿಕೆಯಿಂದ ಮಲೆನಾಡು ಶೈಲಿಯ ಅಲಂಕಾರವನ್ನು ಅಮ್ಮನವರಿಗೆ ಅಲಂಕರಿಸಿ ಭಕ್ತರ ಮನಸೆಳೆಯುವಂತ ವಾತಾವರಣ ನಿರ್ಮಿಸಲಾಯಿತು.
ದೇವಾಲಯಕ್ಕೆ ಆಗಮಿಸಿದ್ದ ಭಕ್ತರು ಕಾಫಿ ಅಲಂಕಾರದಲ್ಲಿದ್ದ ದೇವಿಯ ದರ್ಶನ ಪಡೆದು ಸಂತೋಷ ವ್ಯಕ್ತಪಡಿಸಿದರು. ನವರಾತ್ರಿ ಉತ್ಸವದ ಅಂಗವಾಗಿ ಪ್ರತಿದಿನವೂ ವಿವಿಧ ವೈಶಿಷ್ಟ್ಯಪೂರ್ಣ ಅಲಂಕಾರಗಳು ಹಾಗೂ ಪೂಜೆ ಕಾರ್ಯಗಳು ನಡೆಯುತ್ತಿವೆ.










