ಹಿರೀಸಾವೆ: ದಸರಾ ಉತ್ಸವಕ್ಕೆ ಗಣ್ಯರಿಂದ ಚಾಲನೆ

The Navratri celebrations and Dasara celebrations of Shri Chowdeshwari Devi, the village deity of Hirisave in Channarayapatna taluk, were inaugurated by public representatives, dignitaries and leaders at Uyyale Kamba on Monday.

ಚನ್ನರಾಯಪಟ್ಟಣ: ತಾಲ್ಲೂಕಿನ ಹಿರೀಸಾವೆ ಗ್ರಾಮದೇವತೆ ಶ್ರೀ ಚೌಡೇಶ್ವರಿ ದೇವಿಯ ನವರಾತ್ರಿ ಆಚರಣೆ ಮತ್ತು ದಸರಾ ಮಹೋತ್ಸವಕ್ಕೆ ಉಯ್ಯಾಲೆ ಕಂಬದ ಬಳಿ ಸೋಮವಾರ ಜನಪ್ರತಿನಿಧಿಗಳು, ಗಣ್ಯರು ಹಾಗೂ ಮುಖಂಡರು ಚಾಲನೆ ನೀಡಿದರು.

ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಸಾವಿರರು ವರ್ಷಗಳ ಇತಿಹಾಸ ಇರುವ ಈ ಗ್ರಾಮಕ್ಕೆ ಒಂದು ಸಾವಿರ ವರ್ಷದ ಹಿಂದೆ ನಿರ್ಮಾಣವಾಗಿರುವ ಉಯ್ಯಾಲೆ ಕಂಬವೇ ಸಾಕ್ಷಿಯಾಗಿದೆ ಎಂದರು.

ಗ್ರಾಮದ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಅಭಿವೃದ್ಧಿಗೆ ಸಹಕಾರ ನೀಡುವೆ. ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಈ ವರ್ಷ ಮಳೆ ಕೊರತೆಯಿಂದ ರಾಗಿ, ತೆಂಗು ಸೇರಿದಂತೆ ಹಲವುಯ ಬೆಳೆಗಳಿಗೆ ತೊಂದರೆಯಾಗಿದೆ. ಈ ಬಗ್ಗೆ ಸರ್ಕಾರ ಗಮನಸೆಳೆಯುವುದಾಗಿ ಎಂದು ತಿಳಿಸಿದರು.

ಕಾಂಗ್ರೆಸ್ ಮುಖಂಡ ಎಂ.ಎ.ಗೋಪಾಲಸ್ವಾಮಿ ಮಾತನಾಡಿ, ದಸರಾ ಉತ್ಸವವು ನಮ್ಮ ದೇಶದ ಹಿಂದು ಧಾರ್ಮಿಕ ಆಚರಣೆ ಮತ್ತು ಸಾಂಸ್ಕೃತಿಕದ ಸಂಕೇತವಾಗಿದೆ. ಭಕ್ತಿ ಭಾವದಿಂದ ಸಪ್ತಮಾತೃಕೆಯ ದೇವಿಯರ ಪೂಜೆ ಮಾಡಬೇಕು ಎಂದರು. ಕರ್ನಾಟಕ ವಿದ್ಯುತ್ ಕಾರ್ಖಾನೆಯ ಅಧ್ಯಕ್ಷ ಎಚ್.ಸಿ.ಲಲಿತ ರಾಘವ್ ಮಾತನಾಡಿದರು.

ಪ್ರತಿ ವರ್ಷದಂತೆ ಈ ವರ್ಷವು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನವರಾತ್ರಿ ಆಚರಣೆ ನಡೆಯಲಿದೆ. ಅದ್ದೂರಿ ದಸರಾ ಯಶಸ್ವಿಗೆ ಗ್ರಾಮದ ಎಲ್ಲರು ಸಹಕಾರ ನೀಡಬೇಕು ಎಂದು ಧರ್ಮದರ್ಶಿ ಎಚ್.ವಿ. ಫಣೀಶ್ ಹೇಳಿದರು. ನವರಾತ್ರಿ ಪ್ರಾರಂಭದ ಅಂಗವಾಗಿ ಇಲ್ಲಿನ ಚೌಡೇಶ್ವರಿ ದೇವಿಗೆ ಮೊದಲ ದಿನ ವಿಶೇಷ ಪೂಜೆಗಳನ್ನು ಸಲ್ಲಿಸಲಾಯಿತು.

ಬಿಎಲ್ ಡಿಬಿ ಅಧ್ಯಕ್ಷ ಬಿ.ಎನ್. ಮಂಜುನಾಥ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯಮ್ಮ ಬೋರಯ್ಯ, ಸದಸ್ಯರಾದ ಮಾರುತಿ ಮಂಜುನಾಥ್, ಬೋರಣ್ಣ, ಚೇತು, ಪಿಡಿಓ ಸತೀಶ್, ಪಿಎಸಿಸಿಬಿ ಅಧ್ಯಕ್ಷ ಮಹೇಶ್, ಸೊಸೈಟಿ ಹರೀಶ್, ದೇವಸ್ಥಾನ ಮುಖ್ಯಸ್ಥರಾದ ಅನಂತರಾಮಯ್ಯ, ಗ್ರಾಮದ ಮುಖಂಡರಾದ ಅರಳಿಮರದ ಕುಮಾರ್, ರಾಮಕೃಷ್ಣ, ಎಚ್.ಎಸ್. ರವಿಕುಮಾರ್, ಬಾಲಕೃಷಷ್ಣ, ಉದಯಕುಮಾರ್, ಎಚ್‌.ಎಸ್‌. ಶ್ರೀಧರ್, ಮುರುಳೀಧರ್, ಎಚ್.ಜೆ. ದಿನೇಶ್, ಬೋರೇಗೌಡ, ವೆಂಕಟೇಶ್ ಬೀದಿಮನೆ ಶ್ರೀನಿವಾಸ್, ಕರವೇ ಮಹೇಶ್, ದಿವಾಕರ್, ವೀರಶೈವ ಸಮಾಜದ ಲೋಕೇಶ್, ರೈತ ಸಂಘದ ರಘು, ವಿಶ್ವಕರ್ಮ ಸಂಘದ ನಾಗೇಂದ್ರ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.