4.2 C
Munich
Home News ಅರಕಲಗೂಡು: ಶಾಸಕ ಎ. ಮಂಜು ಅರೋಗ್ಯಕ್ಕಾಗಿ ಫೋಟೊ ಹಿಡಿದು ಅಭಿಮಾನಿಗಳಿಂದ ಶಬರಿಮಲೆ ದರ್ಶನ

ಅರಕಲಗೂಡು: ಶಾಸಕ ಎ. ಮಂಜು ಅರೋಗ್ಯಕ್ಕಾಗಿ ಫೋಟೊ ಹಿಡಿದು ಅಭಿಮಾನಿಗಳಿಂದ ಶಬರಿಮಲೆ ದರ್ಶನ

The MLA of the assembly constituency, A. Manju, should serve as a minister again and win again as an MLA by 2028.

ಅರಕಲಗೂಡು: ವಿಧಾನಸಭಾ ಕ್ಷೇತ್ರದ ಶಾಸಕ ಎ. ಮಂಜು ಅವರು ಮತ್ತೊಮ್ಮೆ ಸಚಿವರಾಗಿ ಸೇವೆ ಸಲ್ಲಿಸಬೇಕು ಮತ್ತು 2028ರ ವೇಳೆಗೆ ಮತ್ತೆ ಶಾಸಕರಾಗಿ ಗೆಲ್ಲಬೇಕು ಎಂಬ ಹಾರೈಕೆಯೊಂದಿಗೆ ಹಳ್ಳಿ ಮೈಸೂರು ಹೋಬಳಿಯ ನಗರನಹಳ್ಳಿಕೊಪ್ಪಲು ಗ್ರಾಮದ ಯುವಕರು ಅಯ್ಯಪ್ಪ ಮಾಲೆ ಧರಿಸಿ ಶಬರಿಮಲೆ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಎ.ಮಂಜು ಅಭಿಮಾನಿ ಎನ್.ಡಿ. ಮನು ಕುಮಾರ್ ಮಾತನಾಡಿ,“ನಮ್ಮ ಅರಕಲಗೂಡು ಕ್ಷೇತ್ರದ ಶಾಸಕ ಎ. ಮಂಜು ಅವರು ಕ್ಷೇತ್ರದ ಅಭಿವೃದ್ಧಿಗೆ ನಿಸ್ವಾರ್ಥವಾಗಿ ದುಡಿಯುತ್ತಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಗುಣ, ಸರಳತೆ ಮತ್ತು ಅಚಲವಾದ ಜನಪರ ಬದ್ಧತೆ ನಮ್ಮಲ್ಲಿ ದೊಡ್ಡ ವಿಶ್ವಾಸ ಹುಟ್ಟಿಸಿದೆ. 2028ರ ಚುನಾವಣೆಯಲ್ಲೂ ಅವರು ಅದೇ ಜನಬೆಂಬಲದಿಂದ ಗೆಲ್ಲಲಿ ಹಾಗೂ ಮುಂದಿನ ದಿನಗಳಲ್ಲಿ ಸಚಿವ ಸ್ಥಾನದಿಂದಲೂ ಹೆಚ್ಚಿನ ಜನಸೇವೆಗೆ ಅವಕಾಶ ಸಿಗಲಿ ಎಂದು ಶಾಸಕರ ಫೋಟೋ ಹಿಡಿದು ಶಬರಿಮಲೆ ದೇವರ ದರ್ಶನ ಪಡೆದು ಪ್ರಾರ್ಥನೆ ಮಾಡಿದ್ದೇವೆ” ಎಂದು ಹೇಳಿದರು.

ಈ ಭಕ್ತಿಯಾತ್ರೆಯಲ್ಲಿ ಪ್ರಭುದೇವ, ಹರೀಶ, ಶಶಿ, ವಿನಯ್, ವರದರಾಜ್, ಕೇಶವ, ಚಂದ್ರ, ಕೃಷ್ಣ, ಉಮೇಶ್, ರವಿ, ಆನಂದ, ದರ್ಶನ್, ದೇವರಾಜ್, ವಿರುಪಾಕ್ಷಿ, ಧರ್ಮ, ತೇಜ, ಅವಿನಾಶ್, ಯೋಗೇಶ್ ಸೇರಿದಂತೆ ಹಲವಾರು ಯುವಕರು ಭಾಗವಹಿಸಿದ್ದರು.

error: Content is protected !!