ಅರಸೀಕೆರೆಯಲ್ಲಿ ಅದ್ದೂರಿಯಾಗಿ ಜರುಗಿದ ಶ್ರೀ ಲಕ್ಷ್ಮೀ ದೇವಿಯ ಕಾರ್ತಿಕ ಮಹೋತ್ಸವ

The Karthika Mahotsav and Kadali Puja of Goddess Lakshmi, organized by the Deshani Youth Brigade and villagers, was conducted with devotion.

ಅರಸೀಕೆರೆ: ದೇಶಾಣಿ ಯುವ ಬ್ರಿಗೇಡ್ ಹಾಗೂ ಗ್ರಾಮಸ್ಥರಿಂದ ಆಯೋಜನೆ ಮಾಡಿದ್ದ ಶ್ರೀ ಲಕ್ಷ್ಮೀ ದೇವಿಯರ ಕಾರ್ತಿಕ ಮಹೋತ್ಸವ ಹಾಗೂ ಕದಲಿ ಪೂಜೆ ಭಕ್ತಿಪೂರ್ವಕವಾಗಿ ಸಂಪನ್ನಗೊಂಡಿದೆ.

ಶುಕ್ರವಾರ ಬೆಳಿಗ್ಗೆಯಿಂದಲೇ ಶ್ರೀ ಲಕ್ಷ್ಮೀ ದೇವಿ ಅಮ್ಮನವರಿಗೆ ಪುಣ್ಯ ಕಾರ್ಯಕಾರ್ಯ ಹಾಗೂ ಅಭಿಷೇಕ ನೇರವೇರಿದ್ದು, ಸಂಜೆ ವೇಳೆಗೆ ವಿಳೇದೆಲೆ ಕದಲಿ ಹಾಗೂ ತಳಿರು ತೋರಣದಿಂದ ಅಮ್ಮನವರಿಗೆ ವಿಶೇಷವಾಗಿ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.

ದೇವಾಲಯ ಸುತ್ತಲೂ ಹಾಗೂ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ದೀಪದಿಂದ ಅಲಂಕಾರಗೊಳಿಸಿಲಾಗಿತ್ತು ಮಹಿಳೆಯರು ದೇವಾಲಯ ಸುತ್ತ ನೂರಾರು ದೀಪಗಳನ್ನು ಹಚ್ಚಿ ಅಮ್ಮನವರಿಗೆ ದೀಪದಿಂದ ಆರತಿ ಮಾಡಿ ಅಮ್ಮನವರ
ಕೃಪೆಗೆ ಪಾತ್ರರಾದರು.

ಈ ವೇಳೆ ಗ್ರಾಮದ ಹಿರಿಯರಾದ ಲಕ್ಷ್ಮಯ್ಯ, ಶಂಕರಪ್ಪ, ಶ್ರೀನಿವಾಸ, ಸೋಮಶೇಖರ್, ದಾಸಯ್ಯ, ಶಂಕರಯ್ಯ, ವಿರೂಪಾಕ್ಷ, ಚಂದ್ರಪ್ಪ, ಕುಮಾರ್, ರಮೇಶ್, ಸಿದ್ದಯ್ಯ, ದೇಶಾಣಿ ಯುವ ಬ್ರಿಗೇಡ್ ಅಧ್ಯಕ್ಷರ ಶಿವಾನಂದ್, ಪ್ರಧಾನ ಕಾರ್ಯದರ್ಶಿ ದರ್ಶನ್, ಉಪಾಧ್ಯಕ್ಷರಾದ ರವಿ, ಅಶೋಕ್, ಪ್ರಕಾಶ್, ರಘು, ಕಾರ್ಯದರ್ಶಿ ಗಿರೀಶ್, ಖಜಾಂಚಿ ಬಸವರಾಜು, ಹಾಗೂ ಸದಸ್ಯರಾದ ಅನಿಲ, ಕಾರ್ತಿಕ್, ಮನು, ಅಭಿಷೇಕ್, ಸಿದ್ದೇಶ್, ಶಿವಕುಮಾರ್, ಆನಂದ, ಯೋಗಿ, ಕುಬೇರ, ಸೇರಿದಂತೆ ಸಂಘದ ಪಧಾದಿಕಾರಿಗಳು ಹಾಗೂ ಸಮಸ್ತ ಗ್ರಾಮಸ್ಥರು ಉಪಸ್ಥಿತರಿದ್ದರು.