ಹಾಸನ: ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮೇಲ್ಭಾಗದಲ್ಲಿ ನೂತನವಾಗಿ ನಿರ್ಮಿಸಿರುವ ಡಿವಿಜಿ ಸಭಾಂಗಣದ ಉದ್ಘಾಟನೆ ಸೆ.30 ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಕೆ.ಹೆಚ್.ವೇಣುಕುಮಾರ್ ತಿಳಿಸಿದರು.
ಇಂದು ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಅವರು, ಸ್ಥಳೀಯ ಶಾಸಕ ಹೆಚ್.ಪಿ.ಸ್ವರೂಪ್ ಪ್ರಕಾಶ್ ಅವರು ಉದ್ಘಾಟನೆ ನೆರವೇರಿಸುವರು ಎಂದರು. ವಿಶೇಷ ಆಹ್ವಾನಿತರಾಗಿ ಕೆಯೂಡಬ್ಲ್ಯೂಜೆ ರಾಜ್ಯಾಧ್ಯಕ್ಷ ಟಿ.ವಿ.ಶಿವಾನಂದ ತಗಡೂರು ಆಗಮಿಸುವರು, ಅಧ್ಯಕ್ಷತೆಯನ್ನು ಕೆ.ಹೆಚ್.ವೇಣುಕುಮಾರ್ ವಹಿಸುವರು ಎಂದರು.
ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ಬಿ.ಮದನಗೌಡ ಆಶಯ ನುಡಿಗಳನ್ನಾಡುವರು. ಮುಖ್ಯ ಅತಿಥಿಗಳಾದಿ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ, ಎಸ್ಪಿ ಮೊಹಮ್ಮದ್ ಸುಜೀತಾ, ಜಿಪಂ ಸಿಇಒ ಡಾ.ಬಿ.ಆರ್.ಪೂರ್ಣಿಮಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ನಿರ್ದೇಶಕರಾದ ಮೀನಾಕ್ಷಮ್ಮ, ಕೆಯೂಡಬ್ಲ್ಯೂಜೆ ವಿಶೇಷ ಆಹ್ವಾನಿತ ರವಿ ನಾಕಲಗೂಡು, ಮಾಜಿ ಅಧ್ಯಕ್ಷ ಎಸ್.ಆರ್.ಪ್ರಸನ್ನ ಕುಮಾರ್, ಬಾಳ್ಳುಗೋಪಾಲ್ ಮೊದಲಾದವರು ಆಗಮಿಸಲಿದ್ದಾರೆ ಎಂದರು.
ಇದೇ ವೇಳೆ ನಗರದ ಇಂಡಿಯಾನ ಆಸ್ಪತ್ರೆ ವತಿಯಿಂದ ನಗರ ಹಾಗೂ ಜಿಲ್ಲೆಯ ಎಲ್ಲ ಪತ್ರಕರ್ತರಿಗೆ ಹೃದಯ ತಪಾಸಣೆ ಆರೋಗ್ಯ ಶಿಬಿರ ಏರ್ಪಡಿಸಲಾಗಿದೆ ಎಂದರು.ಅಂದು ಎಲ್ಲ ಪತ್ರಕರ್ತರು, ಹೃದಯಕ್ಕೆ ಸಂಬAಧಪಟ್ಟ ಎಲ್ಲ ತಪಾಸಣೆ ಮಾಡಿಸಿಕೊಳ್ಳುವಂತೆ ಮನವಿ ಮಾಡಿದರು.
ಸಂಘವು ಗಟ್ಟಿಯಾಗಿದ್ದರೆ, ಸಂಘಟನಾತ್ಮಕವಾಗಿದ್ದರೆ ಏನೇ ಕೆಲಸ ಬೇಕಾದ್ರೂ ಮಾಡಬಹುದು. ತಮಗೆ ಸಿಕ್ಕ ಅವಧಿಯಲ್ಲಿ ಭವನದ ಮೇಲ್ಭಾಗದಲ್ಲಿ ವಿಶಾಲವಾದ ಭವನದಲ್ಲಿ ಸುಮಾರು 18-20 ಲಕ್ಷ ರೂ. ವೆಚ್ಚದಲ್ಲಿ ವಿಶಾಲವಾದ ಭವನ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಈ ಆಡಳಿತ ಮಂಡಳಿತ ಎಲ್ಲ ಪದಾಧಿಕಾರಿಗಳು, ಸದಸ್ಯರು ಸಹಕಾರ ಕೊಟ್ಟಿದ್ದಾರೆ ಎಂದು ವಿವರಣೆ ನೀಡಿದರು.
ಜಿಲ್ಲೆಯ ಸಮಸ್ತ ಪತ್ರಕರ್ತರೂ ಆಗಮಿಸಿ ಹೃದಯ ತಪಾಸಣಾ ಶಿಬಿರದ ಸದುಪಯೋಗ ಪಡಿಸಿಕೊಳ್ಳುವುದರ ಜೊತೆಗೆ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಶಶಿಧರ್ ಬಿ.ಸಿ., ಉಪಾಧ್ಯಕ್ಷ ಕೆ.ಎಂ.ಹರೀಶ್, ಕಾರ್ಯದರ್ಶಿ ಶ್ರೀನಿವಾಸ್ ಪಿ.ಎ., ಕಾರ್ಯಕಾರಿ ಸಮಿತಿ ಸದಸ್ಯರಾದ ಬಿ.ಆರ್.ಬೊಮ್ಮೇಗೌಡ, ಹೆತ್ತೂರು ನಾಗರಾಜ್ ಇದ್ದರು.










