11.8 C
Munich
Home News ಚನ್ನರಾಯಪಟ್ಟಣ: ಚಿರತೆ ಮರಿಗಳನ್ನು ತಾಯಿ ಮಡಿಲಿಗೆ ಸೇರಿಸಿದ ಅರಣ್ಯ ಇಲಾಖೆಯ ಸ್ಫೂರ್ತಿದಾಯಕ ಕಾರ್ಯ

ಚನ್ನರಾಯಪಟ್ಟಣ: ಚಿರತೆ ಮರಿಗಳನ್ನು ತಾಯಿ ಮಡಿಲಿಗೆ ಸೇರಿಸಿದ ಅರಣ್ಯ ಇಲಾಖೆಯ ಸ್ಫೂರ್ತಿದಾಯಕ ಕಾರ್ಯ

The Forest Department has rescued three leopard cubs from a sugarcane field in Bediganahalli village in Channarayapatna taluk.

ಹಾಸನ: ಚನ್ನರಾಯಪಟ್ಟಣ ತಾಲ್ಲೂಕಿನ ಬೇಡಿಗನಹಳ್ಳಿ ಗ್ರಾಮದ ಕಬ್ಬಿನ ಗದ್ದೆಯಲ್ಲಿದ್ದ ಮೂರು ಚಿರತೆ ಮರಿಗಳನ್ನು ಅರಣ್ಯ ಇಲಾಖೆ ಉಪಾಯದಿಂದ ತಾಯಿ ಮಡಿಲು ಸೇರಿಸಿದೆ.

ಅರಣ್ಯ ಇಲಾಖೆ ಹಾಗೂ ಕಾಡು ಪ್ರಾಣಿಗಳ ನಡುವಿನ ಬಾಂಧವ್ಯದ ಬೆಸುಗೆಯಾಗಿ ಈ ಸ್ಟೋರಿ ಕಂಡುಬಂದಿದೆ.ಅರಣ್ಯ ಇಲಾಖೆ ಅಧಿಕಾರಿಗಳ ತಾಳ್ಮೆ, ಪ್ರಜ್ಞೆ ಹಾಗೂ ಪ್ರಾಣಿಗಳ ಮೇಲಿನ ಮಮತೆಯ ಪ್ರತೀಕವಾಗಿದೆ.

ಕಬ್ಬು ಕಟಾವು ಮಾಡುತ್ತಿದ್ದ ರೈತ ಚೆಲುವೇಗೌಡ ಅವರ ಕಣ್ಣಿಗೆ ಗದ್ದೆಯಲ್ಲಿ ಮೂರು ಚಿಕ್ಕ ಚಿರತೆ ಮರಿಗಳು ಬಿದ್ದವು. ಕೂಡಲೇ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.

ಸ್ಥಳಕ್ಕೆ ಡಿಎಫ್‌ಓ ಸೌರಭ್‌ಕುಮಾರ್ ಹಾಗೂ ಡಿಆರ್‌ಎಫ್‌ಓ ಶಂಕರ್‌ ನೇತೃತ್ವದ ತಂಡ ಧಾವಿಸಿತು.
ಮರಿಗಳನ್ನು ತಾಯಿ ಮಡಿಲಿಗೆ ಸೇರಿಸಲು ಅಧಿಕಾರಿಗಳು ವಿಶೇಷ ಕಾರ್ಯಾಚರಣೆ ಆರಂಭಿಸಿದರು.

ರಾತ್ರಿ ವೇಳೆ ಮರದ ಪೆಟ್ಟಿಗೆಯಲ್ಲಿ ಮರಿಗಳನ್ನು ಇಟ್ಟು ಅರಣ್ಯ ಸಿಬ್ಬಂದಿ ದೂರದಿಂದ ನಿಗಾವಹಿಸುತ್ತಿದ್ದರು. ಮೊದಲ ರಾತ್ರಿ ತಾಯಿ ಚಿರತೆ ಬಂದು ಒಂದು ಮರಿಯನ್ನು ಕಚ್ಚಿಕೊಂಡು ಹೋಗಿ ಉಳಿದ ಎರಡನ್ನು ಬಿಟ್ಟು ಹೋಯಿತು.

ಮತ್ತೆ ಹಾಲುಣಿಸಿ ಆರೈಕೆ ಮಾಡಿದ ಬಳಿಕ ಎರಡನೇ ರಾತ್ರಿ ಎರಡು ಮರಿಗಳನ್ನು ಪೆಟ್ಟಿಗೆಯಲ್ಲಿ ಇಡಲಾಯಿತು. ಈ ಬಾರಿ ತಾಯಿ ಬಂದು ಇನ್ನೊಂದು ಮರಿಯನ್ನು ಕಚ್ಚಿಕೊಂಡು ಹೋಯಿತು.

ಒಂದು ಮರಿ ಮಾತ್ರ ಉಳಿದುಕೊಂಡಿತು.
ಡಿಎಫ್‌ಓ ಸೌರಭ್‌ಕುಮಾರ್ ಹಿಂಜರಿಯದೆ, ಮೂರನೇ ಮರಿಯನ್ನೂ ತಾಯಿಯ ಬಳಿ ಸೇರಿಸಲು ಪಣ ತೊಟ್ಟರು. ಭದ್ರಾ ಅರಣ್ಯದಿಂದ ಶ್ವಾನದಳವನ್ನು ಕರೆಸಿ ಚಿರತೆ ಹೆಜ್ಜೆ ಗುರುತು ಹುಡುಕಲಾಯಿತು. ಒಂದು ಕಿಲೋ ಮೀಟರ್ ದೂರದಲ್ಲಿ ತಾಯಿ ಚಿರತೆ ಎರಡು ಮರಿಗಳ ಜೊತೆಗೆ ಇರುವ ಸ್ಥಳ ಪತ್ತೆಯಾಯಿತು.

ಅರಣ್ಯ ಸಿಬ್ಬಂದಿ ಥರ್ಮಲ್ ಡ್ರೋಣ್ ಮೂಲಕ ದೃಶ್ಯಾವಳಿ ಹಿಡಿದರು. ಬಳಿಕ ತಾಯಿ ಚಿರತೆ ಇರುವ ಜಾಗದಿಂದ ಸ್ವಲ್ಪ ದೂರದಲ್ಲಿ ಮೂರನೇ ಮರಿಯನ್ನು ಪೆಟ್ಟಿಗೆಯಲ್ಲಿ ಇಟ್ಟರು. ಕರುಳ ಕುಡಿ ಮರಿ ಕೂಗುವ ಶಬ್ದ ಕೇಳಿ ಬಂದ ತಾಯಿ ಚಿರತೆ ಮರದ ಪೆಟ್ಟಿಗೆಯ ಮೇಲಿದ್ದ ತುಂಡನ್ನು ಕಾಲಿನಿಂದ ಎಳೆದ ನಂತರ, ತನ್ನ ಮೂರನೇ ಮರಿಯನ್ನೂ ಕಚ್ಚಿಕೊಂಡು ಕಾಡಿನತ್ತ ತೆರಳಿತು.
ಕೊನೆಗೂ ಎರಡು ಗಂಡು ಮತ್ತು ಒಂದು ಹೆಣ್ಣು ಮರಿ ಸೇರಿ ಮೂರು ಮರಿಗಳನ್ನು ತಾಯಿಯ ಮಡಿಲಿಗೆ ಸೇರಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಯಿತು.

error: Content is protected !!