ಚನ್ನರಾಯಪಟ್ಟಣ: ಮದ್ಯಪಾನ ಮಾಡಿ ಶಾಲೆಗೆ ಬಂದು ವಿದ್ಯಾರ್ಥಿಗಳ ಮೇಲೆ ಹಲ್ಲೆ- ಸಹ ಶಿಕ್ಷಕ ಅಮಾನತು

The Education Department has also issued an order suspending Harish, a fellow teacher at the Government Higher Primary School in Sorekaipur village in Channarayapatna taluk, following the incident where he attended school drunk and beat up students.

ಚನ್ನರಾಯಪಟ್ಟಣ: ತಾಲ್ಲೂಕಿನ ಸೋರೆಕಾಯಿಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಹರೀಶ್ ಪಾನಮತ್ತನಾಗಿ ಶಾಲೆಗೆ ಹಾಜರಾಗಿ, ವಿದ್ಯಾರ್ಥಿಗಳನ್ನು ಥಳಿಸಿದ್ದ ಪ್ರಕರಣದ ಹಿನ್ನಲೆಯಲ್ಲಿ ಶಿಕ್ಷಣ ಇಲಾಖೆಯೂ ಅಮಾನತ್ತು ಮಾಡಿ ಆದೇಶ ನೀಡಿದೆ.

ಇದೇ ಡಿ.8 ರಂದು ಶಿಕ್ಷಕ ಮತ್ತು ಅತನ ಪತ್ನಿ ಶಾಲೆಗೆ ಬಂದು ವಿದ್ಯಾರ್ಥಿಗಳನ್ನು ಥಳಿಸಿದ್ದರು. ಈ ಬಗ್ಗೆ ಗ್ರಾಮಸ್ಥರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದರು.

ಸಿಆರ್ ಪಿ ಮತ್ತು ಶಿಕ್ಷಣ ಸಂಯೋಜಕರುಗಳ ಪ್ರಕರಣದ ಬಗ್ಗೆ ನೀಡಿರುವ ವರದಿ, ವಿದ್ಯಾರ್ಥಿಗಳ ಹೇಳಿಕೆ ಆಧರಿಸಿ ಹಾಗೂ ಕರ್ತವ್ಯ ಸಮಯದಲ್ಲಿ ಮದ್ಯಾಪಾನ ಮಾಡಿರುವುದಾಗಿ ಶಿಕ್ಷಕನೇ ಸ್ವ ಅಕ್ಷರದಲ್ಲಿ ಬರೆದು ಕೊಟ್ಟಿರುವ ಹಿನ್ನಲೆಯಲ್ಲಿ ಇಲಾಖೆಯ ವಿಚಾರಣೆ ಕಾಯ್ದಿರಿಸಿ, ಮುಂದಿನ ಆದೇಶದವರೆಗೆ ಅಮಾನತ್ತು ಮಾಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ದೀಪಾ ಆದೇಶ ನೀಡಿದ್ದಾರೆ.