ಹಾಸನ: ಹಾಸನಾಂಬ ದೇವಿಯ ದರ್ಶನ ಇಂದು ಅಂತ್ಯ — ಭಕ್ತಿಯಿಂದ ಮುಕ್ತಾಯಗೊಂಡ ಪವಿತ್ರ ಜಾತ್ರೆ

The darshan of Goddess Hassanamba, who is offered to devotees only once a year, concluded ritually at 1:06 pm today (Thursday).

ಹಾಸನ: ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುವ ಹಾಸನಾಂಬ ದೇವಿಯ ದರ್ಶನ ಇಂದು (ಗುರುವಾರ) ಮಧ್ಯಾಹ್ನ 1 ಗಂಟೆ 6 ನಿಮಿಷಕ್ಕೆ ಶಾಸ್ತ್ರೋಕ್ತವಾಗಿ ಅಂತ್ಯಗೊಂಡಿದೆ.

ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ, ಸಂಸದ ಶ್ರೇಯಸ್ ಪಟೇಲ್, ಶಾಸಕರಾದ ಕೆ.ಎಮ್. ಶಿವಲಿಂಗೇಗೌಡ ಮತ್ತು ಸ್ವರೂಪ್ ಪ್ರಕಾಶ್ ಹಾಗೂ ಜಿಲ್ಲಾಧಿಕಾರಿ, ದೇವಸ್ಥಾನ ಆಡಳಿತಾಧಿಕಾರಿಗಳ ಸಮ್ಮುಖದಲ್ಲಿ ದೇವಾಲಯದ ಬಾಗಿಲು ಶಾಸ್ತ್ರೋಕ್ತ ವಿಧಾನಗಳೊಂದಿಗೆ ಮುಚ್ಚಲಾಯಿತು.

ಜಿಲ್ಲಾಡಳಿತವು ಸಂಪ್ರದಾಯಾನುಸಾರ ವಿಧಿವಿಧಾನಗಳೊಂದಿಗೆ ಬಾಗಿಲು ಮುಚ್ಚುವ ಕಾರ್ಯ ನೆರವೇರಿಸಿದ್ದು, ಹಾಸನಾಂಬ ಜಾತ್ರೆಯ ಪವಿತ್ರ ಪರ್ವ ಅಧಿಕೃತವಾಗಿ ಅಂತ್ಯಗೊಂಡಿದೆ.

ದರ್ಶನದ ಕೊನೆಯ ಕ್ಷಣದಲ್ಲಿ ದೇವಸ್ಥಾನ ಆವರಣದಲ್ಲಿ ಸಾವಿರಾರು ಭಕ್ತರು “ಹಾಸನಾಂಬೆ ತಾಯಿಗೆ ಜಯ!” ಎಂದು ಘೋಷಣೆ ಹಾಕಿ ಭಾವಪೂರ್ಣ ವಿದಾಯ ಸಲ್ಲಿಸಿದರು.

ಇದರಿಂದ ಸುಮಾರು ಹತ್ತು ದಿನಗಳ ಕಾಲ ನಡೆದ ಭಕ್ತಿಯ ಉತ್ಸವಕ್ಕೆ ವಿಧ್ಯಕ್ತ ತೆರೆ ಬಿದ್ದಿದೆ