ಹಾಸನ: ಸ್ಥಗಿತಗೊಂಡಿರುವ ಡಾ.ಎಸ್.ಎಲ್. ಭೈರಪ್ಪ ಕಲೆ–ಸಂಸ್ಕೃತಿ ಅಧ್ಯಯನ ಕೇಂದ್ರ ಸರ್ಕಾರದ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಬೇಸರ, ಶೀಘ್ರ ಹಣ ಬಿಡುಗಡೆ ಒತ್ತಾಯ

The construction work of the Dr. S.L. Bhyrappa Art and Culture Study Center, which is being constructed in Santeshivara village of the district, has been stalled for the past six months.

ಹಾಸನ: ಜಿಲ್ಲೆಯ ಸಂತೇಶಿವರ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಡಾ. ಎಸ್.ಎಲ್. ಭೈರಪ್ಪ ಕಲೆ ಮತ್ತು ಸಂಸ್ಕೃತಿ ಅಧ್ಯಯನ ಕೇಂದ್ರದ ಕಟ್ಟಡ ಕಾಮಗಾರಿ ಕಳೆದ ಆರು ತಿಂಗಳಿನಿಂದ ಸ್ಥಗಿತಗೊಂಡಿದೆ. ಸುಮಾರು ಐದು ಕೋಟಿ ರೂ. ವೆಚ್ಚದಲ್ಲಿ ಈ ಕೇಂದ್ರ ನಿರ್ಮಾಣಗೊಳ್ಳಬೇಕಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅವಧಿಯಲ್ಲಿ ಯೋಜನೆಗೆ ಅನುಮೋದನೆ ದೊರೆತಿತ್ತು.

ಮುಂದಿನ ಹಂತದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಾಲದಲ್ಲಿ ಒಂದು ಕೋಟಿ ರೂ. ಬಿಡುಗಡೆಗೊಂಡು, ಅದರಷ್ಟರ ಮಟ್ಟಿನ ಕಾಮಗಾರಿ ಮುಗಿದಿದೆ. ಆದರೆ ಉಳಿದ ನಾಲ್ಕು ಕೋಟಿ ರೂ. ಬಿಡುಗಡೆಯಾಗದ ಕಾರಣ ಕಟ್ಟಡ ನಿರ್ಮಾಣ ಕಾರ್ಯ ಮಧ್ಯದಲ್ಲೇ ನಿಂತು ಹೋಗಿದೆ.

ಕಾಮಗಾರಿ ಸ್ಥಗಿತದಿಂದ ಗ್ರಾಮಸ್ಥರು ನಿರಾಶೆ ವ್ಯಕ್ತಪಡಿಸಿ, “ಕೇಂದ್ರ ಪೂರ್ಣಗೊಂಡರೆ ವಿದ್ಯಾರ್ಥಿಗಳು ಹಾಗೂ ಸಂಶೋಧಕರು ಪ್ರಯೋಜನ ಪಡೆಯಬಹುದು. ಸರ್ಕಾರ ತಕ್ಷಣ ಗಮನಹರಿಸಿ ಉಳಿದ ಹಣ ಬಿಡುಗಡೆ ಮಾಡಿ ಕಾಮಗಾರಿ ಪೂರ್ಣಗೊಳಿಸಬೇಕು” ಎಂದು ಒತ್ತಾಯಿಸಿದ್ದಾರೆ.

ಈ ಕುರಿತು ಸ್ಥಳೀಯರ ಮನವಿ ಸಂಬಂಧಪಟ್ಟ ಇಲಾಖೆಯ ಗಮನ ಸೆಳೆದಿದ್ದು, ಹಣ ಬಿಡುಗಡೆಗೆ ಸರ್ಕಾರ ಕ್ರಮಕೈಗೊಳ್ಳಬೇಕಿದೆ ಎಂಬುದು ಸಾರ್ವಜನಿಕರ ನಿರೀಕ್ಷೆಯಾಗಿದೆ.
.