ಹಾಸನ : ಮಲೆನಾಡಿನಲ್ಲಿ ಕಾಡುಕೋಣಗಳ ಆರ್ಭಟ – ಕಾಫಿ ತೋಟಕ್ಕೆ ಭಾರಿ ಹಾನಿ

ಸಕಲೇಶಪುರ:ತಾಲ್ಲೂಕಿನ ಹೊಸಳ್ಳಿ ಗ್ರಾಮದಲ್ಲಿ ಕಾಡುಕೋಣಗಳ ಉಪಟಳದಿಂದ ಕಾಫಿ ತೋಟಕ್ಕೆ ಭಾರೀ ಹಾನಿ ಸಂಭವಿಸಿದೆ. ಶ್ರೀಕಾಂತ್‌ಗೌಡ ಎಂಬುವವರ ತೋಟದಲ್ಲಿ ಹತ್ತಾರು ವರ್ಷಗಳಿಂದ ಬೆಳೆದಿದ್ದ ಕಾಫಿ ಗಿಡಗಳನ್ನು ಕಾಡುಕೋಣ ಕೊಂಬಿನಿಂದ ಕಿತ್ತೆಸೆದು ನೆಲಸಮ ಮಾಡಿದೆ.

ಕಾಫಿ ತೋಟದಲ್ಲಿ ಹತ್ತಾರು ಕಾಟಿಗಳು ಬೀಡುಬಿಟ್ಟಿದ್ದು, ಕಾಡುಕೋಣ ದಾಳಿ ಮಾಡುವ ಭಯದಿಂದ ಕಾರ್ಮಿಕರು ಕೆಲಸಕ್ಕೆ ಬರಲು ಹೆದರುತ್ತಿದ್ದಾರೆ. ಸ್ಥಳೀಯರು ಕಾಡುಕೋಣ ಆರ್ಭಟದ ವಿಡಿಯೋವನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

ಗ್ರಾಮಸ್ಥರು ಕಾಡುಕೋಣಗಳನ್ನು ಹಿಡಿದು ಕಾಡಿಗೆ ಸ್ಥಳಾಂತರಿಸಲು ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಆದರೆ ಉಪಟಳ ಹೆಚ್ಚಿದ್ದರೂ ಅರಣ್ಯ ಇಲಾಖೆ ಮೌನ ವಹಿಸಿರುವುದರಿಂದ ರೈತರಲ್ಲಿ ಆಕ್ರೋಶ ವ್ಯಕ್ತವಾಗಿದೆ