4.2 C
Munich
Home News ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಹಾನುಬಾಳುವಿನಲ್ಲಿ ಅದ್ದೂರಿ ಆಚರಣೆ

ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಹಾನುಬಾಳುವಿನಲ್ಲಿ ಅದ್ದೂರಿ ಆಚರಣೆ

ಹಾಸನ: ಜಿಲ್ಲೆ ಸಕಲೇಶಪುರ ತಾಲೂಕಿನ ಹಾನುಬಾಳುವಿನಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ 171ನೇ ಜಯಂತಿಯನ್ನು ಭಕ್ತಿಭಾವದಿಂದ ಹಾಗೂ ಅದ್ದೂರಿಯಾಗಿ ಆಚರಿಸಲಾಯಿತು.

ಹಾನುಬಾಳು, ದೇವಲದ ಕೆರೆ, ಹೆಗ್ಗದ್ದೇ, ಕುಂಬರಡಿ, ಹೊಂಕಾರವಳ್ಳಿ, ಜಾನ್ನಪುರ, ಹಾರ್ಲೆ ಕೂಡಿಗೆ, ಸಕಲೇಶಪುರ, ಬಾಗೆ, ವನಗುರು ಕುಡುರಸ್ತೆ ಸೇರಿದಂತೆ ವಿವಿಧ ಪ್ರದೇಶಗಳಿಂದ ಬಿಲ್ಲವ ಸಮುದಾಯದ ಜನರು ಹಾಗೂ ಬಿಲ್ಲವ ಸಂಘದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಚ್.ಎಂ ವಿಶ್ವನಾಥ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್ ಹಾಗೂ ಕಾಂಗ್ರೆಸ್ ಮುಖಂಡ ಭಾಸ್ಕರಣ್ಣ ಉಪಸ್ಥಿತರಿದ್ದು, ನಾರಾಯಣಗುರುಗಳ ಆದರ್ಶಗಳನ್ನು ಸ್ಮರಿಸಿ, ಸಮಾಜದ ಒಗ್ಗಟ್ಟು ಹಾಗೂ ಅಭಿವೃದ್ಧಿಗೆ ಒತ್ತು ನೀಡುವಂತೆ ಕರೆ ನೀಡಿದರು.

ಸಮುದಾಯದ ಶ್ರದ್ಧೆ ಮತ್ತು ಸಕ್ರಿಯ ಭಾಗವಹಿಸುವಿಕೆಯಿಂದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

error: Content is protected !!