13.2 C
Munich
Home ರಾಜಕೀಯ Tamil Nadu:ತಮಿಳುನಾಡು:ನಂಬರ್​​ ಗೇಮ್​​ನಲ್ಲಿ ವಿಜಯ್​ ಸಕ್ಸಸ್​​! ದಳಪತಿ ಸರ್ಕಾರದಲ್ಲಿ ಇಬ್ಬರು ಡಿಸಿಎಂ? ಇವರೇನಾ ಅವರು?

Tamil Nadu:ತಮಿಳುನಾಡು:ನಂಬರ್​​ ಗೇಮ್​​ನಲ್ಲಿ ವಿಜಯ್​ ಸಕ್ಸಸ್​​! ದಳಪತಿ ಸರ್ಕಾರದಲ್ಲಿ ಇಬ್ಬರು ಡಿಸಿಎಂ? ಇವರೇನಾ ಅವರು?

ಟಿವಿಕೆ ನಾಯಕ ವಿಜಯ್ ಹಾಗೂ ವಿಸಿಕೆ ನಾಯಕ ತಿರುಮಾವಳವನ್ ತಮಿಳುನಾಡು ರಾಜಕೀಯ ಬೆಳವಣಿಗೆಗಳ ನಡುವಿನ ಚಿತ್ರ.
ವಿಜಯ್‌ಗೆ ವಿಸಿಕೆ ಬೆಂಬಲ ಸಿಗುವ ಸಾಧ್ಯತೆಗಳ ನಡುವೆ ತಮಿಳುನಾಡು ರಾಜಕೀಯದಲ್ಲಿ ಹೊಸ ಸಮೀಕರಣಗಳ ಚರ್ಚೆ ಜೋರಾಗಿದೆ.

Tamil Nadu,ತಮಿಳುನಾಡು,ಮೇ,09,2026(www.kannadapost.com): ನಂಬರ್​​ ಗೇಮ್​​ನಲ್ಲಿ ನಟ ವಿಜಯ್​ ಬಹುತೇಕ ಸಕ್ಸಸ್​ ಆಗಿದ್ದಾರೆ. ನಟ ವಿಜಯ್ ಗೆ ವಿಸಿಕೆ ಶಾಸಕರಿಂದ ಬೆಂಬಲ ಸೂಚಿಸಲು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಇದರಂದಿಗೆ ಅವರ ಬೇಡಿಕೆಗಳಿಗೂ ಸಹ ವಿಜಯ್​ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.

Tamil Nadu ರಾಜಕೀಯ ವಲಯದಲ್ಲಿ (Tamilnadu Politics) ನಟ ವಿಜಯ್ (Vijay) ಅವರ ಪ್ರವೇಶದ ನಂತರ ಹೊಸ ಚರ್ಚೆಗಳು, ಹೊಸ ಬದಲಾವಣೆಗಳು ಜೋರಾಗಿವೆ. ವಿಶೇಷವಾಗಿ ಮಿತ್ರ ಪಕ್ಷಗಳ ಬೆಂಬಲ ಪಡೆಯಲು ವಿಜಯ್​ ನಾನಾ ಕಸರತ್ತು ನಡೆಸುತ್ತಿದ್ದು, ವಿಸಿಕೆ ಪಕ್ಷದ ಬೆಂಬಲದ ವಿಚಾರ ಹೆಚ್ಚು ಗಮನ ಸೆಳೆದಿದೆ. ಈಗಾಗಲೇ ವಿಸಿಕೆ ಶಾಸಕರ ಬೆಂಬಲ ವಿಜಯ್ ಕಡೆ ಇರುವ ಸಾಧ್ಯತೆಗಳು ಗಟ್ಟಿಯಾಗಿರುವುದಾಗಿ ರಾಜಕೀಯ ವಲಯದಲ್ಲಿ ಮಾತು ಕೇಳಿಬರುತ್ತಿದೆ.

ವಿಜಯ್ ಅವರ ಟಿವಿಕೆ ಪಕ್ಷದ ಅಧ್ಯಕ್ಷರಾಗಿರುವ ಕಾರಣ, ಅವರು ರಾಜಕೀಯವಾಗಿ ಮುಂದಿನ ಹಂತಕ್ಕೆ ಹೋಗುವುದು ಖಚಿತವಾಗಿದೆ ಎಂದು ಕಾಣುತ್ತಿದೆ. ಈ ಬೆನ್ನಲ್ಲೇ ಬಹಳ ಇಕ್ಕಟ್ಟಿಗೆ ಕಾರಣವಾಗಿದ್ದ ವಿಸಿಕೆ ಕೂಡ ಬೆಂಬಲ ನೀಡಲು ಒಪ್ಪಿದೆ ಎಂದು ಹೇಳಲಾಗಿದೆ.

ವಿಜಯ್​​ಗೆ ಬೆಂಬಲ ಸೂಚಿಸಲು ಒಪ್ಪಿದ ವಿಸಿಕೆ

ನಟ ಮತ್ತು ಟಿವಿಕೆ ಪಕ್ಷದ ನಾಯಕ ವಿಜಯ್​ ಅವರು ಚೆನ್ನೈಯಲ್ಲಿರುವ ವಿಸಿಕೆ ಕಚೇರಿಗೆ ಶೀಘ್ರದಲ್ಲೇ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ವಿಜಯ್ ಕಚೇರಿಗೆ ಬಂದ ಕೂಡಲೇ ವಿಸಿಕೆ ನಾಯಕ ತಿರುಮಾವಳವನ್ ತಮ್ಮ ಬೆಂಬಲವನ್ನು ಅಧಿಕೃತವಾಗಿ ಘೋಷಿಸುವ ನಿರೀಕ್ಷೆ ಇದೆ. ಈಗಾಗಲೇ ಆಂತರಿಕವಾಗಿ ವಿಸಿಕೆ ನಾಯಕರ ನಡುವೆ ಈ ಬಗ್ಗೆ ಚರ್ಚೆಗಳು ಪೂರ್ಣಗೊಂಡಿದ್ದು, ವಿಜಯ್ ಪರ ಬೆಂಬಲ ನೀಡುವ ನಿರ್ಧಾರಕ್ಕೆ ಬಂದಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ.
ರಾಜ್ಯಪಾಲರಿಗೆ ಬೆಂಬಲ ಪತ್ರ ನೀಡಲು ಸಿದ್ಧತೆ
ವಿಸಿಕೆ ಶಾಸಕರಿಂದ ಬೆಂಬಲ ಪತ್ರವನ್ನು ಪಡೆದು, ಅದನ್ನು ರಾಜ್ಯಪಾಲರಿಗೆ ಸಲ್ಲಿಸುವ ಸಿದ್ಧತೆಗಳು ಕೂಡ ನಡೆಯುತ್ತಿವೆ. ವಿಸಿಕೆ ನಾಯಕರ ಪರವಾಗಿ, ಟಿವಿಕೆ ಪಕ್ಷದ ಪ್ರತಿನಿಧಿಗಳು ರಾಜ್ಯಪಾಲರಾದ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಭೇಟಿ ಮಾಡಿ, ತಮ್ಮ ಬೆಂಬಲದ ಬಗ್ಗೆ ತಿಳಿಸಲು ಮನವಿ ಸಲ್ಲಿಸಿದ್ದಾರೆ. ಈ ಮನವಿಯ ಮೇರೆಗೆ ಗವರ್ನರ್ ಕೂಡ ಪರಿಸ್ಥಿತಿಯನ್ನು ಗಮನಿಸಿ, ಮುಂದಿನ ಬೆಳವಣಿಗೆಗಾಗಿ ಕಾದು ನೋಡುತ್ತಿರುವಂತಿದೆ. ವಿಜಯ್ ಅವರು ಅಧಿಕೃತವಾಗಿ ಭೇಟಿ ನೀಡಿ ಮಾತನಾಡುವವರೆಗೆ ವಿಸಿಕೆ ಪಕ್ಷ ಮೌನ ನೀತಿ ಅನುಸರಿಸುತ್ತಿದೆ. ಆದರೆ ವಿಜಯ್ ಆಗಮನದ ಬಳಿಕ ವಿಸಿಕೆ ಶಾಸಕರ ಬೆಂಬಲವನ್ನು ಸಾರ್ವಜನಿಕವಾಗಿ ಘೋಷಿಸುವುದಾಗಿ ಪಕ್ಷದ ಮೂಲಗಳು ಸೂಚಿಸುತ್ತಿವೆ. ಇದರಿಂದ ವಿಜಯ್ ರಾಜಕೀಯವಾಗಿ ಬಲಿಷ್ಠ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಾಗಿದೆ.
ತಮಿಳುನಾಡು ಸಿಎಂ ಅಭ್ಯರ್ಥಿ ವಿಜಯ್
ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ವಿಜಯ್

ದಳಪತಿ ಸರ್ಕಾರದಲ್ಲಿ ಇಬ್ಬರು ಡಿಸಿಎಂ?

ಇದೇ ಸಂದರ್ಭದಲ್ಲಿ, ವಿಜಯ್ ಸರ್ಕಾರ ರಚನೆಯಾದರೆ ಎರಡು ಉಪಮುಖ್ಯಮಂತ್ರಿಗಳ (ಡಿಸಿಎಂ) ಹುದ್ದೆಗಳನ್ನು ಸೃಷ್ಟಿಸುವ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಯುತ್ತಿದೆ. 1 ಡಿಸಿಎಂ ಹುದ್ದೆ ಕಾಂಗ್ರೆಸ್ ಪಕ್ಷದ ಪಾಲಾಗುವ ಸಾಧ್ಯತೆ ಇದ್ದರೆ, ಮತ್ತೊಂದು ಡಿಸಿಎಂ ಹುದ್ದೆ ವಿಸಿಕೆ ಪಕ್ಷದ ನಾಯಕರಿಗೆ ನೀಡುವ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದರಿಂದ ಒಕ್ಕೂಟ ಸರ್ಕಾರದೊಳಗೆ ಎಲ್ಲಾ ಪ್ರಮುಖ ಮೈತ್ರಿ ಪಕ್ಷಗಳಿಗೆ ಸಮಸ್ಥಾನಮಾನ ನೀಡುವ ಉದ್ದೇಶ ವಿಜಯ್ ಕಡೆ ಇದೆ ಎಂಬ ಮಾತು ಹೊರ ಬೀಳುತ್ತದೆ.
ಒಟ್ಟಿನಲ್ಲಿ, ನಟ ವಿಜಯ್ ಅವರ ರಾಜಕೀಯ ಹಾದಿಯಲ್ಲಿ ವಿಸಿಕೆ ಪಕ್ಷದ ಬೆಂಬಲ ಒಂದು ಪ್ರಮುಖ ತಿರುವಾಗಬಹುದು. ವಿಸಿಕೆ ಶಾಸಕರ ಬೆಂಬಲ ಪತ್ರ ಗವರ್ನರ್ ಕಚೇರಿಗೆ ತಲುಪಿದ ನಂತರ ರಾಜಕೀಯ ಸಮೀಕರಣಗಳು ಮತ್ತಷ್ಟು ಸ್ಪಷ್ಟವಾಗುವ ನಿರೀಕ್ಷೆ ಇದೆ. ವಿಜಯ್ ಚೆನ್ನೈಗೆ ಬಂದು ವಿಸಿಕೆ ಕಚೇರಿಯಲ್ಲಿ ನಡೆಯುವ ಮಾತುಕತೆ, ತಿರುಮಾವಳವನ್ ಅವರ ಅಧಿಕೃತ ಘೋಷಣೆ ಮತ್ತು ನಂತರದ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ತಮಿಳುನಾಡು ರಾಜಕೀಯಕ್ಕೆ ಮಹತ್ವದ ದಿಕ್ಕು ನೀಡಬಹುದೆಂದು ರಾಜಕೀಯ ವಲಯದಲ್ಲಿ ಮಾತು ಕೇಳಿಬರುತ್ತಿದೆ.
error: Content is protected !!