ಹಾಸನ: ನಗರದ ಸ್ಕಾಲರ್ಸ್ ಇಂಟರ್‌ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳು ಇತ್ತೀಚೆಗೆ ನಡೆದ ಅರಕಲಗೂಡು ಓಪನ್ ನ್ಯಾಷನಲ್ ಕರಾಟೆ ಚಾಂಪಿಯನ್‌ಶಿಪ್ – 2025ರಲ್ಲಿ ಉತ್ತಮ ಸಾಧನೆಗೈದಿದ್ದಾರೆ.
ಗ್ರೇಡ್ – 3 ರ ವಿದ್ಯಾರ್ಥಿ ಮಾಣ್ವಿಷ್ ಎಸ್. ಆಚಾರ 8 ವರ್ಷದ ವಿಭಾಗದಲ್ಲಿ ಇಂಡಿವಿಷ್ಯುವಲ್ ಕತಾಯಲ್ಲಿ ಪ್ರಥಮ ಸ್ಥಾನ ಹಾಗೂ ಇಂಡಿವಿಷ್ಯುಯಲ್ ಕುಮಿತೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಅದೇ ವಿಭಾಗದಲ್ಲಿ ಗ್ರೇಡ್ – 4 ರ ಯಶಾಂಕ ಪಿ. ಗೌಡ ಕತಾ ಮತ್ತು ಕುಮಿತೆ ಎರಡರಲ್ಲಿಯೂ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಇನ್ನೊಂದು ಹೆಮ್ಮೆ ತಂದ ಸಾಧನೆ ಎಂದರೆ ಗ್ರೇಡ್ – 8 ರ ದಿಗಂತ್ ಎಚ್. ಎನ್.,ಅವರು ಕತಾಯಲ್ಲಿ ಪ್ರಥಮ ಸ್ಥಾನ ಗೆದ್ದಿದ್ದಾರೆ.
ಇದಲ್ಲದೆ, ಗ್ರೇಡ್ – 3 ರ ಕಿಶನ್ ಗೌಡ ಕೆ. ಕತಾದಲ್ಲಿ ಪ್ರಥಮ ಸ್ಥಾನ ಹಾಗೂ ಗ್ರೇಡ್ – 5 ರ ಶ್ರೇಯಾ ತೃತೀಯ ಸ್ಥಾನ ಪಡೆದಿದ್ದಾರೆ.
ಸಂಸ್ಥಾಪಕ,ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಹರ್ಷ ವ್ಯಕ್ತಪಡಿಸಿ, “ವಿದ್ಯಾರ್ಥಿಗಳ ಪರಿಶ್ರಮ, ಪೋಷಕರ ಬೆಂಬಲ ಹಾಗೂ ಗುರುಗಳ ಮಾರ್ಗದರ್ಶನದಿಂದಲೇ ಈ ಯಶಸ್ಸು ಸಾಧ್ಯವಾಗಿದೆ” ಎಂದು
ವಿಜೇತ ವಿದ್ಯಾರ್ಥಿಗಳಿಗೆ ಹಾರ್ದಿಕವಾಗಿ ಅಭಿನಂದಿಸಿದ್ದಾರೆ.









