4.2 C
Munich
Home ರಾಜ್ಯ ಭಾರತಕ್ಕೆ ಊಹಿಸಲಾಗದ ದುಃಖ‌ ಕಾಡಲಿದೆ: ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯಿಂದ ಸ್ಫೋಟಕ ಭವಿಷ್ಯ!

ಭಾರತಕ್ಕೆ ಊಹಿಸಲಾಗದ ದುಃಖ‌ ಕಾಡಲಿದೆ: ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯಿಂದ ಸ್ಫೋಟಕ ಭವಿಷ್ಯ!

Sri Shivananda Shivayogi Rajendra Swamiji of Kodi Math has made a shocking prediction about the future of the state and the country. He has warned that signs of political upheaval will be seen in the state after Sankranti.

ಹಾಸನ, ಜೂನ್ 21, 2025: ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ರಾಜ್ಯ ಮತ್ತು ದೇಶದ ಭವಿಷ್ಯದ ಬಗ್ಗೆ ಆಘಾತಕಾರಿ ಭವಿಷ್ಯವನ್ನು ನುಡಿದಿದ್ದಾರೆ. ಸಂಕ್ರಾಂತಿ ಬಳಿಕ ರಾಜ್ಯದಲ್ಲಿ ರಾಜಕೀಯ ವಿಪ್ಲವದ ಲಕ್ಷಣಗಳು ಕಾಣಿಸಲಿವೆ ಎಂದು ಶ್ರೀಗಳು ಎಚ್ಚರಿಸಿದ್ದಾರೆ.

 ಭವಿಷ್ಯದ ಪ್ರಮುಖ ಅಂಶಗಳು:
ರಾಜಕೀಯ ಅಸ್ಥಿರತೆ: ಭಾರತದಲ್ಲಿ ಊಹಿಸಲಾಗದ ದುಃಖ ಮತ್ತು ರಾಜಕೀಯ ಗೊಂದಲ ಉಂಟಾಗಲಿದೆ. “ಮೇಘ ಸ್ಪೋಟ, ಯುದ್ಧ, ಅರಸನಾಲಯಕ್ಕೆ ಕಾರ್ಮೋಡ ಕವಿಯಲಿದೆ” ಎಂದು ಶ್ರೀಗಳು ಹೇಳಿದರು.

-ಪ್ರಕೃತಿ ವಿಕೋಪ: ಜನವರಿ 2026ರ ಸಂಕ್ರಾತಿ ಒಳಗೆ ಮೇಘ ಸ್ಪೋಟ, ಜಲಸ್ಫೋಟ, ವಾಯು ಮತ್ತು ಭೂ ಪ್ರಳಯದಂತಹ ವಿಕೋಪಗಳು ಸಂಭವಿಸಲಿವೆ. ಸಾಗರದಲ್ಲಿ ಜಲಸ್ಫೋಟದ ಭವಿಷ್ಯವನ್ನೂ ಶ್ರೀಗಳು ಹೇಳಿದ್ದಾರೆ.

ಮರುಕಳಿಸಲಿದೆ ಕರೊನಾ: ಕರೊನವು ಇನ್ನೊಂದು ರೂಪದಲ್ಲಿ ಕಾಣಿಸಿಕೊಳ್ಳಲಿದೆ, ಆದರೆ ಸಾವು-ನೋವು ಕಡಿಮೆಯಾದರೂ ಸಮಸ್ಯೆ ಮುಂದುವರಿಯಲಿದೆ.

ಸಾಮಾಜಿಕ ಗೊಂದಲ: ದ್ವೇಷ, ಅಸೂಯೆಯಿಂದ ಒಂದಿಬ್ಬರು ಬಲಿಯಾಗುವ ಸಾಧ್ಯತೆಯಿದೆ. ಜನಜೀವನ ಅಸ್ಥಿರವಾಗಲಿದೆ.

ಮಳೆ ವಿಪರೀತ: ಈ ವರ್ಷ ಉತ್ತಮ ಮಳೆಯಾಗುವ ಸಾಧ್ಯತೆಯಿದ್ದರೂ, ಅಕಾಲಿಕ ಮಳೆಯಿಂದ ತೊಂದರೆಯಾಗಲಿದೆ.

ಸಿದ್ದರಾಮಯ್ಯಗೆ ಭಯವಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಯಾವುದೇ ತೊಂದರೆಯಿಲ್ಲ ಎಂದ ಶ್ರೀಗಳು”ಮೋಡ ಬರುತ್ತೆ, ಮೋಡ ಹೋಗುತ್ತೆ” ಎಂದು ಮಾರ್ಮಿಕವಾಗಿ ಹೇಳಿದರು.

ರಹಸ್ಯಮಯ ಭವಿಷ್ಯ: “ಸೂಳೆಯಾ ಮಗನುಟ್ಟಿ, ಆಳುವನು ಮುನಿಪುರವ, ಯುದ್ದವಿಲ್ಲದೆ ಮಡಿಯೆ ಪುರವೆಲ್ಲ ಕೂಳಾದೀತು” ಎಂಬ ಶ್ರೀಗಳ ಭವಿಷ್ಯದ ಅರ್ಥವನ್ನು ಮುಂದೆ ವಿವರಿಸುವುದಾಗಿ ತಿಳಿಸಿದರು.

ದೇಶ-ವಿದೇಶದ ಭವಿಷ್ಯ: ಕೆಲವು ದೇಶಗಳು ಮುಳುಗಲಿದ್ದು, ಕೆಲವು ಏಳಲಿವೆ. ಯುದ್ಧದ ಸಾಧ್ಯತೆ ಸಂವತ್ಸರದವರೆಗೆ ಕಷ್ಟಕರವಾಗಿದೆ ಎಂದು ಶ್ರೀಗಳು ಹೇಳಿದರು.

 

error: Content is protected !!