12.7 C
Munich
Home Uncategorized ಅರಸೀಕೆರೆ : ಬಸವ ಸಾಂಸ್ಕೃತಿಕ ರಥ ಸ್ವಾಗತಕ್ಕೆ ಕರೆ

ಅರಸೀಕೆರೆ : ಬಸವ ಸಾಂಸ್ಕೃತಿಕ ರಥ ಸ್ವಾಗತಕ್ಕೆ ಕರೆ

ಅರಸೀಕೆರೆ : ಇದೇ ತಿಂಗಳ ೨೧ ರಂದು ಜಿಲ್ಲೆಗೆ ಆಗಮಿಸುತ್ತಿರುವ ಬಸವ ಸಾಂಸ್ಕೃತಿಕ ರಥವನ್ನು ಜಾತ್ಯತೀತ ಹಾಗೂ ಪಕ್ಷಾತೀತವಾಗಿ ಭವ್ಯ ಸ್ವಾಗತ ಕೋರಿ ಬರಮಾಡಿಕೊಳ್ಳುವುದರ ಜತೆಗೆ ಬಸವ ತತ್ವವನ್ನು ಜಗತ್ತಿಗೆ ಸಾರೋಣ ಎಂದು ಹಳೇಬೀಡು ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.

ನಗರದ ವಿವೇಕಾನಂದ ಬಿಇಡಿ ಕಾಲೇಜು ಸಭಾಂಗಣದಲ್ಲಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಶ್ರೀಗಳು, ೧೨ನೇ ಶತಮಾನದಲ್ಲಿ ಬಸವಾದಿ ಶರಣರು ತತ್ವ ಸಿದ್ಧಾಂತದ ಮೂಲಕ ಕ್ರಾಂತಿ ಮಾಡಿದರೆ ಪ್ರಸ್ತುತ ನಾವು ಅವರ ವಿಚಾರಧಾರೆಯ ಕ್ರಾಂತಿ ಮಾಡುವ ಮೂಲಕ ಬಸವಣ್ಣನ ತತ್ವ ಸಿದ್ಧಾಂತವನ್ನು ಜಗತ್ತಿಗೆ ಸಾರಬೇಕಿದೆ ಎಂದರು.

ಬಸವಣ್ಣನನ್ನು ಭಕ್ತಿ ಭಂಡಾರಿ, ಜಗಜ್ಯೋತಿ, ವಿಶ್ವಗುರು, ಸಾಮಾಜಿಕ ಹರಿಕಾರ, ಹೀಗೆ ಹಲವು ಹೆಸರಿನಲ್ಲಿ ಕರೆಯಲಾಗುತ್ತದೆ. ಇದರ ಜೊತೆಗೆ ರಾಜ್ಯ ಸರ್ಕಾರ ಬಸವಣ್ಣನನ್ನು ಸಾಂಸ್ಕೃತಿಕ ನಾಯಕ ಎಂದು ಬಿರುದು ನೀಡಿದ್ದು, ನಾವೆಲ್ಲ ಸಂಭ್ರಮಿಸಬೇಕಾದ ವಿಷಯವಾಗಿದೆ. ಹಾಗಾಗಿ ಅಂದು ಹಾಸನದಲ್ಲಿ ನಡೆಯುತ್ತಿರುವ ವಿಶ್ವಗುರು ಜಗಜ್ಯೋತಿ ಸಾಂಸ್ಕೃತಿಕ  ನಾಯಕ ಬಸವಣ್ಣ ಅವರ ಸಾಂಸ್ಕೃತಿಕ ಅಭಿಯಾನ ಕಾರ್ಯಕ್ರಮ ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವಾಗಲಿ ಎಂಬ ಆಶಯದೊಂದಿಗೆ ಜಿಲ್ಲೆಯ ಎಲ್ಲಾ ಮಠಾಧೀಶರ ಸಾನಿಧ್ಯದಲ್ಲಿ ಈ ಕಾರ್ಯಕ್ರಮ ಜರುಗಲಿದೆ.

ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಸವ ಅನುಯಾಯಿಗಳು ಪಾಲ್ಗೊಳ್ಳುವಂತೆ ಕರೆ ನೀಡಿದರು.
ಸಭೆಯಲ್ಲಿ ಮೂರು ಕಳಸ ಮಠದ ಜ್ಞಾನಪ್ರಭು ಸಿದ್ದರಾಮದೇಶಿ ಕೇಂದ್ರ ಸ್ವಾಮೀಜಿ, ಮಾಡಾಳು ನಿರಂಜನ ಮಠದ ರುದ್ರಮುನಿ ಸ್ವಾಮೀಜಿ, ಕೋಳಗುಂದ ಕೆದಿಗೆ ಮಠದ ಚಂದ್ರಶೇಖರ ಸ್ವಾಮೀಜಿ, ಡಿ.ಎಂ ಕುರ್ಕೆ ವಿರಕ್ತ ಮಠದ ಚಂದ್ರಶೇಖರ ಸ್ವಾಮೀಜಿ, ಮಾರಗೊಂಡನಹಳ್ಳಿ ವಿರಕ್ತಮಠದ ಅಭಿನಂದನ ಬಸವಲಿಂಗ ಸ್ವಾಮೀಜಿ ಮಾತನಾಡಿದರು.

ಸಮಾರಂಭದಲ್ಲಿ ವೀರಶೈವ ಲಿಂಗಾಯಿತ ಸಮಾಜ ಮುಖಂಡರಾದ ಶಶಿಧರ್, ಜಿವಿಟಿ ಬಸವರಾಜ್, ದಿವಾಕರ್ ಬಾಬು, ಬಿ.ಜಿ ನಿರಂಜನ್, ಜಿಪಂ ಮಾಜಿ ಸದಸ್ಯ ಸ್ವಾಮಿ, ದೇಶಾಣಿ ಆನಂದ್, ಅರುಣ್ ಕುಮಾರ್, ಮಂಜುನಾಥ್, ಮಹೇಂದ್ರ ಮುರುಂಡಿ ಶಿವಯ್ಯ, ಸಹಕಾರ ರತ್ನ ಸಿದ್ದಪ್ಪ ಓಂಕಾರ ಮೂರ್ತಿ,ವಿಜಿಕುಮಾರ್ ಯಾದಾಪುರ ತೇಜಸ್ ಮೊದಲಾದವರಿದ್ದರು.

error: Content is protected !!