11.8 C
Munich
Home ಕ್ರೈಮ್‌ ಹಾಸನ: ಬಿಸಿಲೆ ಘಾಟ್ ಡಬಲ್ ಟರ್ನ್ ನಲ್ಲಿ ಪ್ರಪಾತಕ್ಕೆ ಪಲ್ಟಿಯಾದ ಮಿನಿ ಬಸ್: ತಪ್ಪಿದ ಭಾರೀ...

ಹಾಸನ: ಬಿಸಿಲೆ ಘಾಟ್ ಡಬಲ್ ಟರ್ನ್ ನಲ್ಲಿ ಪ್ರಪಾತಕ್ಕೆ ಪಲ್ಟಿಯಾದ ಮಿನಿ ಬಸ್: ತಪ್ಪಿದ ಭಾರೀ ದುರಂತ, 20 ಜನರಿಗೆ ಗಾಯ

ಹಾಸನ: ಸಕಲೇಶಪುರ ತಾಲ್ಲೂಕಿನ ಬಿಸಿಲೆಘಾಟ್‌ನಲ್ಲಿ ಗುರುವಾರ ನಡೆದ ರಸ್ತೆ ಅಪಘಾತದಲ್ಲಿ ಮದುವೆಗೆ ತೆರಳುತ್ತಿದ್ದವರನ್ನು ಹೊತ್ತ ಮಿನಿ ಬಸ್ ಪಲ್ಟಿಯಾಗಿ ಹಲವರು  ಗಾಯಗೊಂಡಿದ್ದಾರೆ.

ಮಡ್ಡಿಕೆರೆ ಮತ್ತು ವನಗೂರು ಗ್ರಾಮಗಳಿಂದ KA-12-B-2579 ನಂಬರ್‌ನ ಮಿನಿ ಬಸ್‌ನಲ್ಲಿ ಮೂವತ್ತಕ್ಕೂ ಹೆಚ್ಚು ಮಂದಿ ಮದುವೆಗೆ ತೆರಳುತ್ತಿದ್ದ ವೇಳೆ ಬಿಸಿಲೆಘಾಟ್‌ನ ತಿರುವಿನಲ್ಲಿ ಬಸ್ ನಿಯಂತ್ರಣ ತಪ್ಪಿ ಕೆಳಗಿನ ರಸ್ತೆಗೆ ಬಿದ್ದಿದೆ.

ಅಪಘಾತದಲ್ಲಿ 10 ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿದ್ದು, 20 ಕ್ಕೂ ಹೆಚ್ಚು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣವೇ ಸುಬ್ರಹ್ಮಣ್ಯ ಆಸ್ಪತ್ರೆಗೆ ಸಾಗಿಸಲಾಯಿತು. ಗಂಭೀರವಾಗಿ ಗಾಯಗೊಂಡ ಕೆಲವರಿಗೆ ಹೆಚ್ಚಿನ ಚಿಕಿತ್ಸೆಯ ಸಲುವಾಗಿ ಮಂಗಳೂರು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!