ಬೆಂಗಳೂರು: ಮೂಲದ ತಂತ್ರಜ್ಞಾನ ಅಭಿವೃದ್ಧಿ ಸಂಸ್ಥೆಯಾದ ಜಿಎನ್‌ಎ ಇಂಡಿಯಾ ಪ್ರೈವೇಟ್ ಲಿಮಿಟೆಡ್ ದೇಶಾದ್ಯಂತ ಸಾರ್ವಜನಿಕ ವೈ-ಫೈ ಸೇವೆ ವಿಸ್ತರಿಸಲು ಮುಂದಾಗಿದ್ದು ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.
ಗ್ರಾಮೀಣ ಪ್ರದೇಶ, ಪ್ರವಾಸಿ ತಾಣ, ದೂರದ ಮತ್ತು ಸಂಪರ್ಕ ಸೌಲಭ್ಯ ಕಡಿಮೆ ಇರುವ ಪ್ರದೇಶಗಳಲ್ಲಿ ವೇಗವಾದ ಹಾಗೂ ವಿಶ್ವಾಸಾರ್ಹ ಇಂಟರ್‌ನೆಟ್ ಸಂಪರ್ಕ ಒದಗಿಸುವ ಮೂಲಕ ಡಿಜಿಟಲ್ ಅಂತರ ಕಡಿಮೆ ಮಾಡುವುದು ಜಿಎನ್‌ಎ ಗುರಿಯಾಗಿದೆ.
ಜಿಎನ್‌ಎ ಇಂಡಿಯಾದ ಪ್ರಮುಖ ಯೋಜನೆ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಂಡಿದ್ದು ಸಂವಹನ, ಡಿಜಿಟಲ್ ಪಾವತಿ ಮತ್ತು ಹಣಕಾಸು ವ್ಯವಹಾರಗಳಿಗೆ ಭದ್ರತೆಯನ್ನು ಒದಗಿಸುತ್ತದೆ.
ಜಾಗತಿಕ ಮಟ್ಟದ ಗಣಿತಜ್ಞರು ಮತ್ತು ಕ್ರಿಪೆಟೂಗ್ರಾಫರ್‌ಗಳು ಈ ತಂತ್ರಜ್ಞಾನವನ್ನು ವಿನ್ಯಾಸಗೊಳಿಸಲಿದ್ದಾರೆ.
ಯೋಜನೆ ಡಿಜಿಟಲ್ ಇಂಡಿಯಾ ಅಭಿಯಾನದೊಂದಿಗೆ ಹೊಂದಿಕೆಯಾಗಿದ್ದು, 2023ರ ಅ. 2023ರಿಂದ ಬಿಎಸ್‌ಎನ್‌ಎಲ್ ಮೂಲಕ ಪೈಲಟ್ಪ್ರಾಜೆಕ್ಟ್ ಆಗಿ ಕಾರ್ಯನಿರ್ವಹಿಸುತ್ತಿದೆ.
ಜೊತೆಗೆ ಜನವರಿ 2024ರಲ್ಲಿ ಅಧಿಕೃತ ಸಾರ್ವಜನಿಕ ವೈ-ಫೈ ಪಾಲುದಾರ ಒಪ್ಪಂದ ಮಾಡಿಕೊಂಡಿದೆ.
ಸರ್ಕಾರ ಹಾಗು ಸಾರ್ವಜನಿಕ ಖಾಸಗೀ ಸಂಸ್ಥೆಗಳ ಸಹಕಾರದೊಂದಿಗೆ ಸುರಕ್ಷಿತ, ಸುಲಭ ಮತ್ತು ಸಮಾನ ಡಿಜಿಟಲ್ ಸಂಪರ್ಕವನ್ನು ಎಲ್ಲರಿಗೂ ಒದಗಿಸುವ ದಿಶೆಯಲ್ಲಿ ಸಂಸ್ಥೆ ಕಾರ್ಯನಿರ್ವಹಿಸಲಿದೆ.
ಈ ಕುರಿತು ಜಿಎನ್‌ಒ ಇಂಡಿಯಾ ಪ್ರತಿನಿಧಿ ಮಾತನಾಡಿ, ಡಿಜಿಟಲ್ ಭಾರತ ನಿರ್ಮಾಣದಲ್ಲಿ ಸುರಕ್ಷಿತ ಸಂಪರ್ಕ ವ್ಯವಸ್ಥೆ ಬಹಳ ಮುಖ್ಯ. ನಿತ್ಯದ ಡಿಜಿಟಲ್ ವ್ಯವಹಾರಗಳಿಗೆ ಕ್ವಾಂಟಂ ಮಟ್ಟದ ಭದ್ರತೆ ಒದಗಿಸುವುದು ನಮ ಉದ್ದೇಶವಾಗಿದೆ ಎಂದರು.
ರಾಯಭಾರಿ ಹರ್ಭಜನ್‌ಸ ಸಿಂಗ್ ಅವರು ಮಾತನಾಡಿ, ಡಿಜಿಟಲ್ ಸಂಪರ್ಕ ಇಂದು ಪ್ರತಿಯೊಬ್ಬರ ಜೀವನದ ಭಾಗವಾಗಿದೆ. ಸುರಕ್ಷಿತ ಹಾಗೂ ಸಮಾನ ಡಿಜಿಟಲ್ ಪ್ರವೇಶಕ್ಕೆ ಕೆಲಸ ಮಾಡುತ್ತಿರುವ ಜಿಎನ್‌ಎ ಇಂಡಿಯಾ ಜೊತೆ ಕೈಜೋಡಿಸಿರುವುದು ಹೆಮ್ಮೆಯ ವಿಷಯವೆಂದರು.
sēve vistarisalu mundāgiddu māji krikeṭiga harbhajan siṅg rāyabhāriyāgi āykeyāgiddāre.
GNA India Private Limited, a technology development company based in India, has announced the expansion of public Wi-Fi services across the country and has selected former cricketer Harbhajan Singh as its ambassador.










