ಮಂಗಳೂರು:ಗ್ಲಾಮರಸ್‌ ಆಗಿ ನಾಯಕರ ಹಿಂದೆ ಓಡಾಡುವುದನ್ನು ಮಹಿಳೆಯರು ನಿಲ್ಲಿಸಬೇಕು: ಕಾಂಗ್ರೆಸ್ ನ ಹಿರಿಯ ನಾಯಕಿ ಮೋಟಮ್ಮ

Senior Congress party leader Motamma has said that women should stop appearing glamorous and running after leaders.

ಮಂಗಳೂರು: ಮಹಿಳೆಯರು ಗ್ಲಾಮರಸ್‌ ಆಗಿ ಕಾಣಿಸಿಕೊಂಡು ನಾಯಕರ ಹಿಂದೆ ಓಡಾಡುವುದನ್ನು ನಿಲ್ಲಿಸಬೇಕು ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಮೋಟಮ್ಮ ಹೇಳಿದ್ದಾರೆ.

ಮಂಗಳೂರಿನಲ್ಲಿ ಭಾನುವಾರ ಆರಂಭಗೊಂಡ ಮಹಿಳಾ ಮಂಡಲಗಳ ಒಕ್ಕೂಟದ ಸಮಾವೇಶದಲ್ಲಿ ‘ರಾಜಕೀಯದಲ್ಲಿ ಮಹಿಳೆ’ ವಿಷಯದ ಬಗ್ಗೆ ಮಾತನಾಡಿದ ಮೋಟಮ್ಮ ಅವರು, ‘ಮಹಿಳಾ ರಾಜಕಾರಣಿಗಳು ನಾಯಕರ ಮುಂದೆ ಹಲ್ಲು ಕಿರಿದು ನಿಲ್ಲುವುದನ್ನು ಬಿಡಬೇಕು, ಸ್ವಂತ ಕಾಲ ಮೇಲೆ ನಿಂತು ಕೆಲಸ ಮಾಡಿ ನಾಯಕರು ತಮ್ಮ ಬಳಿ ಸಹಾಯ ಕೇಳುವಂತೆ ಮಾಡಬೇಕು’ ಎಂದರು.

‘ಎಲ್ಲ ರಾಜಕೀಯ ಪಕ್ಷಗಳೂ ಮಹಿಳೆಯರನ್ನು ಕಡೆಗಣಿಸುತ್ತಿದ್ದು ಕೇವಲ ಸಾಂಬಾರ್‌ಗೆ ಪರಿಮಳ ತುಂಬುವ ಕರಿಬೇವಿನಂತೆ ಬಳಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಪಕ್ಷಭೇದ ಬಿಟ್ಟು ಹೋರಾಡಬೇಕು. ಗ್ಲಾಮರಸ್‌ ಆಗಿ ಕಾಣಿಸಿಕೊಂಡು ನಾಯಕರ ಹಿಂದೆ ಓಡಾಡುವುದನ್ನು ನಿಲ್ಲಿಸಬೇಕು.

ಮತದಾರರಲ್ಲಿ ಶೇಕಡ 50ರಷ್ಟು ಮಹಿಳೆಯರು. ಆದರೆ ಯಾವ ಸರ್ಕಾರವೂ, ಯಾವ ಮುಖಂಡರೂ ಮಹಿಳೆಗೆ ಅಧಿಕಾರ ನೀಡಲು ಬಯಸಲಿಲ್ಲ. ಎಲ್ಲೂ ನಿರ್ಣಯ ಕೈಗೊಳ್ಳುವ ಅವಕಾಶ ಮಹಿಳೆಗೆ ಸಿಗುತ್ತಿಲ್ಲ’ ಎಂದು ಅವರು ಕಿಡಿಕಾರಿದರು.

ಅಂತೆಯೇ ‘ಸಮಾಜದಲ್ಲಿ ಅತ್ಯಾಚಾರದಂಥ ಮನಃಸ್ಥಿತಿ ನಿರ್ಮಾಣವಾಗಲು ಬಹುತೇಕ ಸಂದರ್ಭದಲ್ಲಿ ತಾಯಂದಿರೇ ಕಾರಣ. ಮಕ್ಕಳಿಗೆ ಅವರು ಗಟ್ಟಿತನವನ್ನು ಹೇಳಿಕೊಡುವುದಿಲ್ಲ. ಆದ್ದರಿಂದ ಅತ್ಯಾಚಾರದ ಪಾಪದಲ್ಲಿ ತಾಯಂದಿರಿಗೂ ಪಾಲು ಇದೆ. ಸಿನಿಮಾದವರನ್ನು ನೋಡಿ ಕಲಿಯುವಂತೆ ಹೆಣ್ಣುಮಕ್ಕಳಿಗೆ ಪ್ರೇರಣೆ ನೀಡುತ್ತಾರೆ. ಸ್ಲೀವ್‌ಲೆಸ್ ಬ್ಲೌಸ್‌, ಟ್ರಾನ್ಸ್‌ಪರೆಂಟ್ ಲಂಗ ಹಾಕಲು ಪ್ರೇರೇಪಿಸುವುದಕ್ಕಿಂತ ಸ್ವಾವಲಂಬಿಯಾಗಲು ತಿಳಿಸಿಕೊಡಬೇಕು’ ಎಂದು ಮೊಟಮ್ಮ ಹೇಳಿದರು.

Senior Congress party leader Motamma has said that women should stop appearing glamorous and running after leaders.