ಚನ್ನರಾಯಪಟ್ಟಣ: ಹಾಸನ ಜಿಲ್ಲಾ ಸವಿತಾ ಮಂಗಲ ವಾದ್ಯ ಕಲಾವಿದರ ಸಂಘದ ಅಧ್ಯಕ್ಷರಾಗಿ ಎಸ್.ಎ. ಗುರುಮೂರ್ತಿ ಆಯ್ಕೆ

Saxophone scholar S.A. Gurumurthy from Shravanabelagola in Channarayapatna taluk has been elected unopposed as the new president of the Hassan District Savita Mangala Instrumental Artists Association.

ಚನ್ನರಾಯಪಟ್ಟಣ: ತಾಲ್ಲೂಕಿನ ಶ್ರವಣಬೆಳಗೊಳದ ಸ್ಯಾಕ್ಸೋಫೋನ್ ವಿದ್ವಾಂಸ ಎಸ್.ಎ.ಗುರುಮೂರ್ತಿರವರು ಹಾಸನ ಜಿಲ್ಲಾ ಸವಿತಾ ಮಂಗಲ ವಾದ್ಯ ಕಲಾವಿದರ ಸಂಘದ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಹಾಸನದ ಕನ್ನಡ ಸಾಹಿತ್ಯ ಪರಿಷತ್ತಿನ ಜ್ವಾಲನಯ್ಯ ವೇದಿಕೆಯಲ್ಲಿ ಶನಿವಾರ ಆಯೋಜಿಸಿದ್ದ ಸದ್ಗುರು ತ್ಯಾಗರಾಜರ ಹಾಗೂ ಪುರಂದರ ದಾಸರ ಆರಾಧನಾ ಕಾರ್ಯಕ್ರಮದಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆಯನ್ನು ಘೋಷಿಸಲಾಯಿತು.

ಹಾಲಿ ಜಿಲ್ಲಾಧ್ಯಕ್ಷ ಸಂಜೀವ್ ಕುಮಾರ್ ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕು ಹೋಬಳಿ ಮಟ್ಟದ ಅಧ್ಯಕ್ಷರುಗಳು, ಪದಾಧಿಕಾರಿಗಳ ನೇತೃತ್ವದಲ್ಲಿ ಆಯ್ಕೆಯನ್ನು ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಘೋಷಿಸಿದರು. ನೂತನ ಅಧ್ಯಕ್ಷರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.