ಅರಕಲಗೂಡು: ಅರೇಮಾದನಹಳ್ಳಿಯಲ್ಲಿ ವಿಶ್ವಕರ್ಮ ಜಗದ್ಗುರು ಪೀಠದ ಸನ್ಯಾಸ ದೀಕ್ಷೆ ಮಹಾಸಭೆ ಉದ್ಘಾಟನೆ

Sanyasa initiation and disciple acceptance ceremony for the successors of the venerable Sri Matha at Sri Vishwakarma Jagadguru Peetha in Aremadanahalli, Arakalgud taluk on Thursday

ಅರಕಲಗೂಡು: ತಾಲೂಕು ಅರೇಮಾದನಹಳ್ಳಿಯ ಶ್ರೀ ವಿಶ್ವಕರ್ಮ ಜಗದ್ಗುರು ಪೀಠದಲ್ಲಿ ಗುರುವಾರ ಶ್ರೀ ಮಠದ ಪೂಜ್ಯರ ಉತ್ತರಾಧಿಕಾರಿಗಳಿಗೆ ಸನ್ಯಾಸ ದೀಕ್ಷೆ ಮತ್ತು ಶಿಷ್ಯ ಸ್ವೀಕಾರ ಸಮಾರಂಭದ ಧಾರ್ಮಿಕ ಮಹಾಸಭೆಯ ಉದ್ಘಾಟನೆಯನ್ನು ಶ್ರೀಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಅನಂತ ಶ್ರೀ ವಿಭೂಷಿತ ಶಿವ ಸುಜ್ಞಾನತೀರ್ಥಮಹಾಸ್ವಾಮಿಯವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಚಿತ್ರದಲ್ಲಿ ಶ್ರೀ ಮಠದ ಕಿರಿಯ ಶ್ರೀಗಳಾದ ಶ್ರೀ ಶ್ರೀ ಶ್ರೀ ಜ್ಞಾನಘನ ವಿದ್ಯಾತೀರ್ಥ ಮಹಾಸ್ವಾಮಿಗಳವರು ಸೇರಿದಂತೆ ವಿವಿಧ ಕ್ಷೇತ್ರದ ಮಠಾಧೀಶರು, ಕರ್ನಾಟಕ ರಾಜ್ಯ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ಸುಜ್ಞಾನ ಮೂರ್ತಿ, ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ಹೆಚ್. ವಿ. ಹರೀಶ್, ಶ್ರೀಮಠದ ಆಡಳಿತ ಮಂಡಳಿಯ ಪದಾಧಿಕಾರಿಗಳಾದ ಎ. ಆರ್. ಕುಮಾರಸ್ವಾಮಿ ಮತ್ತು ಎ. ಆರ್. ಶೇಷಕುಮಾರ್ ಮತ್ತಿತರಿದ್ದರು.

Sanyasa initiation and disciple acceptance ceremony for the successors of the venerable Sri Matha at Sri Vishwakarma Jagadguru Peetha in Aremadanahalli, Arakalgud taluk on Thursday