15.2 C
Munich
Home News ಸಕಲೇಶಪುರ: ಲಾಭದತ್ತ ಪಿಕಾರ್ಡ್ ಬ್ಯಾಂಕ್ ಹೆಜ್ಜೆ: ಅಧ್ಯಕ್ಷ ವೈ.ಪಿ ರಾಜೇಗೌಡ ಹರ್ಷ

ಸಕಲೇಶಪುರ: ಲಾಭದತ್ತ ಪಿಕಾರ್ಡ್ ಬ್ಯಾಂಕ್ ಹೆಜ್ಜೆ: ಅಧ್ಯಕ್ಷ ವೈ.ಪಿ ರಾಜೇಗೌಡ ಹರ್ಷ

ಸಕಲೇಶಪುರ: ನಷ್ಟದಲ್ಲಿರುವ ಪಿಕಾರ್ಡ್ ಬ್ಯಾಂಕ್ ಇದೀಗ ಲಾಭದ ಹಾದಿಯಲ್ಲಿ ಬರುತ್ತಿದೆ ಎಂದು ತಾಲೂಕು ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ಅಧ್ಯಕ್ಷ ವೈ.ಪಿ ರಾಜೇಗೌಡ ಹೇಳಿದರು.

ಪಟ್ಟಣದ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ ಸುಮಾರು ₹7 ಕೋಟಿಯಷ್ಟು ನಷ್ಟದಲ್ಲಿದ್ದ ಬ್ಯಾಂಕ್ ಇದೀಗ ಬ್ಯಾಂಕ್‌ನ ಹಿಂದಿನ ಅಧ್ಯಕ್ಷರುಗಳು ಹಾಗೂ ನಿರ್ದೇಶಕರುಗಳು ಮತ್ತು ಇಂದಿನ ನಿರ್ದೇಶಕರುಗಳ ಶ್ರಮದಿಂದ ನಷ್ಟದ ಪ್ರಮಾಣ ಸಂಪೂರ್ಣವಾಗಿ ತಗ್ಗಿದ್ದು ಕೇವಲ 39ಲಕ್ಷರೂಗಳಷ್ಟು ಮಾತ್ರ ನಷ್ಟದ್ದು ಇದನ್ನು ಸಹ ಮುಂದಿನ ದಿನಗಳಲ್ಲಿ ಸರಿತೂಗಿಸಿ ಲಾಭದ ಹಾದಿಗೆ ತರಲಾಗುವುದು.

ಈ ಬ್ಯಾಂಕಿನಲ್ಲಿ 5,046 ಶೇರುದಾರರಿದ್ದು ಕೆಲವು ವರ್ಷಗಳಿಂದ ಬ್ಯಾಂಕ್ ನಷ್ಟದಲಿದ್ದ ಕಾರಣ ಸಾಲವನ್ನು ಕೊಡಲಾಗುತ್ತಿರಲಿಲ್ಲ. ಇತ್ತೀಚಿನ ದಿನದಲ್ಲಿ ಬ್ಯಾಂಕ್ ಲಾಭದತ್ತ ದಾಪುಗಾಲು ಇಡುತ್ತಿರುವುದರಿಂದ ಇವತ್ತು ಐದು ಜನರಿಗೆ ಸಾಂಕೇತಿಕವಾಗಿ ಸಾಲ ದೃಢೀಕರಣ ಪತ್ರವನ್ನು ಕೊಡುವ ಮೂಲಕ ಮತ್ತೆ ಸಾಲ ಕೊಡುವುದಕ್ಕೆ ಮರು ಚಾಲನೆ ನೀಡಲಾಗಿದೆ.

ಅಲ್ಲದೆ ಮುಂದಿನ ದಿನಗಳಲ್ಲಿ ಷೇರುದಾರರಿಗೂ ಲಾಭ ಕೊಡಲಾಗುತ್ತದೆ. ಬ್ಯಾಂಕಿನಿಂದ ಹಣ ತೆಗೆದುಕೊಂಡು ಅಕಾಲಿಕ ಮರಣ ಹೊಂದಿದವರಿಂದ ಸಾಲ ವಸೂಲಿ ಕಷ್ಟದ ಕೆಲಸವಾಗಿರುವುದರಿಂದ ಅಕ್ಟೋಬರ್ ತಿಂಗಳಿಂದ ಇನ್ಸೂರೆನ್ಸ್ ಮಾಡಿಕೊಡುವ ಯೋಜನೆಯನ್ನು ಬ್ಯಾಂಕ್ ವತಿಯಿಂದ ಜಾರಿ ಮಾಡಲಾಗುವುದು. 850 ಜನರಿಗಿದ್ದ ಯಶಸ್ವಿನಿ ಕಾರ್ಡ್ ಯೋಜನೆಯನ್ನು ಮುಂದಿನ ದಿನಗಳಲ್ಲಿ 1400 ಜನರಿಗೆ ಒದಗಿಸುವ ಕೆಲಸವನ್ನು ಮಾಡಲಾಗುವುದು.

ಸ್ವಸಹಾಯ ಸಂಘಗಳಿಗೂ ಕೂಡ ಸಾಲವನ್ನು ಕೊಡುವ ಯೋಜನೆಯನ್ನು ಬ್ಯಾಂಕ್ ನಿಂದ ಜಾರಿಗೆ ತರಲಾಗುವುದು. ಈ ನಿಟ್ಟಿನಲ್ಲಿ ಈಗಾಗಲೇ ಒಂದು ಸ್ವಸಾಯ ಸಂಘಕ್ಕೆ ಸಾಲ ಕೊಡುವ ಮೂಲಕ ಚಾಲನೆ ನೀಡಲಾಗಿದೆ. ಶೇರುದಾರರು ಬ್ಯಾಂಕ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಫಿಕ್ಸೆಡ್ ಡೆಪಾಸಿಟ್ ಇಟ್ಟಲ್ಲಿ ಬ್ಯಾಂಕ್ ಹೆಚ್ಚು ಲಾಭಗಳಿಸುವುದು ಸಾಧ್ಯವಾಗುವುದು.

ಈಗಾಗಲೇ ಬ್ಯಾಂಕಿನ ಹಣದ ದುರುಪಯೋಗ ಮಾಡಿಕೊಡಿದ್ದ ಎರಡು ಜನರಿಂದ ಕಾನೂನಾತ್ಮಕವಾಗಿ ಹಣವನ್ನು ವಾಪಸು ತೆಗೆದುಕೊಳ್ಳುವ ಕೆಲಸ ಮಾಡಲಾಗಿದೆ.ಮೊದಲ ಬಾರಿ ಬ್ಯಾಂಕ್ ಲಾಭದತ್ತ ಹೆಜ್ಜೆ ಹಾಕುತ್ತಿದ್ದು, ಷೇರುದಾರರು ಬ್ಯಾಂಕ್ ಮೇಲೆ ಇಟ್ಟಿರುವ ಭರವಸೆಗೆ ನಾವೆಲ್ಲಾ ಪ್ರಾಮಾಣಿಕವಾಗಿ ಪಕ್ಷಭೇದ ಮರೆತು ಬ್ಯಾಂಕ್ ಏಳಿಗೆಗೆ ಕೆಲಸ ಮಾಡುತ್ತೇವೆ. ಬ್ಯಾಂಕಿನ್ ಅಭಿವೃದ್ಧಿ ದೃಷ್ಟಿಯಿಂದ ಎಲ್ಲಾ ಷೇರುದಾರರು ಬ್ಯಾಂಕ್ ನೊಂದಿಗೆ ಉತ್ತಮ ವ್ಯವಹಾರವನ್ನು ಇಟ್ಟುಕೊಳ್ಳುವ ಮೂಲಕ ಬ್ಯಾಂಕನ್ನು ಉಳಿಸಿ ಬೆಳೆಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ 2024-25ನೇ ಸಾಲಿನ ಆಡಳಿತ ಮಂಡಳಿಯ ವರದಿಯನ್ನು ಮಂಡಿಸುವುದು ಮತ್ತು ದಾಖಲಿಸಲಾಯಿತು. 2024-25ನೇ ಸಾಲಿನ ಆಡಿಟ್ ವರದಿಯನ್ನು ಮಂಡಿಸಿ ಹಾಗೂ ಅಂಗೀಕರಿಸಲಾಯಿತು.

2024-25ನೇ ಸಾಲಿಗೆ ಮಂಜೂರಾಗಿರುವ ಆಯವ್ಯಯದಲ್ಲಿ ಹೆಚ್ಚಿಗೆ ಖರ್ಚಾಗಿರುವ ಬಾಬುಗಳನ್ನು ಅಂಶವಾರು ಪರಿಶೀಲಿಸಿ ಮಂಜೂರು ಮಾಡಲಾುತು. 2025-26ನೇ ಸಾಲಿಗೆ ಅಂದಾಜು ಆಯ-ವ್ಯಯಗಳನ್ನು ಮಂಜೂರು ಮಾಡಲಾುತು.2025-2026ನೇ ಸಾಲಿಗೆ ಲೆಕ್ಕಪರಿಶೋಧಕರಾಗಿ ನೂತನವಾಗಿ ಹರೀಶ್ ಗೌಡ ಅವರನ್ನು ಆಯ್ಕೆ ಮಾಡಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಹಿಂದಿನ ಸಾಲಿನಲ್ಲಿ 21 ದಿನ ಅಧ್ಯಕ್ಷರಾಗಿ ಉತ್ತಮ ಸೇವೆಯನ್ನು ಮಾಡಿದ ಕೆ.ಪಿ ಕೃಷ್ಣೇಗೌಡ ಅವರಿಗೆ ಸನ್ಮಾನಿಸಲಾಯಿತು.

ಈ ಸಂಧರ್ಭದಲ್ಲಿ ಕೆಲವು ಷೇರುದಾರರು ಬ್ಯಾಂಕ್ ನಲ್ಲಿ ಅರ್ಹರು ಹಾಗೂ ಅನರ್ಹ ಮತದಾರರ ಪಟ್ಟಿಯನ್ನು ಸರಿಪಡಿಸಬೇಕು, ಸಭೆಗೆ ಎಲ್ಲಾರಿಗೂ ಸರಿಯಾಗಿ ನೋಟಿಸ್ ತಲುಪಿಸುವಂತೆ ಮಾಡಬೇಕು ಹಾಗೂ ವ್ಯಾಟ್ಸಪ್ ಗ್ರೂಪ್ ರಚನೆ ಮಾಡಿ ಇದರ ಮೂಲಕ ಮಾಹಿತಿಗಳನ್ನು ನೀಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಸಕಲೇಶಪುರ ತಾಲ್ಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಉಪಾಧ್ಯಕ್ಷರಾದ ವೀರೇಶ್ ವಳಲಹಳ್ಳಿ, ನಿರ್ದೇಶಕರುಗಳಾದ ಎ.ಬಿ. ಪ್ರೇಮ್‌ಕುಮಾರ್, ದೇವಿಹಳ್ಳಿ, ಎಚ್.ಎಚ್ ಉದಯ್, ಲೋಕೇಶ್, ಮನೋಜ್ ಕುಮಾರ್, ವನಿತಾ ಹೆತ್ತೂರು,ಮಂಜುಳ ಮೂಗಲಿ, ಕೆ.ಬಿ. ಜಯರಾಜು ಕಾಮನಹಳ್ಳಿ, ನಾಗರಾಜು ಲಕ್ಕುಂದ,ಬಿ.ಬಿ. ವೆದುನಂದನ್ ಆಚಂಗಿ,ಲೀಲಾವತಿ ಹಾನುಬಾಳು, ಉದಯ ಕುಮಾರ್ ಹೆಗ್ಗದ್ದೆ, ಹಿತೈಷಿ ದೊಡ್ಡನಾಗರ ಹಾಜರಿದ್ದರು.

error: Content is protected !!