1.4 C
Munich
Home ಕ್ರೈಮ್‌ ಸಕಲೇಶಪುರದಲ್ಲಿ ಅಸ್ಸಾಂ ಮೂಲದ ಇಬ್ಬರ‌ ಬಂಧನ: ಅರ್ಧ ಕೆಜಿ ಗಾಂಜಾ ವಶ

ಸಕಲೇಶಪುರದಲ್ಲಿ ಅಸ್ಸಾಂ ಮೂಲದ ಇಬ್ಬರ‌ ಬಂಧನ: ಅರ್ಧ ಕೆಜಿ ಗಾಂಜಾ ವಶ

ಸಕಲೇಶಪುರ, ನ.೭: ಪಟ್ಟಣದ APMC ಪ್ರದೇಶದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಅಸ್ಸಾಂ ಮೂಲದ ಇಬ್ಬರು ಕಾರ್ಮಿಕರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಅಮ್ಜದ್ ಅಲಿ ಮತ್ತು ಇದ್ರೀಸ್ ಅಲಿ ಎಂದು ಗುರುತಿಸಲಾಗಿದ್ದು, ಇವರು ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಹೋಬಳಿಯ ಬೆಟ್ಟದಮನೆಯಲ್ಲಿನ ಖಾಸಗಿ ಎಸ್ಟೇಟ್‌ನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಮಾಹಿತಿ ದೊರಕುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿ, ಸುಮಾರು 500 ಗ್ರಾಂ (ಅರ್ಧ ಕೆ.ಜಿ) ಗಾಂಜಾ ಸೊಪ್ಪನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ಠಾಣೆಗೆ ಕರೆದುಕೊಂಡು ಪ್ರಕರಣ ದಾಖಲಿಸಿದ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸ್ ವಲಯದಿಂದ ತಿಳಿದು ಬಂದಿದೆ.

ಈ ಕಾರ್ಯಾಚರಣೆಯನ್ನು ಡಿವೈಎಸ್ಪಿ ಮಾಲತೇಶ್ ಎಸ್.ಕೆ. ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ವಿ.ಸಿ. ವನರಾಜು, ಸಬ್ ಇನ್ಸ್‌ಪೆಕ್ಟರ್ ಮಹೇಶ್ ಜೆ.ಇ., ಹಾಗೂ ಸಿಬ್ಬಂದಿಗಳಾದ ಪೃಥ್ವಿ, ರೇವಣ್ಣ, ಶ್ರೀಧರ್, ಸೋಮಶೇಖರ್, ಚಂದ್ರಕಾಂತ್ ಮತ್ತು ಮಧು ಶ್ರಮದಿಂದ ನಡೆಸಿದ್ದಾರೆ.

ಪೊಲೀಸರು ಗಾಂಜಾ ಮಾರಾಟದ ಕುರಿತು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

error: Content is protected !!