ಸಕಲೇಶಪುರ: ತಾಲೂಕಿನ ತಾಲೂಕು ಹಾನುಬಾಳ್ ಸಮೀಪದ ವೆಂಕಟಹಳ್ಳಿ ಗ್ರಾಮದಲ್ಲಿ ಕೆ ಎಸ್ ಆರ್ ಟಿ ಸಿ ಬಸ್ಕಲು ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿ ಗಾಯಲುಗಳನ್ನು ಪಟ್ಟಣದ ಕಾಪರ್ ಆಸ್ಪತ್ರೆಗೆ ದಾಖಲೆ ಮಾಡಿದ ಹಿನ್ನೆಲೆಯಲ್ಲಿ ಶಾಸಕ ಸಿಮೆಂಟ್ ಮಂಜು ಆಸ್ಪತ್ರಕ್ಕೆ ಭೇಟಿ ಮಾಡಿ ಗಾಯಾಲಗಳಿಗೆ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಆಗ್ರಹಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಬಸ್ ಚಾಲಕರ ಅಜಾರುಗತೆಯಿಂದ ಈ ರೀತಿ ಘಟನೆ ಸಂಭವಿಸಿದೆ. ಈ ನಿಟ್ಟಿನಲ್ಲಿ ತಪ್ಪು ಮಾಡಿದ ಚಾಲಕರ ವಿರುದ್ದ ಡಿಪೋ ವ್ಯವಸ್ಥಾಪಕರು ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಅನುಭವವುಳ್ಳ ಚಾಲಕರಿಗೆ ಮಾತ್ರ ಬಸ್ ಓಡಿಸಲು ಅವಕಾಶ ಕೊಡಬೇಕು.
ನಾನು ಶಾಸಕನಾದ ನಂತರ ಸುಮಾರು 11 ಹೊಸ ಬಸಗಳನ್ನು ಈ ಡಿಪೋಗೆ ತಂದಿದ್ದೇನೆ. ಲಾಭ ನಷ್ಟ ಏನೇ ಇರಲಿ ಹೊಸ ಬಸಗಳನ್ನು ಗ್ರಾಮಾಂತರ ಮಾರ್ಗದಲ್ಲಿ ಓಡಿಸಲು ಅವಕಾಶ ಕಲ್ಪಿಸಬೇಕು. ಸಕಲೇಶಪುರ ಡಿಪೋವನ್ನು ಚಿಕ್ಕಮಗಳೂರು ವಿಭಾಗದಿಂದ ಹಾಸನ ವಿಭಾಗ ಸೇರಿಸಲು ಈಗಾಗಲೇ ನಾನು ಸಾರಿಗೆ ಸಚಿವರಿಗೆ ಮನವಿ ಮಾಡಿದ್ದೇನೆ. ಆದರೆ ಕೆಲವೊಂದು ಮಾನದಂಡಗಳ ಹಿನ್ನೆಲೆಯಲ್ಲಿ ಕೂಡಲೇ ವರ್ಗಾವಣೆ ಮಾಡುವುದು ಕಷ್ಟಕರ, ಮತೊಮ್ಮೆ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುತ್ತದೆ ಎಂದರು.










