ಹಾಸನ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕವಿಪ್ರನಿನಿ) ವತಿಯಿಂದ ನವೆಂಬರ್ 25ರಂದು 66/11 ಕೆವಿ ರಾಮೇಶ್ವರನಗರ ವಿದ್ಯುತ್ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಇದರಿಂದಾಗಿ ನಗರದ ಹಲವೆಡೆ ವಿದ್ಯುತ್ ಸರಬರಾಜಿನಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ.
ಬೆಳಗ್ಗೆ 10.00ರಿಂದ ಸಂಜೆ 6.00ರವರೆಗೆ ನಡೆಯಲಿರುವ ನಿರ್ವಹಣಾ ಕಾಮಗಾರಿಯ ಸಮಯದಲ್ಲಿ ರಾಮೇಶ್ವರನಗರ ವಿ.ವಿ. ಕೇಂದ್ರದಿಂದ ವಿದ್ಯುತ್ ಪಡೆಯುವ ಕೆ.ಆರ್.ಪುರಂ, ಉದಯಗಿರಿ, ರಿಂಗ್‌ರೋಡ್, ಬೂವನಹಳ್ಳಿ, ಸತ್ಯಮಂಗಲ, ಶಂಕರಿಪುರ, ದೊಡ್ಡಪುರ, ಸಿರಿಕಲ್ಟರ್, ಕಾಟಿಹಳ್ಳಿ, ಎಸ್.ಎಂ. ಕೃಷ್ಣನಗರ ಮತ್ತು ಸುತ್ತಮುತ್ತಲ ಪ್ರದೇಶಗಳು ವಿದ್ಯುತ್ ವ್ಯತ್ಯಯಕ್ಕೆ ಒಳಪಡುವವು.
ನಿರ್ವಹಣಾ ಕೆಲಸವನ್ನು ಸುರಕ್ಷತೆಗಾಗಿ ನಡೆಸಲಾಗುತ್ತಿರುವುದರಿಂದ ಗ್ರಾಹಕರು ಸಹಕರಿಸಲು ಕವಿಪ್ರನಿನಿಯ ಹಾಸನ ಕಾರ್ಯಾಚರಣೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ಮನವಿ ಮಾಡಿದ್ದಾರೆ.










