15.2 C
Munich
Home ಜಿಲ್ಲೆ ಪಿಯುಸಿಯಲ್ಲೂ ಸಮಾನ ಅಂಕದ ಸಾಧನೆ ಮಾಡಿದ ಅವಳಿ ಸಹೋದರಿಯರು! ಇವರ ಅಂಕಗಳು ಯಾವಾಗಲೂ ಸಮ ಸಮ!

ಪಿಯುಸಿಯಲ್ಲೂ ಸಮಾನ ಅಂಕದ ಸಾಧನೆ ಮಾಡಿದ ಅವಳಿ ಸಹೋದರಿಯರು! ಇವರ ಅಂಕಗಳು ಯಾವಾಗಲೂ ಸಮ ಸಮ!

ಹಾಸನ: ಸದಾ ಸಮಾನ ಅಂಕಗಳನ್ನು ಪಡೆಯುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಉಪ ನಿರ್ದೇಶಕ ವಿನೋದ್ ಚಂದ್ರ ಅವರ ಅವಳಿ ಪುತ್ರಿಯರು ದ್ವಿತೀಯ ಪಿಯುಸಿಯಲ್ಲಿಯೂ ಸಮಾನ ಅಂಕ ಪಡೆದು ಅಚ್ಚರಿ ಮೂಡಿಸಿದ್ದಾರೆ.

ಅವಳಿ ಸಹೋದರಿಯರಾದ ಚುಕ್ಕಿಚಂದ್ರ ಹಾಗೂ ಇಬ್ಬನಿಚಂದ್ರ ಇಬ್ಬರೂ ಬುಧವಾರ ಪ್ರಕಟವಾದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಸಮಾನ ಅಂಕ 571 .(ಶೇ 95.17%)ಗಳಿಸಿದ್ದಾರೆ.

ಎಸ್.ಎಸ್.ಎಲ್.ಸಿ ಫಲಿತಾಂಶ ಬಂದಾಗಲೂ ಇಬ್ಬರೂ ಸಮಾನವಾಗಿ 620 ಅಂಕ ಗಳಿಸಿ ಅಚ್ಚರಿ ಮೂಡಿಸಿದ್ದರು
(99.20% ) ಅಲ್ಲದೇ ಶಾಲಾ ಶಿಕ್ಷಣದಲ್ಲಿಯೂ ಅವರ ಅಂಕಗಳು ಒಂದೇ ಆಗಿರುತ್ತಿದ್ದವು.

ತಮ್ಮ ಪುತ್ರಿಯರ ಸಾಧನೆಯನ್ನು ತಂದೆ ವಿನೋದ್ ಚಂದ್ರ ಫೇಸ್ ಬುಕ್ ನಲ್ಲಿ ಹೀಗೆ ಕೊಂಡಾಡಿದ್ದಾರೆ;

ಚುಕ್ಕಿ ,ಇಬ್ಬನಿ ಏನಿದು ಮತ್ತದೇ ಅಚ್ಚರಿ ….!

ದ್ವಿತೀಯ ಪಿ.ಯು.ಸಿಯಲ್ಲೂ ನನ್ನ ಪ್ರೀತಿಯ ಅವಳಿ ಪುತ್ರಿಯರಾದ ಚುಕ್ಕಿ ಚಂದ್ರ, ಇಬ್ಬನಿ ಚಂದ್ರ ಸಮಾನ ಅಂಕ 571 .(ಶೇ 95.17%)ಗಳಿಸಿದ್ದಾರೆ. ಎಸ್.ಎಸ್.ಎಲ್.ಸಿ ಫಲಿತಾಂಶ ಬಂದಾಗಲೂ ಇಬ್ಬರೂ ಸಮಾನವಾಗಿ 620 (99.20% ) ಅಂಕ ಗಳಿಸಿ ಅಚ್ಚರಿ ಮೂಡಿಸಿದ್ದರು.

ಆ ದೇವನಿಗೇಕೋ ಇಬ್ಬರಿಗೂ ಬೇಸರ ಮಾಡುವ ಮನಸಿದ್ದಂತಿಲ್ಲ ಎಂದು ಬರೆದು ಮಕ್ಕಳ ಅಂಕಪಟ್ಟಿ ಶೇರ್ ಮಾಡಿದ್ದಾರೆ.

error: Content is protected !!