ಹಾಸನ: ನಮ್ಮ ಶಕ್ತಿ, ಉತ್ಸಾಹ, ಹೊಸ ಕಲ್ಪನೆಗಳು ಮತ್ತು ಧೃಢಸಂಕಲ್ಪವೇ ನಮ್ಮ ಭವಿಷ್ಯವನ್ನು ರೂಪಿಸುತ್ತದೆ. ಆದ್ದರಿಂದ ನಮ್ಮ ಕನಸುಗಳು ಕೇವಲ ಕನಸುಗಳಾಗಿಯೇ ಉಳಿಯದೆ ಗುರಿಯಾಗಿ, ನಂತರ ಸಾಧನೆಯಾಗಿ ಮಾರ್ಪಾಡಾಗಬೇಕು.ಯುವಕರೇ ಸಮಾಜದ ಬದಲಾವಣೆಯ ಶಿಲ್ಪಿಗಳು ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ನಾಯಕ ನಟ, ನಿರ್ದೇಶಕ ಮನು.ಯು.ಬಿ. ಹೇಳಿದರು.
ಅವರು ಹಾಸನದ ರಾಜೀವ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಯುವ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಒಂದು ರಾಷ್ಟ್ರದ ಭವಿಷ್ಯವನ್ನುರೂಪಿಸುವ ಶಕ್ತಿ ಮತದಾನದ ಮೂಲಕವೇ ಜನರ ಕೈಯಲ್ಲಿಇರುತ್ತದೆ. ಯುವಕರು ಶಕ್ತಿಶಾಲಿಗಳು, ಉತ್ಸಾಹಿಗಳು, ಹೊಸ ಕಲ್ಪನೆಗಳನ್ನು ಹೊಂದಿರುವವರು. ಅವರು ತಮ್ಮ ಮತದಾನದ ಹಕ್ಕನ್ನು ಜಾಗೃತಿಯಿಂದ, ಹೊಣೆಗಾರಿಕೆಯಿಂದ ಉಪಯೋಗಿಸಿದರೆ,ಸ್ವಚ್ಛ,ಜವಾಬ್ದಾರಿಯುತ ಮತ್ತು ಅಭಿವೃದ್ಧಿಯತ್ತಕೊಂಡೊಯ್ಯುವ ಆಡಳಿತವನ್ನುದುಕೊಡಬಹುದು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಆರ್. ಶಂಕರೇಗೌಡ ಮಾತನಾಡಿ, ಸುಸ್ಥಿರ ಅಭಿವೃದ್ಧಿಗೆ ಯುವಕರ ಪಾತ್ರ ಮತ್ತುಅದಕ್ಕೂ ಮೀರಿದ ಪ್ರಯತ್ನಗಳು ಎಂಬುದು ೨೦೨೫ರ ಅಂತರಾಷ್ಟ್ರೀಯ ಯುವ ದಿನದಉದ್ಘೋಷ ವಾಕ್ಯ. ನಾವು ಜೀವನದಲ್ಲಿ ಸಾಧಿಸಬೇಕಾದರೆ ಆರೋಗ್ಯವಂತರಾಗಿರುವುದು ಬಹಳ ಮುಖ್ಯ. ಆದುದರಿಂದ ಸಾಧಿಸುವ ಛಲವಿರುವವರು ದೈಹಿಕವಾಗಿ ಸಧೃಢರಾಗಿರಬೇಕು ಎಂದು ತಿಳಿಸಿದರು.
ನಾವು ಕಾಣುವ ಕನಸು ನಿದ್ದೆ ಬಾರದಿರುವ ತರಹಇರಬೇಕು. ಆ ಕನಸು ನಮ್ಮನ್ನುರಾತ್ರಿ-ಹಗಲು ಚಿಂತನೆ, ಶ್ರಮ, ಪ್ರಯತ್ನಗಳಿಂದಲೇ ಬದುಕುವಂತೆ ಮಾಡಬೇಕು.ಅದನ್ನು ಸಾಧಿಸುವವರೆಗೆ ನಮ್ಮ ಮನಸ್ಸಿಗೆ ನೆಮ್ಮದಿ ಸಿಗಬಾರದು.ಇಂತಹ ಕನಸುಗಳೇ ನಮ್ಮಜೀವನದ ಮಾರ್ಗವನ್ನು ಬದಲಾಯಿಸಿ ಯಶಸ್ಸಿನತ್ತ ಕರೆದೊಯ್ಯುತ್ತವೆ ಎಂದರು.
ಅಂತರಾಷ್ಟ್ರೀಯ ಯುವ ದಿನಾಚರಣೆಯ ಅಂಗವಾಗಿ ಕಾಲೇಜಿನಲ್ಲಿಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಯುವ ದಿನಾಚರಣೆಯ ಪ್ರಾಮುಖ್ಯತೆಯನ್ನುತಿಳಿಸಿದರು.ಕಾರ್ಯಕ್ರಮದಲ್ಲಿಕಾಲೇಜಿನ ವಿದ್ಯಾರ್ಥಿಕ್ಷೇಮಾಭಿವೃಧ್ಧಿಅಧಿಕಾರಿ ಗಂಗರಾಜು ಉಪಸ್ಥಿತರಿದ್ದರು.










