ಹಾಸನ: ಕಾರ್ಗಿಲ್ ವಿಜಯ ದಿವಸ್ ಆಚರಣೆ ಅಂಗವಾಗಿ ನಗರದ ಕುವೆಂಪು ರಸ್ತೆ ಬಳಿ ಇರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಉದ್ಯಾನವನದಲ್ಲಿರುವ ಹುತಾತ್ಮರ ಸ್ಮಾರಕದ ಬಳಿ ಮಂಗಳವಾರ ನಿವೃತ್ತ ಯೋಧರು ವಿವಿಧ ಕ್ಷೇತ್ರಗಳ ಗಣ್ಯರು ಪುಷ್ಪಗುಚ್ಛ ಅರ್ಪಿಸಿ ಎರಡು ನಿಮಿಷ ಮೌನ ಆಚರಿಸಿ ನಮನ ಸಲ್ಲಿಸಿದರು.
ನಂತರ ಮಾತನಾಡಿದ ಮೇಜರ್ ಶಂಕರ್ ವಿ. ಬೋರ್ಗವಿ, ಈ ಭೂಮಿ ಮೇಲೆ ಜೀವಿಸುತ್ತಿರುವ ನಾವು ನಮ್ಮ ಜೀವಿತಾವಧಿಯಲ್ಲಿ ಸಮಾಜಕ್ಕೆ ನಾವು ಏನು ಕೊಡುಗೆ ಕೊಡಬಹುದು, ಈ ಸೊಸೈಟಿಯಲ್ಲಿ ಒಬ್ಬರೇ ನಿರ್ವಹಿಸಲು ಆಗುವುದಿಲ್ಲ. ಒಂದು ಬದ್ಧತೆ ಇರಬೇಕು.
ಎಲ್ಲದಕ್ಕೂ ಒಂದು ತಂಡ ಇದ್ದರೆ ಎಲ್ಲಾ ಒಟ್ಟು ಗೂಡಿ ಒಂದು ಒಳ್ಳೆಯ ಸಾಧನೆ ಮಾಡಬಹುದು.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಉದ್ಯಾನವನ ನಿರ್ಮಾಣಕ್ಕೂ ಒಂದು ತಂಡ ಕಾರಣ. ಅದೇ ರೀತಿ ಒಂದು ದೇಶದ ಅಭಿವೃದ್ಧಿಗೂ ಕೂಡ ಇಂತಹ ತಂಡಗಳ ಅವಶ್ಯಕತೆ ಇದೆ ಎಂದರು.
ಅದೇ ರೀತಿ ನಾವು ಎನ್.ಸಿ.ಸಿ. ಯಲ್ಲಿ ಒಂದು ರೇಫಲ್ ತರಬೇತಿ ಶಾಲೆ ಆರಂಭಿಸಿದ್ದೇವೆ. ಸಮಾಜಕ್ಕೆ ಒಂದು ಉತ್ತಮ ಕೆಲಸ ಮಾಡಬೇಕಾಗಿರುವ ಇಚ್ಛೆ ಇರಬೇಕು.
ಸಂಘದ ಗೌರವಾಧ್ಯಕ್ಷ ಅಸಿಸ್ಟೆಂಟ್ ಕರ್ನಲ್ ಬಿ. ದೊರೆರಾಜು ಮಾತನಾಡಿ, ಒಬ್ಬ ಮನುಷ್ಯನನ್ನು ಕಾಪಾಡಬೇಕು ಎಂದರೆ ದೇವರನ್ನು ನೆನಪಿಸಿಕೊಳ್ಳುತ್ತಾರೆ. ಮತೆ ವೈದ್ಯರ ನೆನಪು ಮಾಡಿಕೊಳ್ಳುತ್ತಾರೆ. ಅದೇ ರೀತಿ ನಮ್ಮ ರಕ್ಷಣೆ ಮಾಡುವಂತೆ ಯೋಧರನ್ನು ಕೂಡ ದೇವರೆಂದು ನೆನಪು ಮಾಡಿಕೊಳ್ಳುವುದನ್ನು ಕಾಣಬಹುದು. ನಮ್ಮ ದೇಶಕ್ಕಾಗಿ ಹೋರಾಟ ಮಾಡಿ ಪ್ರಾಣ ತ್ಯಾಗ ಮಾಡಿ ದೇಶದ ರಕ್ಷಣೆ ಮಾಡಿ ಬಲಿದಾನ ಮಾಡಿ ಅಮರರಾಗಿರುವವರನ್ನು ನೆನಪಿಸಿಕೊಳ್ಳುತ್ತೇವೆ.
ಅದೇ ರೀತಿ ಪ್ರತಿದಿನ ನೆನಪು ಮಾಡಿಕೊಳ್ಳಬೇಕು. ಬಾಂಗ್ಲಾದೇಶದ ಮೇಲೆ ನಡೆದಿದ್ದು, ಒಂದು ದೊಡ್ಡ ಯುದ್ಧ ಆ ಯುದ್ಧದಲ್ಲಿ ಮೂರು ಸೇನೆಗಳು ಸಕ್ರಿಯವಾಗಿ ಇಡೀ ಭಾರತದಲ್ಲಿ ರಕ್ಷಣೆಗೆ ಯುದ್ಧ ಮಾಡಿರುವುದು ಯಾವಾಗಲೂ ಇತಿಹಾಸದಲ್ಲಿ ಉಳಿದಿದೆ. ಬೇರೆ ದೇಶದ ರಕ್ಷಣೆಗಾಗಿ ನಾವು ಯುದ್ಧ ಮಾಡಬೇಕಾಯಿತು.
ಈ ರೀತಿ ಹೋರಾಟ ಮಾಡಿದ ಯೋಧರನ್ನು ಇಂದು ವಿಜಯ್ ದಿವಸದಲ್ಲಿ ನೆನಪಿಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ. ಮುಂದಿನ ಪೀಳಿಗೆಗೆ ಯೋಧರ ಹೋರಾಟ ಆದರ್ಶವಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಯೋಧರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಎಸ್. ಪ್ರದೀಪ್ ಸಾಗರ್, ಗೌರವಾಧ್ಯಕ್ಷ ದೊರೆರಾಜು, ಶರತ್ ಅಣ್ಣೇಗೌಡ, ಪುನೀತ್, ಉಪಾಧ್ಯಕ್ಷ ಡಾ. ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಡಿ.ಇ. ಸ್ವಾಮಿ, ಖಜಾಂಚಿ ಹೆಚ್.ಎ.ಲೋಕೇಶ್, ಸಂಚಾಲಕ ನಾರಾಯಣಸ್ವಾಮಿ, ಸಹ ಕಾರ್ಯದರ್ಶಿ ಶ್ರೀಧರ್, ತಾಲೂಕು ನಿರ್ದೇಶಕ ಕೃಷ್ಣೇಗೌಡ ಮೇಳೆಗೌಡ ಇತರರು ಉಪಸ್ಥಿತರಿದ್ದರು.
On Tuesday, retired soldiers and dignitaries from various fields paid their respects by offering floral tributes and observing a two-minute silence at the Martyrs’ Memorial in Field Marshal Cariappa Park near Kuvempu Road.










